ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ.

 

ದಕ್ಷಿಣದ ಹೆಸರಾಂತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಅನೇಕ ಶಾಕಿಂಗ್ ಸುದ್ದಿಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಅವರು ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದು, ಬಹುತೇಕ ವಿಷಯಗಳು ವಿವಾದಕ್ಕೆ ಕಾರಣವಾಗಿವೆ.

ಅದರ‍ಲ್ಲೂ ತಮ್ಮ ಡಿವೋರ್ಸ್ ಕುರಿತು ಈ ನಟಿ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಡಿವೋರ್ಸ್ ಕುರಿತಾಗಿ ಹಲವು ಅಚ್ಚರಿಯ ವಿಷಯಗಳನ್ನು ಶೋನಲ್ಲಿ ಹಂಚಿಕೊಂಡಿದ್ದ ಸಮಂತಾ, ಇದೀಗ ನಂಬರ್ 1 ತಾರೆಯಾಗಲು ಖಾಸಗಿ ಕಂಪೆನಿಯೊಂದಕ್ಕೆ ಲಂಚ ಕೊಟ್ಟಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ನಾನು ನಂಬರ್ 1 ಆಗಲು ಅವರಿಗೆ ದುಡ್ಡು ಕೊಡಬೇಕಾಯಿತು. ದುಡ್ಡು ಕೊಟ್ಟು ನಂಬರ್ 1 ತಾರೆಯಾದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ. ನಂಬರ್ ಸ್ಥಾನಕ್ಕೆ ಲಂಚ ಬೇರೆ ಕೊಡಬೇಕು ಎನ್ನುವ ಚರ್ಚೆ ಕೂಡ ಸಿನಿಮಾ ರಂಗದಲ್ಲಿ ಶುರುವಾಗಿದೆ. ಅಲ್ಲದೇ, ಸಮಂತಾ ಪ್ರಾಮಾಣಿಕವಾಗಿ ಈ ಕುರಿತು ಒಪ್ಪಿಕೊಂಡಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ

Thu Jul 28 , 2022
  ಕಾಲಿವುಡ್ ಟು ಹಾಲಿವುಡ್ ಅಂಗಳದವರೆಗೂ ಸೌಂಡ್ ಮಾಡುತ್ತಿರುವ ಧನುಷ್ ಸದ್ಯ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಐಶ್ವರ್ಯ ರಜನಿಕಾಂತ್ ಮತ್ತು ಧನುಷ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ಸ್ಟಾರ್ ನಟಿಯೇ ಕಾರಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಸದ್ಯ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬ್ಯುಸಿಯಿರುವ ಧನುಷ್, ಇತ್ತೀಚೆಗಷ್ಟೇ ಐಶ್ವರ್ಯ ರಜನೀಕಾಂತ್ ಜತೆಗಿನ 19 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಈವರೆಗೂ […]

Advertisement

Wordpress Social Share Plugin powered by Ultimatelysocial