ಎರಡು ಬಿಬಿಎಂಪಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ:

ರಾಜಧಾನಿಯ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಎರಡು ಶಾಲೆಗಳು ಎಸ್‌ಎಸ್‌ಎಲ್ ಸಿ ಫಲಿತಾಂಶದಲ್ಲಿ (SSLC Results) ಶೂನ್ಯ ಸಾಧನೆ ಮಾಡಿವೆ. ಈ ಎರಡು ಶಾಲೆಗಳ ಮುಖ್ಯೋಪಾಧ್ಯಯರಿಗೆ ಕಾರಣ ಕೇಳಿ ಶೋಕಾಸ್   ನೀಡಲಾಗಿದೆ.
ಕೆಲ ಶಿಕ್ಷಕರನ್ನು   ಸೇವೆಯಿಂದ ವಜಾಗೊಳಿಸಲಾಗಿದೆ. SSLC ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್ ನ 19 ಮತ್ತು ಕೆ.ಜಿ.ನಗರದ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರಿಣಾಮ ಎರಡೂ ಶಾಲೆಗಳು (Schools) ಶೂನ್ಯ ಫಲಿತಾಂಶ (Zero   ದಾಖಲಿಸಿವೆ. ಕಳೆದ ವರ್ಷಗಳಿಗೆ ಹೋಲಿಸಿದ್ರೆ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದೆ. 2020ರಲ್ಲಿ ಶೇ.50.16, 2019ರಲ್ಲಿ ಶೇ.52, 2018ರಲ್ಲಿ ಶೇ. 51ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ರಾಜ್ಯದಲ್ಲಿ ಶೇ.71.27ರಷ್ಟು ಫಲಿತಾಂಶ ಬಂದಿದೆ. ಕೆಜಿ ನಗರ ಶಾಲೆ 2020ರ ನಂತರ ಎರಡನೇ ಬಾರಿಗೆ ಶೂನ್ಯ ಫಲಿತಾಂಶ ಪಡೆದುಕೊಂಡಿದೆ.

ಇನ್ನೂ ಈ ಕುರಿತು ಬಿಬಿಎಂಪಿಯ ಶಿಕ್ಷಣ ಸಹಾಯಕ ಆಯುಕ್ತ ಉಮೇಶ್ ಡಿ ಎಸ್ ಮಾತನಾಡಿದ್ದಾರೆ. ಬಿಬಿಎಂಪಿ ಶಾಲೆಗಳ ಸುಧಾರಣೆಗೆ ಮೀಸಲಿರಿಸಿದ್ದ ಅನುದಾನ ಕಡಿಮೆಯಾಗಿದೆ. ಈ ವರ್ಷ ಸುಮಾರು 100 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ಕೇವಲ ಶೇ.70ರಷ್ಟು (70 ಕೋಟಿ) ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಉಮೇಶ್ ಹೇಳುತ್ತಾರೆ.

ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕ

ಈ 70 ಕೋಟಿಯಲ್ಲಿ 22 ಕೋಟಿ ರೂ.ಗಳನ್ನು ಶಿಕ್ಷಕರ ವೇತನಕ್ಕೆ ಮತ್ತು ಇನ್ನುಳಿದ ಮೊತ್ತವನ್ನು ಶಾಲೆಯ ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಬಹುತೇಕ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಶಿಕ್ಷಕರು ಪಾಠ ಮಾಡುತ್ತಿದ್ದರೂ, ಯಾವ ಸಿಬ್ಬಂದಿಯ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಿಲ್ಲ.

ಶೂನ್ಯ ಫಲಿತಾಂಶ ಬಂದಿದ್ದು ಏಕೆ?

ಮರ್ಫಿ ಟೌನ್ ಬಿಬಿಎಂಪಿ ಶಾಲೆ ಹುಲಸೂರು ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಹೆಚ್ಚು ತಮಿಳು ಮಾತನಾಡುವ ಕುಟುಂಬಗಳು ವಾಸವಾಗಿವೆ. ಆದ್ದರಿಂದ ಇಲ್ಲಿಯ ವಿದ್ಯಾರ್ಥಿಗಳು ಕನ್ನಡ ವಿಷಯಗಳನ್ನು ಗ್ರಹಿಸಿಕೊಳ್ಳಲು ಕಷ್ಟಪಡುತ್ತಾರೆ. ಆದ್ದರಿಂದ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಯ ಅಬ್ದುಲ್ ರಹೀಂ ಹೇಳುತ್ತಾರೆ.

ಕೆಲಸಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು

ಈ BBMP ಶಾಲೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ವಲಸೆ ಕಾರ್ಮಿಕರಾದ ತಮಿಳು ಮಾತನಾಡುವ ಪೋಷಕರ ಮಕ್ಕಳು. ಅವರು ಕನ್ನಡವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಅಷ್ಟೇನೂ ಮಾಡುವುದಿಲ್ಲ. ವಾಸ್ತವವಾಗಿ 19 ವಿದ್ಯಾರ್ಥಿಗಳಲ್ಲಿ 10 ಮಕ್ಕಳು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಮಕ್ಕಳು ಅಂತ್ಯಕ್ರಿಯೆ ಸಮಯದಲ್ಲಿ ಡ್ರಮ್ ಬೀಟರ್ ಗಳಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ತಿಂಗಳಲ್ಲಿ 15 ದಿನ ಶಾಲೆಗೆ ಗೈರಾಗುತ್ತಾರೆ.

ಇನ್ನೂ ಹುಡುಗಿಯರು ಮನೆ ಕೆಲಸಗಳಲ್ಲಿ ತೊಡಗಿಕೊಳ್ಳುವದರಿಂದ ಅವರಿಗೆ ಓದಲು ಸಮಯ ಸಿಗಲ್ಲ. ಈ ಎಲ್ಲ ಕಾರಣಗಳು ನಮ್ಮ ಫಲಿತಾಂಶದಲ್ಲಿ ಕಾಣಿಸುತ್ತಿದೆ ಎಂದು ಮುಖ್ಯೋಪಾಧ್ಯಯರು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಗುಣಮಟ್ಟ ಸುಧಾರಣೆಗೆ ಒತ್ತು

ಪ್ರಸಕ್ತ ವರ್ಷ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಯ ಅಬ್ದುಲ್ ರಹೀಂ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಬಿಬಿಎಂಪಿಯು ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಶಿಕ್ಷಕರನ್ನು ಸೇವೆಯನ್ನು ವಜಾಗೊಳಿಸಲಾಗಿದೆ. ಕಳಪೆ ಶೈಕ್ಷಣಿಕ ಸಾಧನೆಗೆ ವಿವರಣೆ ನೀಡುವಂತೆ ನಾವು ಶೋಕಾಸ್ ನೋಟಿಸ್ ನೀಡಿದ್ದೇವೆ. ಶೇ.50ಕ್ಕಿಂತ ಕಡಿಮೆ ಉತ್ತೀರ್ಣತೆ ಪಡೆದಿರುವ ಬಿಬಿಎಂಪಿ ಶಾಲೆಗಳಿಗೂ ಅಂಕಪಟ್ಟಿ ಹಾಕಿದ್ದು, ಸುಧಾರಿಸಿಕೊಳ್ಳುವಂತೆ ಹೇಳಿದ್ದೇವೆ.

ಈ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ತರಗತಿಗಳನ್ನು ಪರಿಚಯಿಸಲಾಗುತ್ತದೆ. ನಾಗರಿಕ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಹೋಮ್ ವರ್ಕ್ ವ್ಯವಸ್ಥೆಯನ್ನು ಹೆಚ್ಚಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಉಮೇಶ್ ಹೇಳಿದರು.
ಜೂನ್ 27ರಂದು ಪೂರಕ ಪರೀಕ್ಷೆಗಳು
ಬೈರವೇಶ್ವರನಗರ ಬಿಬಿಎಂಪಿ ಶಾಲೆಯು 27 ಡಿಸ್ಟಿಂಕ್ಷನ್ ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಅತಿ ಹೆಚ್ಚು ಶೇಕಡಾ 91.52 ರಷ್ಟು ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಹೇರೋಹಳ್ಳಿ 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸುವ ಮೂಲಕ ಶೇಕಡಾ 90 ರಷ್ಟು ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಜೂನ್ 27 ರಂದು ಪ್ರಾರಂಭವಾಗುವ ಪೂರಕ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಮಾರುಕಟ್ಟೆಗೆ ಬಂತು ಮತ್ತೊಂದು ದುಬಾರಿ ಬೈಕ್.!

Wed May 25 , 2022
ಬ್ರಿಟಿಷ್ ಮೋಟರ್ ಸೈಕಲ್ ಕಂಪನಿಯಾಗಿರುವ ಟ್ರಯೆಂಪ್ `ಟೈಗರ್ 1200′ ಎಂಬ ಹೆಸರಿನ ಅಡ್ವೆಂಚರ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆ 19.19 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಮತ್ತು ಟಾಪ್ ವೇರಿಯೆಂಟ್ ಬೆಲೆ 21.69 ಲಕ್ಷ ರೂಪಾಯಿಗಳಾಗಿದೆ(ಎಕ್ಸ್ ಶೋರೂಂ). ಈ ಹೊಸ ಟ್ರಯೆಂಪ್ ಟೈಗರ್ 1200 ಯನ್ನು 2021 ರ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಜಿಟಿ ಪ್ರೊ, ರ್ಯಾಲಿ ಪ್ರೊ, ಜಿಟಿ […]

Advertisement

Wordpress Social Share Plugin powered by Ultimatelysocial