ಬೆಂಗಳೂರು : ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಟ್ವೀಟ್  ಮಾಡಿರುವ ಅವರು, “ಕಾಂಗ್ರೆಸ್ ನವು ಕಾರ್ಮಿಕರ ಬಸ್ ಚಾರ್ಜ್ , ಟ್ರೈನ್ ಚಾರ್ಜ್ ಕೊಡ್ತೀವಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಜಾಹೀರಾತನ್ನೂ ಸಹ ಕೊಟ್ಟಿದ್ದಾರೆ. ಜಾಹೀರಾತು ನೋಡಿದ್ರೆ ಇದು ಬಯಲುನಾಟಕ ಎಂದೆನಿಸುತ್ತದೆ. ಯಾರಿಗೆ ಕೊಡಬೇಕೋ ಅವರಿಗೆ ಹಣ ಕೊಡಲಿ. ಅದು ಬಿಟ್ಟು ಊರೆಲ್ಲಾ […]

ನಟಿ ಶ್ರೀದೇವಿಯ ಸೌಂದರ್ಯಕ್ಕೆ ಕೋಟ್ಯಂತರ ಅಭಿಮಾನಿಗಳು. ಅವರು ಅಗಲಿದ್ದರೂ ಸಹ ಅವರ ಸೌಂದರ್ಯ ಕಣ್ಣಿನಿಂದ ಮರೆಯಾಗಿಲ್ಲ. ಶ್ರೀದೇವಿ ಅವರ ಸಿನಿ ಪಯಣದ ಆರಂಭದ ದಿನಗಳಲ್ಲಿ ಅವರ ಸೌಂದರ್ಯಕ್ಕೆ ಮಾರುಹೋದವರೆಷ್ಟೋ. ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ, ನಟ-ನಿರ್ದೇಶಕರೂ ಸಹ ಶ್ರೀದೇವಿ ಅವರ ಅಭಿಮಾನಿಗಳಾಗಿದ್ದರು. ಆದರೆ ಅಂತಹ ಸುರ ಸುಂದರಿಯನ್ನು ವಿವಾಹವಾಗುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದರೂ ಸಹ ಬೇಡ ಎಂದು ದೂರ ಸರಿದಿದ್ದರಂತೆ ಖ್ಯಾತ ನಟ ಕಮಲ್ ಹಾಸನ್. ಕಮಲ್ ಹಾಸನ್-ಶ್ರೀದೇವಿ […]

ಕಾರ್ಮಿಕರ ದಿನದಂದು ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ದರ್ಶನ್ ಅಭಿಮಾನಿಗಳಿಗೆ ರಾಬಟ್ ಚಿತ್ರತಂಡ ಗುಡ್‌ನ್ಯೂಸ್ ಕೊಟ್ಟಿದೆ. ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ, ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ತೆರೆಗೆ ಬರುವುದನ್ನೇ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ರಾಬರ್ಟ್ ಚಿತ್ರತಂಡದಿAದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮೇ ೧ ರಂದು ವಿಶ್ವ ಕಾರ್ಮಿಕರ ದಿನದ ಅಂಗವಾಗಿ ರಾಬರ್ಟ್ ಚಿತ್ರತಂಡ ಸ್ಪೆಷಲ್ ವಿಡಿಯೋ ಒಂದನ್ನ ರಿಲೀಸ್ ಮಾಡ್ತಿದೆ. ತೆರೆಯ ಹಿಂದೆ ಶ್ರಮಿಸಿರೋ ಕಾರ್ಮಿಕರಿಗೆ […]

ಪ್ಯಾರಿಸ್: ಡೆಡ್ಲಿ ಕೊರೊನಾದಿಂದ ಜಗತ್ತಿನ ೧೯೩ ದೇಶಗಳಲ್ಲಿ ೨೮,೬೪,೦೭೦ಕ್ಕಿಂತಲೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ ಕೊರೊನಾ ಸೋಂಕಿನಿAದ ಮೃತಪಟ್ಟವರ ಸಂಖ್ಯೆ ೨೦೦,೭೩೬ಕ್ಕೆ ಏರಿಕೆಯಾಗಿದ್ದು, ೭೭೨,೯೦೦ಜನ ಸೋಂಕಿತರು ಗುಣಮುಖರಾಗಿದ್ದಾರೆ.  ವಿಶ್ವದಲ್ಲಿ ಕೊರೊನಾದಿಂದಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಎರಡನೇ ಸ್ಥಾನದಲ್ಲಿ ಇಟಲಿ ಇದೆ. ಚೀನಾದಲ್ಲಿ ಒಟ್ಟು ೮೨,೮೧೬ ಪ್ರಕರಣಗಳು ವರದಿಯಾಗಿದ್ದು, ೪,೬೩೨ಜನ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಮಾಜಿ ಸಿಎಂ  ಸಿದ್ದರಾಮಯ್ಯ ಟ್ವೀಟ್ ಮೂಲಕ  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ”ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.

ಗದಗ: ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಪಾದರಾಯನಪುರ ಆರೋಪಿಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಗ್ರೀನ್ ಝೋನ್ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದ್ದು ತಪ್ಪು. ಹಾಗಾಗಿ ರಾಮನಗರ ಜನರ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೇಳಿಕೆ ಸರಿಯಿದೆ. ಇದು ರಾಜಕೀಯ […]

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಮಧ್ಯೆಯೂ ೧.೭೬ ಲಕ್ಷ ಕೂಲಿ ಕಾರ್ಮಿಕರು ನರೇಗಾ ಮತ್ತಿತರ ಯೋಜನೆಯಡಿ ಕೆಲಸ ಮಾಡಿದ್ದರಿಂದ ಕಾರ್ಮಿಕರ ಖಾತೆಗೆ ಪಾವತಿಸಬೇಕಾದ ಹಣವನ್ನು ಇನ್ನೂ ೧೫ ದಿನಗಳಲ್ಲಿ ಬ್ಯಾಂಕ್ ಮೂಲಕವೇ ಪಾವತಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೂಲಿಗಾಗಿ ರೂ.೧೦೩೯ ಕೋಟಿ ಮತ್ತು ಸಾಮಾಗ್ರಿಗಳಿಗಾಗಿ ರೂ. ೮೨೧ ಕೋಟಿ ಸೇರಿ ಒಟ್ಟು ೧೮೬೧ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. […]

ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್‌ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನು ಆರು ತಿಂಗಳು ಒಂದಲ್ಲಾ ಒಂದು ರೀತಿಯ ನಿರ್ಬಂಧ ಮುಂದುವರೆಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ. ಕರೊನಾಗೂ ಮುನ್ನ ವಿಶ್ವದಲ್ಲಿ ೧೩ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ, ಕರೊನಾ ನಂತರದಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಲಿದೆ. ಅಂದರೆ ೨೬ ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ […]

ಪ್ರತಿಯೊಬ್ಬ ಮನುಷ್ಯನ ಸಾಧನೆ ಹಾಗೂ ಯಶಸ್ಸನ್ನು ಕೆದಕಿದರೆ ಅದರ ಹಿಂದೆ ಕಷ್ಟಗಳ ಕೂಪವೇ ತೆರೆದುಕೊಳ್ಳತ್ತದೆ. ಇಂದು ಕ್ರಿಕೆಟ್ ಜಗತ್ತಿನ ದೊರೆಯಾಗಿ ರಾರಾಜಿಸುತ್ತಿರುವ ಟೀಂ ಇಂಡಿಯಾ ನಾಯಕ ಹಾಗೂ ಅಗ್ರಮಾನ್ಯ ಬ್ಯಾಟ್ಸ್​​ಮನ್ ವಿರಾಟ್​ ಕೊಹ್ಲಿ ಕೂಡ ಅಂದು ಹಲವು ಕಷ್ಟಗಳನ್ನ ಎದುರಿಸಿಯೇ ಬಂದರು ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ತಾವು ಇತರರಿಗಿಂತ ಚೆನ್ನಾಗಿಯೇ ಆಡಿದ್ದರೂ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಕೊಹ್ಲಿ ರಾತ್ರಿಯಿಡೀ ಅತ್ತಿದ್ದರಂತೆ. ಈ ಕುರಿತು ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ಅಂದಿನ […]

ಮೈಸೂರು : ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣ ಖಂಡನೀಯ. ಘಟನೆ ಕುರಿತು ಬೇಜವಾಬ್ದಾರಿ ತೋರಿದ ಶಾಸಕ ಜಮೀರ್ ಅಹಮದ್ ರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕೆಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ ವಿಶ್ವನಾಥ್, ಜಮೀರ್ ಮಾತುಗಳು ಸಾಮಾನ್ಯ ಅಲ್ಪ ಸಂಖ್ಯಾತರ ಭವಿಷ್ಯಕ್ಕೆ ಮುಳುವಾಗಿದೆ. ಜಮೀರ್ ಅಹಮದ್ ಖಾನ್ ಅವರದ್ದು ಸಮಾಜಘಾತುಕ ನಡವಳಿಕೆ. […]

Advertisement

Wordpress Social Share Plugin powered by Ultimatelysocial