ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ?

ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ ಕಳೆದುಕೊಳ್ಳಲು, ಜೀರ್ಣಂಗಗಳ ಆರೋಗ್ಯಕ್ಕೆ, ಅಥವಾ ಹೊಟ್ಟೆ ತುಂಬಲು ಕಡಲೇಕಾಯಿ ಹೇಳಿ ಮಾಡಿಸಿದ ತಿನಿಸು.

ಆದರೆ ಕೆಲವರು ಕಡಲೇಕಾಯಿಯ ಚಟ ಅಂಟಿಸಿಕೊಂಡು, ತೀರಾ ಅದರಿಂದಲೇ ಆರೋಗ್ಯ ಹಾಳು ಮಾಡಿಕೊಂಡು ಬಿಡುತ್ತಾರೆ.

ಪಥ್ಯ ತಜ್ಞ ರಜತ್‌ ಜೈನ್ ಕಡಲೇಕಾಯಿಗಳ ಆರೋಗ್ಯಪೂರ್ಣ ಪ್ರಮಾಣಗಳ ಕುರಿತು ಹೀಗೆ ಮಾತನಾಡಿದ್ದಾರೆ: “ಬಾದಾಮಿಗೆ ಸಮನಾದ ಕಡಲೇಕಾಯಿಯಲ್ಲಿ ಭಾರೀ ಪ್ರಯೋಜನಗಳಿವೆ. ಆದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕೆಂಬುದು ಗೊಂದಲದ ವಿಚಾರ. ಕಡಲೇಕಾಯಿಗಳು ನಿಮಗೆ ಪ್ರೋಟೀನ್‌, ವಿಟಮಿನ್‌ಗಳು, ಖನಿಜಗಳು ಹಾಗೂ ಆರೋಗ್ಯಕರ ಕೊಬ್ಬಿನಂಶ ನೀಡುವುದರೊಂದಿಗೆ 30 ಅತ್ಯವಶ್ಯಕ ವಿಟಮಿನ್‌ಗಳು ಹಾಗೂ ಖನಿಜಗಳನ್ನು ಹೊಂದಿವೆ. ಕಡಲೇಕಾಯಿ ನಾರಿನಂಶದ ಉತ್ತಮ ಮೂಲ. ಚಳಿಗಾಲದಲ್ಲಿ ಪ್ರತಿನಿತ್ಯ 30-40 ಗ್ರಾಂ ಕಡಲೇಕಾಯಿ ಸೇವನೆಯಿಂದ ತೂಕ ಕಳೆದುಕೊಳ್ಳಲು ಅನುವಾಗುವುದಲ್ಲದೇ, ಹಸಿವನ್ನು ನಿಯಂತ್ರಣದಲ್ಲಿಟ್ಟು, ನಿಮ್ಮ ಹೊಟ್ಟೆ ತುಂಬಿದಂತೆ ಬಹುಕಾಲ ಇಡಬಲ್ಲದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಹಣ್ಣು ತಿಂದ್ರೆ ಬೇಗ ಇಳಿಯುತ್ತೆ ನಿಮ್ಮ ತೂಕ

Mon Dec 20 , 2021
ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಚಿಂತೆ. ಏನೇ ತಿಂದರೂ ಇದರಲ್ಲಿ ಎಷ್ಟು ಕ್ಯಾಲೋರಿ ಇದೆ, ಎಷ್ಟು ಪ್ರೋಟಿನ್ ಇದೆ ಎಂದು ಅಳೆದು ತೂಗಿ ತಿನ್ನುತ್ತಾರೆ. ಅಂತವರು ಪೈನಾಪಲ್ ಹಣ್ಣನ್ನು ತಿಂದರೆ ಬೇಗನೆ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಪೈನಾಪಲ್ ಹಣ್ಣನ್ನು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ. ಪೈನಾಪಲ್ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿನ ಬೇಡದ ಕೊಬ್ಬನ್ನು ನಿವಾರಿಸುತ್ತದೆ. ಹಾಗೇ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ […]

Advertisement

Wordpress Social Share Plugin powered by Ultimatelysocial