ಕಲಬುರಗಿ ಜಿಲ್ಲೆಯ ರಟಕಲ್ ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳಿಂದ ಜನರಿಗೆ ನೀರು ಬೀಡದೆ ಇಲ್ಲಿನ ಪ್ರತಿನಿಧಿಗಳು ತಮ್ಮ ನಿರ್ಲಕ್ಷ ತೋರಿದ್ದಾರೆ. ಇದರಿಂದ ಬೇಸತ್ತ ಜನರು ಇಂದು ಕರ್ನಾಟಕ ಪ್ರಾಂತ ರೈತ ಸಂಘದ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ದನಕರುಗಳಿಗೆ ಸಾರ್ವಜನಿಕರಿಗೆ  ತುಂಬಾ ತೊಂದರೆಯಾಗಿದ್ದು, ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ. ಗ್ರಾಮ ಪಂಚಾಯಿತಿಗೆ ಬೀಗ ಹಾಕುತ್ತೇವೆ ಎಂದು ಮಹಿಳೆಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಇದನ್ನೂ ಓದಿ : ಹುಚ್ಚಾಟನ ರಂಪಾಟಕ್ಕೆ […]

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಮೂರಾಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ತಂತಿ ಬಿದ್ದು ನೀಲಗಿರಿ ತೋಪಿಗೆ ಬೆಂಕಿ ಹೊತ್ತಿ ಕೊಂಡಿದ್ದು ಅದನ್ನು ಆರಿಸಲು ಮಂಗಮ್ಮ ಎಂಬುವರು ಹೋದಾಗ ವಿದ್ಯುತ್ ತಂತಿಯನ್ನು  ತುಳಿದು  ಸಾವನ್ನಪ್ಪಿದ್ದಾರೆ.  ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ  ಗ್ರಾಮಸ್ಥರ  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಘ್ನಿದೇವನ ಕೋಪಕ್ಕೆ ಬಲಿಯಾದ ಪಶುಗಳು

ಗುಡಿಸಲಿಗೆ ಬೆಂಕಿ ಬಿದ್ದು ದನ ಕರುಗಳು ಸಜೀವ ದಹನವಾಗಿರುವ ಮನಕಲಕುವ  ಘಟನೆ ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರು ಗ್ರಾಮದಲ್ಲಿ ನಡೆದಿದೆ. ತೋಟದ ಗುಡಿಸಲಿಗೆ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಗುಡಿಸಲು ಸಂಪೂರ್ಣ ಸುಟ್ಟು ಹೋಗಿದೆ. ರೈತ ದಯಾನಂದ ಮರತೂರ ಅವರಿಗೆ ಸೇರಿದ ದನ ಕರುಗಳು ಪ್ರಾಣ ಕಳೆದುಕೊಂಡಿದ್ದೆ. ಇದನ್ನೂ ಓದಿ: ಸಿಡಿ ಲೇಡಿ ಬೆನ್ನಿಗೆನಿಂತ ರಾಜ್ಯ ಮಹಿಳಾ ಆಯೋಗ  

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಳ್ಳಿಮಾರನಹಳ್ಳಿ ಎಂಬ ಗ್ರಾಮದಲ್ಲಿ ನಾಪತ್ತೆಯಾಗಿದ್ದ  ಜೆಡಿಎಸ್ ಮುಖಂಡ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ 3 ದಿನಗಳ ಹಿಂದೆ ಕಾಣೆಯಾಗಿದ್ದ ಜೆಡಿಎಸ್ ಮುಖಂಡ ಕೆ.ನಾಗರಾಜು ಮೃತದೇಹ ನೆನ್ನೆ ಕನಕಪುರದ ಹುಲಿಬೆಲೆ ಎಂಬ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕನಕಪುರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ :1 ರಿಂದ 5ನೇ […]

ಜಮೀನಿನಲ್ಲಿ ಮಾರಾಟಕ್ಕೆಂದು ಸಂಗ್ರಹಿಸಲಾಗಿದ್ದ 7.977 ಗ್ರಾಂ. ಗಾಂಜಾವನ್ನು  ವಿಜಯಪುರ ಗ್ರಾಮೀಣ ಪೊಲೀಸರು ಜಪ್ತಿ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡಲು ಯತ್ನಿಸಿದ  ಮೂವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಡೋಮನಾಳ ದೊಡ್ಡಿ ಗ್ರಾಮದ  ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗಾಂಜಾದ ಬಗ್ಗೆ ಮಾಹಿತಿ ಪಡೆದ ವಿಜಯಪುರ ಪೊಲೀಸರು ದಾಳಿ ನಡೆಸಿ ಬಂಧಿತರಿಂದ 7.977 ಗ್ರಾಂ. ಗಾಂಜಾ, ಹೋಂಡಾ ಶೈನ್ ಬೈಕ್  ಅನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿತರನ್ನು ಜರಕ ಡೋಮನಾಳ, ಆಕಾಶ ಅನಿಲ್ ಬೊರಾಕರ್ […]

ಬಂಡೀಪುರ ಅರಣ್ಯ ವ್ಯಾಪ್ತಿಯ ಕುನಗಹಳ್ಳಿ ಗ್ರಾಮದ ಜನರ ನಿದ್ದೆ ಗೆಡಿಸಿದ್ದ ಚಿರತೆ ಕೊನೆಗೂ ಇಂದು ಬೋನಿಗೆ ಬಿದ್ದದೆ. ಸುಮಾರು 2-3 ದಿನದಿಂದ ಜಮೀನಿನಲ್ಲಿ ಚಿರತೆಯ ಹೆಜ್ಜೆಗುರುತು ಕಂಡು ಆತಂಕಕ್ಕೆ ಹೊಳಗಾಗಿದ್ದ ಗ್ರಾಮಸ್ಥರಿಗೆ ಬಿಗ್ ರಿಲೀಫ್ ಸಿಕ್ಕಿದಂತ್ತಾಗಿದೆ.   ಚಿರತೆ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿ RFO ನವೀನ್ ಕುಮಾರ್ ಚಿರತೆಗೆ ಚಕ್ರವ್ಯೂಹ ರಚಿಸಿ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್‌ಯಿಂದ ಬಂದ ಹ್ಯಾಕ್ ಚೋರರು ..!  

ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕಸಿಂಗನಗುತ್ತಿ ಗ್ರಾಮದ ಬಳಿ ನಡೆದಿದೆ.ಬೆಂಕಿ ಅವಘಡದಿಂದ ಜಮೀನಿನಲ್ಲಿದ್ದ ಪಿವಿಸಿ ಪೈಪುಗಳು,ಡ್ರಿಪ್ ಪೈಪ್ ಗಳು ಸಂಪೂರ್ಣ ಸುಟ್ಟು ಹೋಗಿದೆ.ಜೊತೆಗೆ ಶೇಂಗಾ,ತೊಗರಿ,ಕಡಲೆ ಬೆಳೆಗಳು ಸುಟ್ಟು ಹಾಳಾಗಿದೆ.ಅನೇಕ ತೆಂಗಿನ ಗಿಡಗಳು ನಿಂಬೆ ಗಿಡಗಳು ಪೇರಲ ಗಿಡಗಳು ನಾಶವಾಗಿದ್ದು, ರೈತ ಶ್ರೀಧರ್ ಬಾರಿಕೇರ್ ಹಾಗೂ ಅವರ ತಾಯಿ ಕಂಗಾಲಾಗಿದ್ದಾರೆ.ಇನ್ನು ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ […]

ರಸ್ತೆಯಲ್ಲಿ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿದ್ದ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಜಾರಿ ಬಿದ್ದು ಗಾಯಗಳಾಗಿವೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಎಳೆಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ, ಗುಟ್ಟೂರು ಗ್ರಾಮದ ಸುಬ್ರಮಣಿ ಬೈಕ್ ನಿಂದ ಬಿದ್ದು ಗಾಯಗಳಾದ ಹಿನ್ನೆಲೆ ಆಕ್ರೋಶಗೊಂಡ ಆತನ ತಂದೆ ಒಕ್ಕಣೆ ಮಾಡುತ್ತಿದ್ದ ಹುರುಳಿಗೆ ಬೆಂಕಿ ಹಚ್ಚಿದ್ದಾನೆ, ಸದ್ಯ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ರಾಬರ್ಟ್’ […]

ರೈತ ವಿರೋಧಿ ಕಾಯ್ದೆ ಹಾಗೂ ಮಾರುಕಟ್ಟೆ ತಿದ್ದುಪಡಿ ಕಾನೂನು ಹಿಂಪಡೆಯಲು ರಾಷ್ಟ್ರೀಯ ರಿಪಬ್ಲಿಕನ್ ಸೇನೆ ವತಿಯಿಂದ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘಟನಾಕಾರರು ನೀಲಿ ಶಾಲನ್ನು ಧರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕನಕ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಜಾಥಾ ನಡೆಸಿ, ದುಡಿದು ತಿನ್ನಲು ಆಗದ ರೀತಿಯಲ್ಲಿ ಇಂದು ಒಂದು ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾರಿಗೆ ತಂದಿರುವ ನೀತಿಯನ್ನು ಕೂಡಲೆ ರದ್ದು ಮಾಡಬೇಕು […]

ಕೃಷಿ ಕಾಯ್ದೆಗಳನ್ನು ಖಂಡಿಸಿ ಶನಿವಾರ ಕರ್ನಾಟಕ ಸಹಿತ ದೇಶವ್ಯಾಪಿಯಾಗಿ ರೈತ ಸಂಘಟನೆಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಂದ್‌ ನಡೆಸಲಿವೆ. ರಾಷ್ಟ್ರ ಮಟ್ಟದಲ್ಲಿ ಕಿಸಾನ್‌ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳು ಹೆದ್ದಾರಿ ಬಂದ್‌ನಲ್ಲಿ ಭಾಗಿ ಆಗಲಿದ್ದು, ರಾಜ್ಯದಲ್ಲಿ ಸಂಯುಕ್ತ ಹೋರಾಟ -ಕರ್ನಾಟಕ ವೇದಿಕೆ ಕಾರ್ಯಕರ್ತರು, ರೈತರ ಜತೆಗೂಡಿ ಹಲವು ಕಡೆ ರಸ್ತೆ ತಡೆ ನಡೆಸಲಿದ್ದಾರೆ. ಇನ್ನೂ ಉತ್ತರ, ಮಧ್ಯ ಕರ್ನಾಟಕ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ತಡೆ […]

Advertisement

Wordpress Social Share Plugin powered by Ultimatelysocial