ನವದೆಹಲಿ : ಕಳೆದ 24 ಗಂಟೆಗಳಲ್ಲಿ 1,409 ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ, ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ಒಂದೇ ದಿನದಲ್ಲಿ 1,409 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು 21,393 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 16,454 ಸಕ್ರಿಯ ಪ್ರಕರಣಗಳಾಗಿವೆ. ಇದುವರೆಗೆ 4,257 ಜನ ಚೇತರಿಸಿಕೊಂಡಿದ್ದು, ಒಂದು ದಿನದಲ್ಲಿ 388 ಜನ ಚೇತರಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ.  

ನವದೆಹಲಿ : ಕೇಂದ್ರ ಸರ್ಕಾರದಿಂದ ಮೇ.೩ರವರೆಗೆ ಘೋಷಣೆಯಾಗಿದ್ದಂತ ಲಾಕ್ ಡೌನ್ ಗೆ ಇದೀಗ ಇಂದಿನಿಂದಲೇ ಸಡಿಲಿಕೆ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ  ವೃದ್ಧಿಗೆ ಕ್ರಮ ಕೈಗೊಳ್ಳುವಂತ ತಿರ್ಮಾನವನ್ನು ಕೈಗೊಳ್ಳಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಪುನಿಯಾ ಶ್ರೀವಾಸ್ತವ, ಕೇಂದ್ರದಿಂದ ಲಾಕ್ ಡೌನ್ ಮತ್ತಷ್ಟು ಸಡಿಲ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ರ‍್ಥಿಕ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ, ತೋಟಗಾರಿಕೆಗೆ ಮತ್ತಷ್ಟು ಆದ್ಯತೆ ನೀಡಲಾಗುತ್ತಿದೆ […]

ಚಂಡೀಘಡ: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ಪತ್ರಕರ್ತರು ಕೂಡಾ ಹಗಲಿರುಳು ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಮನಗಂಡ ಹರಿಯಾಣ ಸರ್ಕಾರವು ಪ್ರತಿಯೊಬ್ಬ ಪತ್ರಕರ್ತರಿಗೆ ೧೦ ಲಕ್ಷ ರೂಪಾಯಿ ವಿಮೆಯನ್ನು ಘೋಷಿಸಿದೆ. ಭಾರತ ಲಾಕ್ ಡೌನ್ ಮಧ್ಯೆಯೂ ಕೊರೊನಾ ವೈರಸ್ ಕುರಿತು ಸುದ್ದಿಗಳನ್ನು ಮಾಡುವುದಕ್ಕಾಗಿ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ೧೦ ಲಕ್ಷ ರೂಪಾಯಿ ವಿಮೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಗ್ಯಾಂಗ್‌ಟಾಕ್: ಕರೋನವೈರಸ್‌ನಿಂದಾಗಿ ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಏಕೆಂದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವರ್ಷದ ಕೈಲಾಸ ಮಾನಸಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸಿಕ್ಕಿಂ ಪ್ರವಾಸೋದ್ಯಮ ಸಚಿವ ಬಿ ಎಸ್ ಪಂಥ್ ಮಾಹಿತಿ ನೀಡಿದ್ದು, ಈ ‘ಬಾರಿ ಮಾನಸ ಸರೋವರ ಯಾತ್ರೆಯೂ ಇರುವುದಿಲ್ಲ ಹಾಗೂ ನಾಥು ಲಾ ಪಾಸ್ (ರಸ್ತೆ) ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ಈ ವರ್ಷ ನಡೆಯುವುದಿಲ್ಲ’ ಎಂದಿದ್ದಾರೆ. ಪ್ರತಿ […]

ನವದೆಹಲಿ: ಲಾಕ್‌ಡೌನ್ ಮುಕ್ತಾಯಗೊಂಡ ನಂತರವೇ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಪುನರ್ ಆರಂಭಿಸುವ ಬಗ್ಗೆ ಎಲ್ಲ ಕ್ರೀಡಾಪಟುಗಳು ನಿರೀಕ್ಷೆಯಲ್ಲಿದ್ದಾರೆ. ಆದರೆ ಭಾರತದಲ್ಲಿ ಈ ರೀತಿ ಕ್ರೀಡಾ ಚಟುವಟಿಕೆಗಳನ್ನು ಏಕಾಏಕಿ ಪುನರಾರಂಭ ಮಾಡುವುದು ಸರಿಯಲ್ಲ. ಸದ್ಯ ಭಾರತದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ನಿರೀಕ್ಷಿಸಬೇಡಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ ಹೇಳಿದ್ದಾರೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಕೂಡ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ. ಮಾನವನ ಜೀವನವೇ ಅಪಾಯದಲ್ಲಿರುವಾಗ ಕ್ರೀಡೆಯ ಬಗ್ಗೆ ಚಿಂತಿಸುವುದು […]

ದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕ್ಷಾಮಾ, ಬರಗಾಲ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಎಲ್ಲಾ ದೇಶಗಳು  ಈಗಲೇ ಎಚ್ಚೆತ್ತುಕೊಂಡರೆ ಒಳಿತು ಇಲ್ಲದಿದ್ದರೆ ಭವಿಷ್ಯದಲ್ಲಿ ಹಸಿವಿನ ಸಾಂಕ್ರಾಮಿಕ ರೋಗಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ವಿಶ್ವ ಆಹಾರ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬಿಯಾಸ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರ್ಚುವಲ್ ಅಧಿವೇಶನದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಕ್ಷಾಮ ಎದುರಾಗದಂತೆ ಈಗಿನಿಂದಲೇ ನಾವು ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಜಗತ್ತಿನಾದ್ಯಂತ […]

ನವದೆಹಲಿ : ಕೊರೊನಾದಿಂದ ತತ್ತರಿಸಿದ ಜನತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಈ ಯೋಜನೆಯಡಿ ೩೧,೨೩೫ ಕೋಟಿ ರೂಪಾಯಿಯನ್ನು ಸುಮಾರು ೩೩ ಕೋಟಿ ಬಡವರ ಖಾತೆಗೆ ಜಮೆಮಾಡಲಾಗಿದೆ. ಈ ಕುರಿತಂತೆ ಕೇಂದ್ರದ ಹಣಕಾಸು ಇಲಾಖೆ ಮಾಹಿತಿ ನೀಡಿದ್ದು,ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನೀಡಲಾಗಿರುವ ೩೧,೨೩೫ ಕೋಟಿ ರೂಪಾಯಿ ಪ್ಯಾಕೇಜ್ ಪೈಕಿ ೨೦.೦೫ ಕೋಟಿ ಜನಧನ್ ಮಹಿಳಾ ಖಾತೆದಾರರಿಗೆ ೧೦ ಸಾವಿರದ ೦೨೫ ಕೋಟಿ […]

ನವದೆಹಲಿ : ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 3 ರ ನಂತರ ಭಾರತದಲ್ಲಿ ಇನ್ನೂ 10 ವಾರಗಳ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ವಿಶ್ವದ ಅತಿದೊಡ್ಡ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ನ ಸಂಪಾದಕ ರಿಚರ್ಡ್ ಹಾರ್ಟನ್ ಸಲಹೆ ನೀಡಿದ್ದಾರೆ.ಒಂದು ವೇಳೆ ಲಾಕ್ ಡೌನ್ ಸಡಿಲಗೊಳಿಸಿದರೆ ಕೊರೊನಾ ಸೋಂಕಿನ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ.ಈಗಿರುವ ಸ್ಥಿತಿಗಿಂತ ಗಂಭೀರ ಸ್ಥಿತಿಗೆ ಭಾರತ ತಲುಪಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ […]

ವಾಷಿಂಗ್ಟನ್: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಹಿನ್ನಲೆಯಲ್ಲಿ ಉತ್ತರ ಭಾರತದಲ್ಲಿ ಏರೋಸಾಲ್ ಪ್ರಮಾಣ ೨೦ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ನಾಸಾ ಹೇಳಿದೆ. ನಾಸಾದ ಸ್ಯಾಟಲೈಟ್ ಸೆನ್ಸಾರ್‌ನಲ್ಲಿ ಇದು ಪತ್ತೆಯಾಗಿದ್ದು, ಕಳೆದ ೨೦ ವರ್ಷಗಳಲ್ಲಿ ಭಾರತದಲ್ಲಿ ಏರೋಸಾಲ್ ಪ್ರಮಾಣ ಇಷ್ಟು ಕಡಿಮೆ ಆಗಿರಲಿಲ್ಲ. ಈಗ ಲಾಕ್‌ಡೌನ್ ಇರುವುದರಿಂದಾಗಿ ಫ್ಯಾಕ್ಟರಿಗಳು ಬಂದಾಗಿವೆ, ಬಸ್, ಕಾರು, ಟ್ರಕ್, ವಿಮಾನಗಳ ಸಂಚಾರ ಕೂಡ ಕಡಿಮೆಗೊಂಡಿರುವುದರಿಂದ ಇಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಕಡಿಮೆಯಾಗಲು ಸಾಧ್ಯವಾಗಿದೆ ಎಂದು ನಾಸಾ ಹೇಳಿದೆ. […]

ದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡ ಫೇಸ್‌ಬುಕ್, ವಿಶ್ವದ ಅತ್ಯಂತ ದೊಡ್ಡ ಕಂಪನಿಗಳ ಸಾಲಿಗೆ ಬಂದು ನಿಂತಿದೆ. ಸೋಶಿಯಲ್ ಮೀಡಿಯಾದ ದಿಗ್ಗಜ ಫೇಸ್‌ಬುಕ್ ಸಂಸ್ಥೆ, ರಿಲಯನ್ಸ್ ಜಿಯೋನಲ್ಲಿ ರೂ.೪೩,೫೭೪ ಕೋಟಿ ಹೂಡಿಕೆ ಮಾಡುವದರ ಮೂಲಕ ಶೇಕಡಾ ೯.೯೯ ಪಾಲನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಹೊಸ ಇತಿಹಾಸ ಬರೆದಿದೆ. ರಿಲಯನ್ಸ್ ಜಿಯೋನಲ್ಲಿ ಹೂಡಿಕೆ ಮಾಡುವುದರ ಮೂಲಕ ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದೆೆ. ವಿಶೇಷ ಅಂದ್ರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಯಾದ […]

Advertisement

Wordpress Social Share Plugin powered by Ultimatelysocial