ವಿಶಾಖಪಟ್ಟಣಂನಲ್ಲಿ ಪಾಲಿಮರ್ ವಿಷ ಅನಿಲ ಸೋರಿಕೆ ಪ್ರಕರಣ ಹಿನ್ನೆಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಟೀಮ್ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ. ಗ್ಯಾಸ್ ಸೋರಿಕೆಯಿಂದಾಗಿರುವ ಬಗ್ಗೆ ಮಾಹಿತಿಗಳನ್ನು ಪಡೆದಿರುವ ಪ್ರಧಾನಿ ಮೋದಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇನ್ನು ಮೀಟಿಂಗ್ನಲ್ಲಿ ಗೃಹ ಮಂತ್ರಿ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇನ್ನಿತರ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ವಿಷ ಅನಿಲ […]

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಂದೇ ಒಂದು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಬಾಗಲಕೋಟೆಯಲ್ಲಿ ಒಟ್ಟಾರೆ 13 ಕೇಸ್​ಗಳು, ಬೆಂಗಳೂರಿನಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಹಾಗೂ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಕೋವಿಡ್-19 ವೈರಸ್ ಪತ್ತೆಯಾದ ಹಿನ್ನೆಲೆ ಬಾದಾಮಿ ತಾಲೂಕಿನ ಡಾಣಕ್ ಶಿರೂರು ಗ್ರಾಮ ಸೀಲ್ ಡೌನ್ ಆಗಿದೆ. ಈ ಹಿನ್ನೆಲೆ ಶಾಸಕ ಸಿದ್ದರಾಮಯ್ಯ ಪಕ್ಷದ ಆಪ್ತರಿಗೆ  ದೂರವಾಣಿ ಮೂಲಕ ದಿನನಿತ್ಯದ ವಸ್ತುಗಳನ್ನು ವಿತರಿಸುವಂತೆ ಆದೇಶಿಸಿದ್ದಾರೆ. ಕ್ಷೇತ್ರದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಡಾಣಕಶಿರೂರ ಗ್ರಾಮದ ಜನರಿಗೆ ತೊಂದರೆ ಆಗಬಾರದು. ಹೀಗಾಗಿ ಸಾರ್ವಜನಿಕರಿಗೆ ಧವಸ ಧಾನ್ಯಗಳ ಕಿಟ್ ಹಂಚಲು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಡಿದ ಕಾಂಗ್ರೆಸ್ ಕಾರ್ಯಕರ್ತ ಹೊಳೆಬಸು ಶೆಟ್ಟರ್ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ […]

ನವದೆಹಲಿ: ಕೊರೊನಾ ವೈರಸ್‌ನಿಂದ ದೂರವಿರಲು ಆರೋಗ್ಯ ಸೇತು ಆ್ಯಪ್ ಬಳಸಿ ಎಂದು ಕೇಂದ್ರ ಸರ್ಕಾರ ಈ ಮೊದಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿತ್ತು. ಬಳಿಕ ಇದನ್ನು ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿ ಆದೇಶಿಸಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಆರೋಗ್ಯ ತೆರಳಬೇಕೆಂದರೆ ಆರೋಗ್ಯ ಸೇತು ಆ್ಯಪ್ ಹೊಂದಿರಲೇಬೇಕು. ಅದರಲ್ಲಿ ವಿವರಗಳನ್ನು ದಾಖಲಿಸಿದ ಬಳಿಕ ಅದು ನೀವು ಸುರಕ್ಷಿತವೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಸುರಕ್ಷಿತ ಅಥವಾ ಅಪಾಯ ಕಡಿಮೆ ಎಂದು ತೋರಿಸಿದರಷ್ಟೇ ಕೆಲಸಕ್ಕೆ ತೆರಳಬೇಕು […]

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಮದ್ಯ ಖರೀದಿಯ ಕಾಸ್ಟ್ಲೀ ಬಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಿನ್ನೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಅಲ್ಲದೇ ಒಬ್ಬ ವ್ಯಕ್ತಿಗೆ ಇಂತಿಷ್ಟು ಮದ್ಯ ಮಾರಾಟ ಮಾಡಬೇಖು ಎಂದು ನಿಗದಿ ಮಾಡಲಾಗಿತ್ತು. ಇದೇ ವೇಳೆ ಬೆಂಗಳೂರು ನಗರದೆಲ್ಲೆಡೆ ಮದ್ಯ ಖರೀದಿಗೆ ಪಾನ ಪ್ರಿಯರು ಮುಗಿ ಬಿದ್ದಿದ್ದರು. ಈ ಎಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 52,800 ರೂ.ಗಳ ಮದ್ಯದ ಖರೀದಿ ಬಿಲ್ ಪೋಟೋ […]

ಲಾಕ್ ಡೌನ್ ಇನ್ನು ಎರಡು ವಾರಗಳ ಕಾಲ ಮುಂದೂಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ದೇಶದೆಲ್ಲೆಡೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಕರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ 35,365ಕ್ಕೆ ಏರಿದ್ದು, ಸಾವಿನ ಸಂಖ್ಯೆ 1,152ಕ್ಕೇರಿದೆ. ಕಳೆದ 24 ಗಂಟೆಯಲ್ಲಿ 1993 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶಾದ್ಯಂತ ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇನ್ನು ರೆಡ್ ಜೋನ್ ಗಳಲ್ಲಿ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ […]

ನಿನ್ನೆ ಬಾಲಿವುಡ್ ರೋಮ್ಯಾಂಟಿಕ್ ಹೀರೋ ರಿಷಿ ಕಪೂರ್ ನಿಧನ ಸುದ್ದಿ ಕೇಳಿ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು. ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ಅಷ್ಟೇ ಅಲ್ಲ ದೇಶದ ದೊಡ್ಡ ದೊಡ್ಡ ಗಣ್ಯರು ಕಂಬನಿ ಮಿಡಿದಿದ್ರು. ಎಲ್ಲ ಗಣ್ಯರು ರಿಷಿ ಕಪೂರ್ ಜೊತೆಗಿನ ಹಲವಾರು ನೆನಪುಗಳನ್ನು ಹಂಚಿಕೊಂಡ್ರು. ಈ ಮಧ್ಯೆ ನಟ ಶಾರುಖ್ ಖಾನ್  ಹಂಚಿಕೊಂಡ ಕೆಲ ಭಾವನಾತ್ಮಕ ನೆನಪುಗಳು ಎಲ್ಲರ ಮನಸಲ್ಲಿ ರಿಷಿ ಕಪೂರ್ ಅವರನ್ನ ಜೀವಂತವಾಗಿರಿಸಿದೆ. ರಿಶಿ ಕಪೂರ್ ಅಭಿನಯದ […]

ಮೀರ್ ಪುರ್: ಕೊರೋನಾ ಲಾಕ್ ಡೌನ್ ದೇಶಾದ್ಯಂತ ಹಲವು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಈ ಸಂಕಷ್ಟದ ನಡುವೆಯೇ ಉತ್ತರ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತಾನು 100 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದರೂ ಮದುವೆ ದಿನಾಂಕ ಬದಲಿಸದೇ ಒಬ್ಬಂಟಿಯಾಗಿ 100 ಕಿ.ಮೀ. ಸೈಕಲ್ ತುಳಿದು ತಾನು ಮದುವೆ ಯಾಗಬೇಕಾಗಿರುವ ಹುಡುಗಿಯ ಮನೆ ತಲುಪಿದ್ದಾನೆ. ಉತ್ತರ ಪ್ರದೇಶದ ಹಮೀರ್‌ಪುರ್ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ ಅವರು, ಏಪ್ರಿಲ್ 25 ರಂದು ತಮ್ಮ ಮದುವೆಗೆ […]

ನವದೆಹಲಿ:ದೇಶವನ್ನು ಕಾಡುತ್ತಿರುವ ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅನೇಕ ಮಾರ್ಗೋಪಾಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಸಂಸ್ಥೆಗಳಿಗೆ ರತ್ನಗಂಬಳಿ ಸ್ವಾಗತ ನೀಡಲು ಪೂರಕವಾದ ವಾತಾವರಣ ನಿರ್ಮಿಸುವಂತೆ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಹಣಕಾಸು ಮತ್ತು ವಾಣಿಜ್ಯ ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಕೊಡುಗೆ ನೀಡಿ ಅಪಾರ ಸಾವುನೋವಿಗೆ ಕಾರಣವಾಗಿರುವ ಚೀನಾ […]

ಇಂದು ಬೆಳಿಗ್ಗೆ ವಿಧಿವಶರಾಗಿದ್ದ ನಟ ರಿಷಿ ಕಪೂರ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಇನ್ನು ಅಂತ್ಯಕ್ರಿಯೆಯಲ್ಲಿ ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್, ಸಹೋದರ ರಣಧೀರ್ ಕಪೂರ್, ಕರಿನಾ ಕಪೂರ್, ಸೈಫ್ ಅಲಿಖಾನ್, ಅನಿಲ್ ಅಂಬಾನಿ, ಅಯಾನ್ ಮುರ‍್ಜಿ, ಅಲಿಯಾ ಭಟ್, ಅಭಿಷೇಕ್ ಬಚ್ಚನ್ […]

Advertisement

Wordpress Social Share Plugin powered by Ultimatelysocial