ಜನವರಿ 1 ರಿಂದ ಎಟಿಎಂ ಕ್ಯಾಶ್‌ ವಿತ್‌ಡ್ರಾ ಶುಲ್ಕ ಬದಲಾವಣೆ

ನವದೆಹಲಿ: 2022 ಜನವರಿ 1ರಿಂದ ಎಟಿಎಂ ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ ಪರಿಷ್ಕರಿಸಿದೆ.

ಹಣ ಹಿಂತೆಗೆದುಕೊಳ್ಳುವ ಉಚಿತ ಮಿತಿಗಳನ್ನು ಮೀರಿದ ಮೇಲೆ ಇಲ್ಲಿಯವರೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೆಯೇ ಖಾಸಗಿ ಬ್ಯಾಂಕುಗಳು ಒಂದು ವಹಿವಾಟಿಗೆ ₹20 ವಿಧಿಸುತ್ತಿದ್ದವು.

ಇದೀಗ ಈ ಶುಲ್ಕದಲ್ಲಿ 2014ರ ನಂತರ ಮೊದಲ ಬಾರಿಗೆ ಬದಲಾವಣೆ ಆಗಿದೆ.

ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ₹21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಯಾವುದೇ ಗ್ರಾಹಕ ತನ್ನ ಮೂಲ ಬ್ಯಾಂಕ್‌ ಎಟಿಎಂನಿಂದ ಐದು ಬಾರಿ ಹಾಗೂ ಇತರೆ ಬ್ಯಾಂಕ್‌ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ಹಿಂತೆಗೆಯಬಹುದು. (ನಾನ್‌ ಮೆಟ್ರೊ ಸಿಟಿಗಳಲ್ಲಿ ಐದು ಬಾರಿ). ಈ ಕ್ರಮವನ್ನು ಆರ್‌ಬಿಐ ಸಮರ್ಥಿಸಿಕೊಂಡಿರುವುದಾಗಿ ಡಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳಿಗೆ ಯಾವ ಲಸಿಕೆ ಹಾಕ್ತಾರೆ.? ನೋಂದಣಿ ಹೇಗೆ.? ಪೋಷಕರಿಗೆ ಇಲ್ಲಿದೆ ಮಾಹಿತಿ

Sun Dec 26 , 2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಘೋಷಣೆಯ ನಂತರ ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿವೆ. ಮಕ್ಕಳಿಗೆ ಯಾವ ಲಸಿಕೆ ಹಾಕುತ್ತಾರೆ? ನೋಂದಣಿ ಹೇಗೆ ನಡೆಯುತ್ತದೆ? ಲಸಿಕೆಯಲ್ಲಿ ಮೂರು ತಿಂಗಳ ಅಂತರವಿದ್ದರೆ, ಅವರು ಪರೀಕ್ಷೆಯನ್ನು ಹೇಗೆ ಬರೆಯಲು ಸಾಧ್ಯ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ […]

Advertisement

Wordpress Social Share Plugin powered by Ultimatelysocial