ಶಿಕ್ಷಣ ಸಂಸ್ಥೆಗಳ ಮೇಲೆ CBI ದಾಳಿ | CBI raids.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಶನಲ್‌ ಎಜುಕೇಶನ್‌ ಫೌಂಡೇಶನ್‌ ಮೇಲೆ ದಾಳಿ ನಡೆದಿದೆ ಅಂತ ತಿಳಿದು ಬಂದಿದೆ.ಸದ್ಯ ಡಿಕೆ ಶಿವಕುಮಾರ್‌ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಹಿಸಿದ್ದಾರೆ.ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ಹಿಂದೆ ಕೂಡ ಡಿ ಕೆ ಶಿವಕುಮಾರ್‌ ಅವರ ಮನೆ ಮೇಲೆ ಇಡಿ, ಆದಾಯ ತೆರಿಗೆ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ಅವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ. ಡಿಕೆ ಶಿವಕುಮಾರ್‌ ಅವರು ಸಂಸ್ಥೆಯ ಚೇರ್ಮನ್‌ ಆಗಿದ್ದು, ಅವರ ಮಗಳಾದ ಐಶ್ವರ್ಯ ಅವರು ಕಾರ್ಯದರ್ಶಿಯಾಗಿ ಆಗಿದ್ದಾರೆ. ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನುವ ಮಾಹಿತಿ ಪ್ರಾಥಮಿಕ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಮಾಧ್ಯಮಗಳ ಜೊತೆಗೆ ಸುದ್ದಿಗಾರರ ಜೊತೆಗೆ ಕೊಪ್ಪಳದಲ್ಲಿ ಮಾತನಾಡುತ್ತ ಚುನಾವಣೆ ಹಿನ್ನಲೆಯಲ್ಲಿ ನನಗೆ ಸೇರಿದಂಥೆ ಹಲವರಿಗೆ ತೊಂದ್ರೆ ಕೊಡುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Feeling ugly About Like? Online Therapists Can Help

Tue Dec 20 , 2022
Feeling reliant in a romance is normal and you might be troubled to cope with this. Online therapists can help you function with your feelings of hopelessness and get to the main cause. A sensation of hopelessness is a very dark emotion that can be challenging to shake off. It […]

Advertisement

Wordpress Social Share Plugin powered by Ultimatelysocial