ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್‌ಡೌನ್‌ನಿಂದ  ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳ ರಕ್ಷಣೆಗೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI) ಮ್ಯೂಚುಲ್ ಫಂಡ್‌ಗಳಿಗೆ ತನ್ನ ವಿಶೇಷ ಸೌಲಭ್ಯವನ್ನು  ವಿಸ್ತರಿಸಿದೆ. ಮ್ಯೂಚುಲ್ ಫಂಡ್‌ಗಳಿಗಾಗಿ ೫೦ ಸಾವಿರ ಕೋಟಿ ರೂಗಳ ವಿಶೇಷ ಸೌಲಭ್ಯ(ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ)ವನ್ನು ಇಂದು ಘೋಷಿಸಿದೆ. ಫ್ಲಾಂಕ್ಲಿನ್ ಟೆಂಪ್ಲೇಷನ್ ಸಂಸ್ಥೆ ತನ್ನ ಆರು ಮ್ಯೂಚಯಲ್ ಫಂಡ್ ಸೌಲಭ್ಯವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆರ್‌ಬಿಐಯ ಈ ಸೌಲಭ್ಯ ಪ್ರಕಟಿಸಿರುವುದು ಅನೇಕ ಸಂಸ್ಥೆಗಳಿಗೆ ವರದಾನವಾಗಿದೆ. […]

ನವದೆಹಲಿ: ಮೇ ೩ಕ್ಕೆ ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಇದಾದ ಬಳಿಕ ಏನು ಮಾಡಬೇಕು ಅನ್ನೋ ಬಗ್ಗೆ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೊನಾ ಕಡಿಮೆ ಇರುವುದು ನಿಜ. ಆದರೂ ಲಾಕ್‌ಡೌನ್ ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಕೈಗಾರಿಕೆ, ಕೆಲವು ವಸ್ತುಗಳ ವ್ಯಾಪಾರ ವಹಿವಾಟು […]

ಹೈದರಾಬಾದ್: ಆಂಧ್ರಪ್ರದೇಶ ಸಂಸದ ಡಾ. ಸಂಜೀವ್ ಕುಮಾರ ಅವರ ಕುಟುಂಬದ ಆರು ಜನರಿಗೆ ಕೋವಿಡ್-೧೯ ಸೋಂಕು ತಗಲಿರುವುದು ಧೃಢಪಟ್ಟಿದೆ. ಅವರ ೮೦ವರ್ಷದ ತಂದೆ, ಹೆಂಡತಿ, ಇಬ್ಬರು ಸಹೋದರರು ಹಾಗೂ ಇನ್ನಿಬ್ಬರು ಸೋಂಕಿತರಾಗಿದ್ದಾರೆ. ಈ ಸಂಬಂಧ ಸುದ್ಧಿಗಾರರೊಂದಿಗೆ ಮಾತನಾಡಿದ ಸಂಜೀವ್ ಕುಮಾರ ಸೋಂಕು ಧೃಢಪಟ್ಟಿರುವ ಆರು ಜನರೂ ಸ್ಥಿರವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಎಲ್ಲರೂ ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಯಮದಂತೆ ಪ್ರತ್ಯೇಕ ವಾಸದಲ್ಲಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮಗಳನ್ನು […]

ಕೊರೋನಾ ವೈರಸ್​​ನಿಂದ ಗುಜರಾತ್​ನ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಮೃತಪಟ್ಟಿದ್ದಾರೆ. ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವುದರಿಂದ ಅನೇಕರಿಗೆ ಆಹಾರಇಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಆಹಾರ ವಿತರಿಸಲು ಹೋಗಿದ್ದ ಬದ್ರುದ್ದೀನ್ ಶೇಖ್ ರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿತ್ತು. ಬಡವರಿಗೆ ಆಹಾರ ವಿತರಿಸುವಾಗಲೇ ಯಾರಿಂದಲೋ ಬದ್ರುದ್ದೀನ್ ಶೇಖ್​ಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 8 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. […]

ಕೊರೊನಾ ಹಿನ್ನಲೆ ಲಾಕ್‌ಡೌನ್‌ನಿಂದಾಗಿ ಚಾಲಕರು ಮನೆಯಲ್ಲಿಯೇ ಕೂರುವಂತಹ ಸ್ಥಿತಿ ಉಂಟಾಗಿದೆ. ಚಾಲಕ ವೃತ್ತಿಯನ್ನೇ ನಂಬಿಕೊಂಡಿದ್ದ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ ಅಭಿಯಾನ ಆರಂಭಿಸಿದ್ದಾರೆ.  ಲಾಕ್‌ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೆ ಸರ್ಕಾರಗಳು ನಿರ್ಲಕ್ಷö್ಯ ತೋರಿವೆ ಎಂದು ಸಮಗ್ರ ಚಾಲಕರ ಒಕ್ಕೂಟ ಬೃಹತ್ ಪ್ರತಿಭಟನೆ ಆರಂಭಿಸಿವೆ.  ಸಾರಿಗೆ […]

ಚೆನೈ: ದೇಶದೆಲ್ಲೆಡೆ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿದ್ದರು ಸಹಿತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಚೆನೈನ ತಿರುವಿಕಾ ನಗರದ ಒಂದೇ ಕುಟುಂಬದ ೧೫ ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಪಾಸಿಟಿವ್ ದೃಢಪಟ್ಟ ೧೫ ಮಂದಿ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು.

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನ ಭದ್ರಕಾಳಿ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ೧೦೦ಕ್ಕೂ ಅಧಿಕ ಮನೆಗಳನ್ನು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡದಿಂದ ಜೀವಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಆಸ್ತಿ-ಪಾಸ್ತಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಶನಿವಾರ ಮುಂಜಾನೆ ೯.೩೦ ಕ್ಕೆ ಸರಿಯಾಗಿ ಈ ಘಟನೆ ಭೀಮವಾಡಿ ಸ್ಲಂ ನಲ್ಲಿ ನದೆದಿದೆ. ಕಾರ್ಯಾಚರಣೆಗೆ ಬಂದಿದ್ದ ಕೆಲವೊಂದು ಅಗ್ನಿ ಶಾಮಕ ದಳದವರಿಗೆ […]

ನವದೆಹಲಿ: ಕೊರೊನಾ ವೈರಸ್ ಭೀತಿಯಲ್ಲಿ ಇರುವ ಜನರಿಗೆ ಅದರ ವಿರುದ್ಧ ಹೋರಾಡಲು ಪತ್ತೆಹಚ್ಚುವ ಉತ್ತಮ ಪರೀಕ್ಷಾ ಸೌಲಭ್ಯಗಳು ಇಲ್ಲದೇ ಹೋದರೆ ಕೋವಿಡ್-೧೯ ಸವಾಲುಗಳನ್ನು ಜಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಯೆಸ್ ಬ್ಯಾಂಕ್- ಡಿಎಚ್ ಎಫ್ ಎಲ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಡಿಎಚ್ ಎಫ್ ಎಲ್ ಪ್ರಮೋರ‍್ರಾದ ಕಪಿಲ್ ಹಾಗೂ ಧೀರಜ್ ವಾಧ್ವಾನ್ ಅವರನ್ನು ಸಿಬಿಐ ವಶಕ್ಕೆ ಪಡೆಯಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಭಾನುವಾರ ಹೇಳಿದ್ದಾರೆ. ಸಿಬಿಐ ತಂಡವು ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಸತಾರಾ ಪೊಲೀಸರು ಅವರಿಗೆ ಎಲ್ಲ ಅಗತ್ಯ ನೆರವು ನೀಡಿದ್ದಾರೆ. ಲಿಖಿತವಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ […]

ದೆಹಲಿ: ಎರಡನೇ ಹಂತದಲ್ಲಿ ಲಾಕ್‌ಡೌನ್ ಮುಂದುವರೆಸಿದರು ಸಹಿತ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿಲ್ಲ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅರವಿಂದ ಕೇಜ್ರಿವಾಲ್ ಸರ್ಕಾರ ಕೂಡ ಮೇ ೧೮ರವೆಗೆ ಲಾಕ್‌ಡೌನ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.  ದೆಹಲಿ ಸರ್ಕಾರದಂತೆ ಮಹಾರಾಷ್ಟç, ಮಧ್ಯಪ್ರದೇಶ, ಬಂಗಾಳ, ಪಂಜಾಬ್ ಮತ್ತು ಓಡಿಶಾ ಈ ೫ ರಾಜ್ಯಗಳು ಕೂಡಾ ಲಾಕ್‌ಡೌನ್ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Wordpress Social Share Plugin powered by Ultimatelysocial