ನ್ಯೂ ಇಯರ್ ವೇಳೆ ಹೆಚ್ಚಿನ ಹಣಕ್ಕೆ ಗಾಂಜಾವನ್ನು ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಆರೋಪಿಗಳನ್ನು ಅಮೃತ್ ಹಳ್ಳಿ ಸಿಸಿಬಿ ಪೊಲೀಸ್ ಭರ್ಜರಿ ಭೇಟೆ ನಡೆಸಿ ಬಂಧಿಸಿದ್ದಾರೆ…ಸಾಫ್ಟವೇರ್ ಉದ್ಯೋಗಿಗಳು ,ಕಾಲೇಜು ವಿಧ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿದ್ದ ಆಸಾಮಿಗಳು.ಸಿಸಿಬಿ ದಾಳಿ ವೇಳೆ 1 ಕೋಟಿ,15 ಲಕ್ಷ ಬೆಲೆಬಾಳುವ 5kg 600 ಗ್ರಾಂ ಹ್ಯಾಶಿಶ್ ಆಯಿಲ್,3 ಕೇಜಿ 300 ಗ್ರಾಂ ಗಾಂಜ,4 ಮೊಬೈಲ್, 1 ತೂಕದ ಯಂತ್ರ, 1 ಕಾರು,1 ದ್ವಿಚಕ್ರ ವಾಹನ, 5500 ನಗದ […]

ಸರ್ಕಾರ SC ST ವಿದ್ಯಾರ್ಥಿಗಳಿಗೆ ಸ್ಕಾಲರ್ಸಿಫ್ ನಿಲ್ಲಿಸಿರುವುದನ್ನ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು… ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಹಾಗು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು…ನಂತರ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾ ಆಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಇದನ್ನೂ ಓದಿ:1 ಲಕ್ಷ 25 ಸಾವಿರ ಬೆಲೆ ಬಾಳುವ ಬೈಕ್ ವಶ […]

ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಪೊಲೀಸರು ಯಶ್ವಸಿ ಕಾರ್ಯಾಚರಣೆ ನಡೆಸಿ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ…ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಸುಮಾರು 1 ಲಕ್ಷ,25 ಸಾವಿರ ಬೆಲೆ ಬಾಳುವ 4 ಮೋಟಾರ್‌ ಬೈಕ್‌, 2 ಸೈಕಲ್ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ… ಇದನ್ನೂ ಓದಿ:ಎರಡು ಟ್ರಕ್ ಗಳ ನಡುವೆ ಭೀಕರ ಅಪಘಾತ

ಎರಡು ಟ್ರಕ್ ಗಳ ನಡುವೆ ಭೀಕರ ಅಪಘಾತ ನಡೆದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ಇನ್ನು ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಈ ಅವಘಡದಿಂದ ಕಳೆದ ಅರ್ಧ ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅಪಘಾತ ನಡೆದ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಗೃಹ ರಕ್ಷಕ ದಿನ ಆಚರಣೆ

ಗೃಹರಕ್ಷಕ ದಳ ದಿನಾಚರಣೆಯನ್ನು ಕಲಬುರಗಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾ ಪೊಲೀಸ್ ಅಧ್ಯಕ್ಷರಾದ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಭಾಗಿಯಾಗಿದ್ದರು..ಗೃಹ ರಕ್ಷಕರ ಕಾರ್ಯ ವೈಕರಿ ಬಗ್ಗೆ ಮಾತನಾಡಿ ಭೀಮಾ ನದಿಯ ಪ್ರವಾಹ ಸಂದರ್ಭದಲ್ಲಿ ಜನರ ಜೀವ, ಆಸ್ತಿ ರಕ್ಷಣೆ ಮಾಡಿ ಉತ್ತಮವಾಗಿ ಪ್ರವಾಹ ಕರ್ತವ್ಯ ನಿರ್ವಹಿಸಿದ ಗೃಹ ರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:ಮೊನ್ನೆ ಚಿರತೆ, ಇಂದು ಕರಡಿ […]

ಗಂಗಾವತಿಯಲ್ಲಿ ಸುತ್ತಮುತ್ತಲು ಹೆಚ್ಚುತ್ತಿರುವ ಚಿರತೆ ಮತ್ತು ಕರಡಿ ಹಾವಳಿ, ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತೆ, ಸಾರ್ವಜನಿಕರ ಆಕ್ರೋಶ ಮೊನ್ನೆ ಚಿರತೆ, ಇಂದು ಕರಡಿ ಪ್ರತ್ಯಕ್ಷವಾಗಿದೆ. ಜನಗಳು ಆತಂಕಕ್ಕೆ ಈಡಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಡೆದಿದೆ.ಅಲ್ಲದೇ ಗಂಗಾವತಿ ಸುತ್ತಮುತ್ತ ಚಿರತೆ ಮತ್ತು ಕರಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಒತ್ತಾಯಿಸಿದರೂ ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದರೆ. ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಾಲುವೆ ಈಜಲು […]

ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮ ಹೊರವಲಯದಲ್ಲಿ ನಡೆದಿದೆ.. ನಾಪತ್ತೆಯಾದ ವ್ಯಕ್ತಿಗಳು ಕಲಬುರಗಿ ಮೂಲದ ವೆಂಕಟೇಶ್ ಹಾಗೂ ಬಾಬು ಎಂದು ಹೇಳಲಾಗುತ್ತಿದೆ.ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ…! ಇದನ್ನೂ ಓದಿ:ಮತ್ತೆ ಮಮ್ಮಿಯಾದ ಕರೀನಾ

ಖಾನ್ ಕುಟುಂಬದ ಬಹೂ, ನಟಿ ಕರೀನಾ ಕಪೂರ್ ತಮ್ಮ ಅಭಿಮಾನಿಗಳಿಗೆ ಮತ್ತೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.. ಈಗಾಗ್ಲೇ ತೈಮೂರ್ ಅಲಿ ಖಾನ್ ಅನ್ನೋ ಮುದ್ದಾದ ಗಂಡು ಮಗುವಿನ ತಾಯಿಯಾಗಿರುವ ಕರೀನಾ, ಇದೀಗ ಮತ್ತೆ ಗರ್ಭವತಿಯಾಗಿದ್ದಾರೆ.. ಈ ಸಿಹಿ ಸುದ್ದಿಯನ್ನ ಸ್ವತಃ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಪ್ಯೂಮಾ ಬ್ರ್ಯಾಂಡ್ ಪ್ರೊಮೋಶನ್ ಸಮಯದಲ್ಲಿ ತೆಗೆದುಕೊಂಡಿರುವ ಎರಡು ಫೋಟೋಗಳನ್ನ ಪೋಸ್ಟ್ ಮಾಡಿರುವ ಕರೀನಾ, ಆ ಫೋಟೋಗಳ ಜೊತೆಗೆ ಟೂ ಆಫ್ ಅಸ್ […]

ಕೋಡಿಹಳ್ಳಿ ಚಂದ್ರಶೇಖರ್ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಮುಖಂಡರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಹಲವರು ಮುಷ್ಕರ ಮುಂದುವರೆಸಿದ್ದಾರೆ. ರಾಜ್ಯದ ಜನರು ಈ ದೊಂಬರಾಟವನ್ನು ಗಮನಿಸುತ್ತಿದ್ದಾರೆ ಇಲಾಖೆಗೆ ಸಂಬಂಧಿಸದ ವ್ಯಕ್ತಿಯೊಬ್ಬ ಸ್ವಪ್ರತಿಷ್ಠೆಗಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇದರ ಹಿಂದಿನ ಕೈವಾಡದ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು, […]

ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ […]

Advertisement

Wordpress Social Share Plugin powered by Ultimatelysocial