IPS Officer:ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ;

ಬೆಂಗಳೂರು: ಸಿಐಡಿ ಎಸ್ ಪಿ ರವಿ ಡಿ ಚನ್ನಣ್ಣನವರ್ , ಬೆಂಗಳೂರು ಸೆಂಟ್ರಲ್ ಜೈಲ್ ಎಸ್ ಪಿ ಟಿ.ಪಿ.ಶಿವಕುಮಾರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ಗುರುವಾರ ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಮುಖವಾಗಿ ಖಡಕ್ ಅಧಿಕಾರಿ ಎನಿಸಿಕೊಂಡು ಮತ್ತು ವಾಗ್ಮಿಯಾಗಿ ಹೆಸರು ಗಳಿಸಿದ್ದ ಚನ್ನಣ್ಣನವರ್ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು.

ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದರು.ಈಗ ಎಸ್ ಪಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಬಿಸಿ ಮುಟ್ಟಿಸಿದೆ.

ಚನ್ನಣ್ಣನವರ್ ಅವರನ್ನು ಮುಂದಿನ ಆದೇಶದ ವರೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯನ್ನಾಗಿ ನೇಮಕ ಮಾಡಲಾಗಿದೆ.

ಟಿ.ಪಿ.ಶಿವಕುಮಾರ್ ಅವರನ್ನು ಚಾಮರಾಜನಗರ ಎಸ್ ಪಿ ಆಗಿ ನೇಮಕ ಮಾಡಲಾಗಿದೆ. ಚಾಮರಾಜನಗರ ಎಸ್ ಪಿ ಯಾಗಿದ್ದ ದಿವ್ಯಸಾರ ಥಾಮಸ್ ಅವರನ್ನು ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಸಿಐಡಿ ಯಲ್ಲಿದ್ದ ಡಾ. ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ಡಿಸಿಪಿ ಯಾಗಿ ವರ್ಗಾವಣೆ ಮಾಡಲಾಗಿದೆ.

ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್​ಪಿ ಆಗಿ ನೇಮಿಸಿದ್ದು, ಬೀದರ್ ಎಸ್​ಪಿ ಆಗಿದ್ದ ಡಿ.ಎಲ್. ನಾಗೇಶ್ ಅವರನ್ನು ಸಿಐಡಿ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಮೈಸೂರು ಎಸಿಬಿ ಯಲ್ಲಿದ್ದ ಅರುಣಾಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ ಪಿ ಯಾಗಿ, ಎಸಿಬಿಯಲ್ಲಿದ್ದ ಅಬ್ದುಲ್ ಅಹಾದ್ ರನ್ನು ಕೆ ಎಸ್‌ಆರ್‌ಟಿಸಿ ನಿರ್ದೇಶಕರನ್ನಾಗಿ, ಕೊಪ್ಪಳ ಎಸ್ ಪಿ ಯಾಗಿದ್ದ ಟಿ. ಶ್ರೀಧರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿಯಾಗಿ ನೇಮಕ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ ದಿನದ ಜೀವನಶೈಲಿಯಲ್ಲಿ ಆಯುರ್ವೇದ ಆಹಾರ

Thu Jan 27 , 2022
ಆಯುರ್ವೇದದ ಆಹಾರಕ್ರಮವನ್ನು ಪ್ರತಿದಿನ ನಿಮ್ಮ ಜೀವನಶೈಲಿಯಾಗಿ ಮಾಡುವುದು ದುಬಾರಿ ಅಥವಾ ಕಷ್ಟಕರವಾಗಿರಬೇಕಾಗಿಲ್ಲ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನರು ಆಯುರ್ವೇದ ಆಹಾರ ಪದ್ಧತಿಯು ತಮ್ಮ ಒಟ್ಟಾರೆ ಆರೋಗ್ಯದ ಮೇಲೆ ಬೀರುವ ಪ್ರಯೋಜನಗಳ ಬಗ್ಗೆ ಹೆಚ್ಚು ಅರಿವು ಹೊಂದಲು ಪ್ರಾರಂಭಿಸುತ್ತಿದ್ದಾರೆ. ಆದಾಗ್ಯೂ, ಸುಲಭವಾಗಿ ಪ್ರವೇಶಿಸಬಹುದಾದ ಪೂರ್ವ ಆಹಾರ ಮಾರುಕಟ್ಟೆಗಳನ್ನು ಹೊಂದಿರದ ಅನೇಕ ಸ್ಥಳಗಳಿವೆ. ಈ ರೀತಿಯ ಮಾರುಕಟ್ಟೆಯಲ್ಲಿ ಕೆಲವು ಹೆಚ್ಚು ಅಸ್ಪಷ್ಟವಾದ ಆಯುರ್ವೇದ ಆಹಾರಗಳು, ಗಿಡಮೂಲಿಕೆಗಳು ಮತ್ತು ಪದಾರ್ಥಗಳನ್ನು ಕಂಡುಹಿಡಿಯುವುದು ತುಂಬಾ ಸುಲಭವಾದರೂ, ಬಾಟಮ್ […]

Advertisement

Wordpress Social Share Plugin powered by Ultimatelysocial