ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರ!

ಬೆಂಗಳೂರು ಏ.19. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ವಿಳಂಬ ನೀತಿಗೆ ಹೈಕೋರ್ಟ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, 36 ಗಂಟೆಯೊಳಗೆ ಅಮೆರಿಕನ್ ರಸ್ತೆ ತಂತ್ರಜ್ಞಾನ ಸಂಸ್ಥೆಯೊಂದಿಗೆ ರಸ್ತೆ ಗುಂಡಿ ಮುಚ್ಚಲು ಒಪ್ಪಂದ ಹಾಗೂ ಕಾರ್ಯಾದೇಶ ಹಾಜರುಪಡಿಸಬೇಕು ಎಂದು ಆದೇಶಿಸಿದೆ.

ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಪಿಐಎಲ್ ಸಿಜೆ ರಿತುರಾತ್ ಅವಸ್ಥಿ ಮತ್ತು ನ್ಯಾ.ಎಸ್. ಆರ್ .ಕೃಷ್ಣಕುಮಾರ್ ಅವರಿದ್ದ ವಿಭಾಗೀಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಬಿಬಿಎಂಪಿ ಪರ ವಕೀಲರು ಎರಡು ದಿನ ಕಾಲಾವಕಾಶ ಕೋರಿದರು. ಆಗ ನ್ಯಾಯಪೀಠ, ಪದೇ ಪದೇ ಒಂದಿಲ್ಲೊಂದು ನೆಪ ಹೇಳುತ್ತಿರುವ ಬಿಬಿಎಂಪಿ, ಒಮ್ಮೆ ರಸ್ತೆ ಗುಂಡಿ ಅಗೆಯುವ ಸಂಸ್ಥೆ ಹೊಣೆ ಎನ್ನುತ್ತೀರಾ. ಮತ್ತೊಮ್ಮೆ ಮಳೆ, ಟೆಂಡರ್ ಇತ್ಯಾದಿ ಒಂದಲ್ಲಾ ಒಂದು ನೆಪ ಹೇಳುತ್ತೀರಾ? ರಸ್ತೆ ಗುಂಡಿ ಸರಿಪಡಿಸಲೂ ನಿಮ್ಮಿಂದಾಗುವುದಿಲ್ಲವೇ? ಎಲ್ಲದಕ್ಕೂ ಒಂದು ಮಿತಿ ಇದೆ, ವಿಳಂಬ ಸಹಿಸಲಾಗದು” ಎಂದು ಖಡಕ್ ಆಗಿ ಹೇಳಿತು. ಕೊನೆಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ವಲಯವಾರು ಕ್ರಿಯಾ ಯೋಜನೆ: ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಲಯವಾರು ಕ್ರಿಯಾ ಯೋಜನೆ

ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಬಿಎಂಪಿಗೆ ಆದೇಶಿಸಿತ್ತು.

“ಪಾಲಿಕೆ ತನ್ನ ವ್ಯಾಪ್ತಿಯ 8 ವಲಯಗಳಲ್ಲಿ ರಸ್ತೆ ಅಗೆಯುವ ಏಜೆನ್ಸಿಗಳನ್ನು ಗುರುತಿಸಿ

ಅವುಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಬೇಕು. ರಸ್ತೆಗಳ ಜಂಟಿ ಸರ್ವೆ ನಡೆಸಿ ಯೋಜನೆ ರೂಪಿಸಬೇಕು. ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯುಷನ್ಸ್ ಸಂಸ್ಥೆ ರಸ್ತೆ ಗುಂಡಿ

ಮುಚ್ಚಲು ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ. ಹಾಗಾಗಿ ಆ ಸಂಸ್ಥೆಯೊಂದಿಗೂ ಅಧಿಕಾರಿಗಳು ಸೇರಿ ಯೋಜನೆ ರೂಪಿಸಬೇಕು,” ಎಂದು ನ್ಯಾಯಪೀಠ ಹೇಳಿತ್ತು.

ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಕೇಂದ್ರ ಭಾಗ( ಸಿಬಿಡಿ) ಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು/ದುರಸ್ತಿ ಮಾಡಲು 15 ದಿನಗಳ ಗಡುವು ನೀಡಿತ್ತು. ಆಧುನಿಕ ತಂತ್ರಜ್ಞಾನ ಬಳಸಿ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಆದೇಶಿಸಿದೆ.

ನ್ಯಾಯಾಲಯ ನೀಡಿದ್ದ ನಿರ್ದೇಶದನಂತೆ ರಸ್ತೆಗುಂಡಿ ಸಮಸ್ಯೆಗೆ ಪರಿಹಾರಕ್ಕೆ ಪೈಥಾನ್ ಯಂತ್ರ ಬಳಕೆ ಕುರಿತು ಬಿಬಿಎಂಪಿ ನ್ಯಾಯಾಲಯಕ್ಕೆ ಕ್ರಿಯಾ ಯೋಜನೆಯ ವರದಿ ಸಲ್ಲಿಸಿತ್ತು.

ಅದನ್ನು ಪರಿಶೀಲಿಸಿದ ನ್ಯಾಯಪೀಠ ಮತ್ತೆ ಎಂಜಿನಿಯರ್ ಗಳ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಇನ್ನು ನ್ಯಾಯಾಲಯ ವಿಳಂಬವನ್ನು ಸಹಿಸುವುದಿಲ್ಲ, ಗುಂಡಿ ಮುಚ್ಚುವ ಕಾರ್ಯವನ್ನು ಸಮರೋಪಾದಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ನ್ಯಾಯಪೀಠ “ರಸ್ತೆ ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ, ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ,ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ, ಬಿಬಿಎಂಪಿ ಏಕೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಿಲ್ಲ. ಉದ್ದೇಶಪೂರ್ವಕವಾಗಿ ಬಿಬಿಎಂಪಿ ಇಂಜಿನಿಯರ್ ಗಳು ಹೀಗೆ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ನೀಡಿದರೂ ರಸ್ತೆ ಸರಿಯಾಗುತ್ತಿಲ್ಲ‌. ಹಾಗಾಗಿ ಬಿಬಿಎಂಪಿ ಇಂಜಿನಿಯರ್ ಗಳನ್ನೇ ಬದಲಿಸಲು ಸರ್ಕಾರಕ್ಕೆ ಆದೇಶ ನೀಡುತ್ತವೆ” ಎಂದು ಎಚ್ಚರಿಕೆ ನೀಡಿತ್ತು.

ಆಗ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚಲು ಉತ್ತಮ ತಂತ್ರಜ್ಞಾನ ಬಳಸಿ, ಬರೀ ಕಣ್ಣೊರೆಸುವ ತಂತ್ರ ಇಲ್ಲಿ‌ ನಡೆಯುವುದಿಲ್ಲ ಎಂದಿದ್ದ ನ್ಯಾಯಪೀಠ,ಸುದೀರ್ಘ ಬಾಳಿಕೆಯ ರಸ್ತೆಗಳನ್ನು ನಿರ್ಮಿಸದಿದ್ದರೆ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿಗೆ ವಹಿಸುವುದಾಗಿ ಎಚ್ಚರಿಕೆ ನೀಡಿತು.

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರುವುದು ಗೊತ್ತಿದೆಯೇ? ನಿಮ್ಮ ಎಂಜಿನಿಯರ್ ಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ? ಜೈಲಿಗೆ ಕಳುಹಿಸದೇ ನಿಮಗೆ ಕರುಣೆ ತೋರಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ದೈನಂದಿನ ಕೋವಿಡ್ ಪ್ರಕರಣಗಳ ಹೆಚ್ಚಳ,ಭಾರತದಲ್ಲಿ 2,067 ಹೊಸ ಸೋಂಕುಗಳು,ಕಳೆದ 24 ಗಂಟೆಗಳಲ್ಲಿ 40 ಸಾವುಗಳು ವರದಿಯಾಗಿದೆ!

Wed Apr 20 , 2022
ಭಾರತವು 2,067 ಹೊಸ ಕರೋನವೈರಸ್ ಸೋಂಕನ್ನು ದಾಖಲಿಸಿದೆ, ಒಟ್ಟಾರೆಯಾಗಿ 4,30,47,594 ಕ್ಕೆ ತಲುಪಿದೆ ಮತ್ತು ಸಕ್ರಿಯ ಪ್ರಕರಣಗಳು 12,340 ಕ್ಕೆ ಏರಿದೆ ಎಂದು ಬುಧವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. 90 ಪ್ರತಿಶತದಷ್ಟು ಏರಿಕೆಯೊಂದಿಗೆ ದೈನಂದಿನ ಪ್ರಕರಣಗಳು ಬಹುತೇಕ ದ್ವಿಗುಣಗೊಂಡಿದ್ದರಿಂದ ದೇಶವು ಸೋಮವಾರ ಭಾರಿ ಏರಿಕೆಗೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಿಂದ 40 ಹೊಸ ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ 5,22,006 ಕ್ಕೆ ಏರಿದೆ ಎಂದು ಬೆಳಿಗ್ಗೆ 8 […]

Advertisement

Wordpress Social Share Plugin powered by Ultimatelysocial