ಬೇಕಾಗುವ ಸಾಮಾಗ್ರಿಗಳು :
- ಎಣ್ಣೆ- 1 ಬಟ್ಟಲು
- ಕೋಳಿ ಮಾಂಸ- ಅರ್ಧ ಕೆಜಿ
- ಹಸಿಮೆಣಸಿನ ಕಾಯಿ- 5
- ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಪುದೀನಾ ಸೊಪ್ಪು-ಸ್ವಲ್ಪ
- ಅಚ್ಚ ಖಾರದ ಪುಡಿ- 1 ಚಮಚ
- ಗರಂ ಮಸಾಲೆ ಪುಡಿ – ಅರ್ಧ ಚಮಚ
- ನಿಂಬೆಹಣ್ಣು- 1 (ರಸ)
- ಮೊಸರು- ಅರ್ಧ ಬಟ್ಟಲು
- ಉಪ್ಪು-ರುಚಿಗೆ ತಕ್ಕಷ್ಟು
- ಅಕ್ಕಿ- 1 ಬಟ್ಟಲು (ನೆನೆಸಿದ್ದು)
ಮಾಡುವ ವಿಧಾನ :
ಮೊದಲಿಗೆ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ.ಬಳಿಕ ಶುಂಠಿ, ಬೆಳ್ಳುಳ್ಳಿ, ಟೊಮೆಟೋ ಹಾಕಿ ಕೆಂಪಗಾದ ಬಳಿಕ ಕೊತ್ತಮಂಬರಿ ಸೊಪ್ಪು, ಪುದೀನಾ, ಅಚ್ಚ ಖಾರದ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ಹಣ್ಣಿನ ರಸ ಹಾಗೂ ಮೊಸರು ಹಾಕಿ 5 ನಿಮಿಷ ಬಿಡಿ.ನಂತರ ಉಪ್ಪು ಹಾಗೂ ಮಾಂಸವನ್ನು ಹಾಕಿ 10 ನಿಮಿಷ ಚೆನ್ನಾಗಿ ಬೇಯಲು ಬಿಡಿ.ಮತ್ತೊಂದೆಡೆ ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು, ಉಪ್ಪು, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಅಕ್ಕಿಯನ್ನು ಹಾಕಿಡಿ. ಅಕ್ಕಿ 3/4 ಭಾಗದಷ್ಟು ಬೆಂದ ಬಳಿಕ ಬಸಿದು ಅನ್ನವನ್ನು ಸಿದ್ಧಪಡಿಸಿಕೊಳ್ಳಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada