ಟ್ಯಾಂಕರ್ ಮತ್ತು ದ್ವಿಚಕ್ರವಾಹನದ ನಡುವೆ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ತಿಪಟೂರು ತಾಲ್ಲೂಕು ವೈ.ಟಿ.ರಸ್ತೆಯ ಹೆಡಗರಹಳ್ಳಿ ಬಳಿ ನಡೆದಿದೆ…ಸತತ 9 ತಿಂಗಳಿನ ನಂತರ ಆರಂಭಗೊಂಡಿರುವ ಕಾಲೇಜಿಗೆ ವಿದ್ಯಾರ್ಥಿ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು,ಶಶಾಂಕ್ (20) ಸ್ಥಳದಲ್ಲೇ ಸಾವನ್ನಪಿದ್ದಾನೆ… ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಡಿಪ್ಲಮೋ ವ್ಯಾಸಂಗ ಮಾಡುತ್ತಿದ್ದ ಯುವಕ ಮೃತಪಟ್ಟಿದ್ದು ತಿಪಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…. ಇದನ್ನೂ ಓದಿ :ದೆಹಲಿಯಲ್ಲಿ ಚಿಕನ್ ಮಾರಾಟ ನಿಷೇಧ.!

ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಗಳು ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿ ಅಥವಾ ಸಂಸ್ಕರಿಸಿದ ಕೋಳಿಗಳ ಮಾರಾಟ ಮತ್ತು ಸಂಗ್ರಹಣೆಯನ್ನು ಇಂದು ನಿಷೇಧಿಸಿವೆ. ಮೊಟ್ಟೆ ಆಧಾರಿತ ಖಾದ್ಯಗಳು ಅಥವಾ ಕೋಳಿ ಮಾಂಸವನ್ನು ಗ್ರಾಹಕರಿಗೆ ನೀಡಿದರೆ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ಮಾಲೀಕರು ಕ್ರಮ ಎದುರಿಸಬೇಕಾಗುತ್ತದೆ. ಎಂದು ಎನ್ ಡಿಎಂಸಿ ಮತ್ತು ಎಸ್ ಡಿಎಂಸಿ ತಿಳಿಸಿದೆ. ಇದನ್ನೂ ಓದಿ :ಅರುಣಾಚಲ ಪ್ರದೇಶದ ಗಡಿಗೆ ಸಂಬಂಧ

ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ  ವಿವಾದವಿದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದೆ. ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿದೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತಿದೆ. ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್‌ ಬಳಿ ಸಂಭವಿಸಿದೆ. ತಡ ರಾತ್ರಿ ಏಂ 53 ಒಆ 4411 ಐಟ್ವೆಂಟಿ ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಗಾಜು ಪುಡಿ ಪುಡಿಯಾಗಿದ್ದು ಕಾರು ನಜ್ಜುಗುಜ್ಜಾಗಿದೆ.ಘಟನೆಯಲ್ಲಿ ಬೆಂಗಳೂರು […]

ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5 ರವರೆಗೆ ನಡೆಯಲಿರುವ ಏರೋ ಇಂಡಿಯಾ 2021 ವೈಮಾನಿಕ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಭಾರತೀಯ ಸೇನೆಯ ಪ್ರಮುಖ ಅಸ್ತ್ರಗಳಾಗಿರುವ ರಫೇಲ್ ಯುದ್ಧವಿಮಾನಗಳು ಮತ್ತು ವಿವಿಧ ಹೆಲಿಕಾಪ್ಟರ್ ಗಳು ಜಂಟಿಯಾಗಿ ಕಸರತ್ತು ನಡೆಸಲಿವೆ. ಕೋವಿಡ್-19 ಆತಂಕದ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸಾದ್ಯತೆಇದೆ. ಕಳೆದ ಬಾರಿ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಬೆಂಕಿ ನಿಂದಿಸಲು 2 […]

ಐಷಾರಾಮಿ ರೆಸಾರ್ಟ್ ಗೆ ಬಂದಿದ್ದ ಕಾಡಾನೆಯನ್ನು ಓಡಿಸಲು ಕೆಲಸಗಾರರು ಟೈರ್ ಗೆ ಬೆಂಕಿ ಹಚ್ಚಿ ಅದರ ಮೇಲೆ ಎಸೆದಿದ್ದರು. ಟೈರ್ ನೇರವಾಗಿ ಆನೆಯ ನೆತ್ತಿ ಮೇಲೆ ಸಿಕ್ಕಿ ಹಾಕಿಕೊಂಡಿತ್ತು. ಈ ವೇಳೆ ಅಲ್ಲಿಂದ ಓಡಿ ಹೋದ ಆನೆ ದೂರದ ಕಾಡಿನಲ್ಲಿ ಸತ್ತು ಹೋಗಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ಬಳಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಆನೆಯೊಂದು ರೆಸಾರ್ಟ್ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಟ್ ನೋಡಿಕೊಳ್ಳುತ್ತಿದ್ದ ಪ್ರಶಾಂತ್ […]

ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿ ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೆರುಮ, ಚನ್ನಿಗನ ಪತ್ತೆಗಾಗಿ ಕನಕಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದು, ಆರೋಪಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದನ್ನೂ ಓದಿ :ಭಾರತದಲ್ಲಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ

ದೇಶದಲ್ಲಿ ದಿನ ಕಳೆದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತಷ್ಟು ತುಟ್ಟಿಯಾಗುತ್ತಿದೆ. ಇಂದು ಕೂಡ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಭಾರೀ ಏರಿಕೆ ಮಾಡಿವೆ. ಈ ಮೂಲಕ ತೈಲ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಪ್ರತೀ ಲೀಟರ್ ಪೆಟ್ರೋಲ್ ದರ ರೂ.88.59ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ರೂ.80.47ಕ್ಕೆ ತಲುಪಿದೆ ಇದನ್ನೂ ಓದಿ :ಅಮೆರಿಕದ ಖ್ಯಾತ ನಿರೂಪಕ ಲ್ಯಾರಿ ನಿಧನ

ಜಗತ್ತಿನ ಗಣ್ಯರು, ಚಿತ್ರ ತಾರೆಯರನ್ನು ವಿಶಿಷ್ಟ ಶೈಲಿಯ ಸಂದರ್ಶನ ನಡೆಸಿ ಕಳೆದ 50 ವರ್ಷಗಳಿಂದ ಜನರನ್ನು ರಂಜಿಸಿದ್ದ ಅಮೆರಿಕದ ಖ್ಯಾತ ಟಿವಿ ನಿರೂಪಕ ಲ್ಯಾರಿ ಕಿಂಗ್ ಮೃತಪಟ್ಟಿದ್ದಾರೆ. ಕಳೆದೊಂದು ವಾರದಿಂದ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಅಮೆರಿಕದ ಸೆಡರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ ಕೊನೆಯುಸಿರು ಏಳೆದಿದ್ದಾರೆ. ಕ್ಯಾರಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ :ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿದ  ಚಾಲಕ -ಮಾನವೀಯತೆ ಮೆರೆದ […]

ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ. ಇಂದು ಬೆಳಗಿನ ಜಾವ ಹೈದ್ರಾಬಾದ್​ನಿಂದ ವಿಜಯಪುರಕ್ಕೆ ಬಂದ ಬಸ್​ನಲ್ಲಿ ಪತ್ರಕರ್ತ ಚಂದ್ರಕಾಂತ್​ ಮಾವೂರ ಚೈನ್ ಕಳೆದುಕೊಂಡಿದ್ರು. ಆ ಚೈನ್ ನಿರ್ವಾಹಕರಿಗೆ ದೊರಕಿತ್ತು.  ಈ ವೇಳೆ ಆ ಬಸ್​ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ಪ್ರಯಾಣಿಕರ ರಿಸರ್ವೇಶನ್ ಟಿಕೆಟ್​ನಲ್ಲಿನ ನಂಬರ್​ಗೆ ಕರೆ ಮಾಡಿ […]

Advertisement

Wordpress Social Share Plugin powered by Ultimatelysocial