ಬೆಂಗಳೂರಿನ ವಿವಿಧ ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ!

 

ಬೆಂಗಳೂರಿನ ವಿವಿಧ ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿದೇಶಿಯರು ಸೇರಿದಂತೆ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.ದೇಶ ಹಾಗೂ ವಿದೇಶಗಳಿಂದ ಮಹಿಳೆಯರನ್ನು ಕರೆತಂದು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ದೇವೇಂದರ್ ಮತ್ತು ಅಭಿಜಿತ್ ಎಂಬವರನ್ನು ಬಂಧಿಸಲಾಗಿದೆ.ಟರ್ಕಿ ಹಾಗೂ ನೇಪಾಳ ದೇಶದ ಇಬ್ಬರು ಮಹಿಳೆಯರು, ಅಸ್ಸಾಂನ ಮೂವರು, ಪಶ್ಚಿಮಬಂಗಾಳದ ಮೂವರು, ದೆಹಲಿ, ನಾಗಾಲ್ಯಾಂಡ್ ಹಾಗೂ ಸ್ಥಳೀಯ ಮಹಿಳೆಯರನ್ನು ಕೂಡ ರಕ್ಷಿಸಲಾಗಿದೆ.ಹೆಚ್‌ಎಸ್‌ಆರ್ ಲೇಔಟ್, ಅಶೋಕನಗರ, ಮಡಿವಾಳ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲಸದ ಆಮಿಷ ತೋರಿಸಿ ಮಹಿಳೆಯರನ್ನು ಕರೆತಂದು ಸ್ಪಾಗಳಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ 1.07 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ನಿನ್ನೆಗಿಂತ 16% ಕಡಿಮೆಯಾಗಿದೆ

Sun Feb 6 , 2022
  ಭಾರತವು ಕಳೆದ 24 ಗಂಟೆಗಳಲ್ಲಿ 1,07,474 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ, ನಿನ್ನೆಗಿಂತ 16 ಶೇಕಡಾ ಕಡಿಮೆಯಾಗಿದೆ. ಇದು ರಾಷ್ಟ್ರದ ಒಟ್ಟು ಕ್ಯಾಸೆಲೋಡ್ ಅನ್ನು 4,21,88,138 ಕ್ಕೆ ತರುತ್ತದೆ. ಕೇರಳದಲ್ಲಿ 33,538 ಪ್ರಕರಣಗಳು ದಾಖಲಾಗಿದ್ದು, 12,009 ಪ್ರಕರಣಗಳೊಂದಿಗೆ ಕರ್ನಾಟಕ, 11,394 ಪ್ರಕರಣಗಳೊಂದಿಗೆ ಮಹಾರಾಷ್ಟ್ರ, 7,524 ಪ್ರಕರಣಗಳೊಂದಿಗೆ ತಮಿಳುನಾಡು ಮತ್ತು 5,602 ಪ್ರಕರಣಗಳೊಂದಿಗೆ ರಾಜಸ್ಥಾನದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ವರದಿಯಾದ ಹೊಸ ಪ್ರಕರಣಗಳಲ್ಲಿ ಐದು ರಾಜ್ಯಗಳು 65.19 ಪ್ರತಿಶತದಷ್ಟು ಪಾಲನ್ನು […]

Advertisement

Wordpress Social Share Plugin powered by Ultimatelysocial