ಚಿಕನ್ ಪಕೋಡ ಮಾಡುವುದು ಹೇಗೆ????

ಬೇಕಾಗುವ ಸಾಮಾಗ್ರಿಗಳು :

  • 150 ಗ್ರಾಮ್ಸ್‌ ಬೋನ್‌ಲೆಸ್‌ ಚಿಕನ್
  • 1 Pinch ಅರಿಶಿಣ
  • 1/2 ಚಮಚ ಕೊತ್ತಂಬರಿ ಪುಡಿ
  • 1 ಚಮಚ ಖಾರದ ಪುಡಿ
  • 2 slice ಈರುಳ್ಳಿ
  • 1 ಮುಷ್ಟಿಯಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು
  • 3 ಚಮಚ ಕಡಲೆ ಹಿಟ್ಟು
  • ಅಗತ್ಯಕ್ಕೆ ತಕ್ಕಷ್ಟು ಸೋಡಾ
  • ಅಗತ್ಯಕ್ಕೆ ತಕ್ಕಷ್ಟು ಉಪ್ಪು
  • 1/2 ಚಮಚ ಗರಂ ಮಸಾಲ ಪುಡಿ
  • 1/2 ಚಮಚ ಜೀರಿಗೆ
  • 1 – ಮೊಟ್ಟೆ

 

ಮಾಡುವ ವಿಧಾನ :

ಕುಕ್ಕರ್ ನಲ್ಲಿ ಚಿಕನ್ ತುಂಡುಗಳನ್ನು ಹಾಕಿ ಸ್ವಲ್ಪ ನೀರು ಮತ್ತು ಉಪ್ಪಿನೊಂದಿಗೆ ಸೇರಿಸಿ. ಚಿಕನ್ ಬೇಯುವವರೆಗೂ ಇದನ್ನು ಹಾಗೆಯೇ ಇರಲು ಬಿಡಿ. ಅಂದರೆ ಕುಕ್ಕರ್ ನಲ್ಲಿರುವ ಚಿಕನ್ ಉತ್ತಮವಾಗಿ ಬೇಯಬೇಕು.ಚೆನ್ನಾಗಿ ಬೇಯಿಸಿದ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಕೊಳ್ಳಿ, ಇದಕ್ಕೆ ಅರಿಶಿಣ ಪುಡಿ, ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ, ಸೋಡಾ, ಕಡಲೆ ಹಿಟ್ಟು, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಈರುಳ್ಳಿ ಹಾಗೂ ಒಂದು ಸಂಪೂರ್ಣ ಮೊಟ್ಟೆಯನ್ನು ಇದಕ್ಕೆ ಮಿಶ್ರಣ ಮಾಡಿ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.ಈ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡ ನಂತರ, ಚೆನ್ನಾಗಿ ಮೊದಲು ಮಿಶ್ರಣ ಮಾಡಿಕೊಳ್ಳಿ.ಇದೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ನೀರಿನ ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಸೇರಿಸಿ ಗಟ್ಟಿಯಾಗಿ ಒಂದು ರೀತಿಯ ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣವು ಅತಿಯಾಗಿ ತೆಳುವಾಗಿ ಇರಬಾರದು. ಅದೇ ರೀತಿ ಅತಿ ಗಟ್ಟಿಯಾಗಿಯೂ ಸಹ ಇರಬಾರದು. ಮಧ್ಯಮ ಪ್ರಮಾಣದಲ್ಲಿ ಸ್ವಲ್ಪ ನೀರಿನೊಂದಿಗೆ ಮಿಶ್ರಿತವಾಗಿರುವ ಅಂತಹ ಪದಾರ್ಥವನ್ನು ಆಗಿ ತಯಾರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಈ ಮಿಶ್ರಣವನ್ನು ಎಣ್ಣೆಯಲ್ಲಿ ಕರಿಯಲು ಬಿಡಿ.ನೀವು ಬಾಣೆಲೆಯಲ್ಲಿ ಸೇರಿಸುವ ಹಿಟ್ಟು ತುಂಬಾ ದಪ್ಪವಾಗಿರದಂತೆ ನೋಡಿಕೊಳ್ಳಿ. ಏಕೆಂದರೆ ಇದು ಚಿಕನ್ ಪಕೋರಸ್ ಗಳನ್ನು ಚೆನ್ನಾಗಿ ಬೇಯಿಸುವುದಿಲ್ಲ. ಮಧ್ಯಮ ದಪ್ಪವೂ ಚಿಕನ್ ಪಕೋರಸ್ ಗಳನ್ನು ಗರಿಗರಿಯಾಗಿರುವಂತೆ ಮಾಡುತ್ತದೆ.

ಟಮೋಟೋ ಸಾಸ್ ಜೊತೆಗೆ ನೀವು ಇದನ್ನು ಸೇವಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Dk Suresh : ರಾತ್ರಿ 12 ಗಂಟೆಗೆ DYSP ಮನೆಗೆ ಬಂದಿದ್ರು ಆಗ.. | Mekedatu Padayatre | D.K ShivaKumar | SNK |

Thu Jan 13 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial