China : ಯುದ್ಧಕ್ಕೆ ಸಿದ್ಧವಾಗಲು ಸೈನಿಕರಿಗೆ ಸೂಚನೆ

ಚೀನಾದ ಈವರ್ಷದ ರಕ್ಷಣಾ ಬಜೆಟ್ ಗಾತ್ರ ಭಾರತದ ರೂಪಾಯಿಯಲ್ಲಿ ಒಟ್ಟು 17,57,786.50 ಕೋಟಿ ಅರ್ಥಾತ್ 17.58 ಲಕ್ಷ ಕೋಟಿ! ಅಂದಹಾಗೆ ಭಾರತೀಯರು ಗಮನಿಸಲೇಬೇಕಾದ ವಿಷಯವೆಂದರೆ ಇದು ಭಾರತ ರಕ್ಷಣೆಗೆ ವಿನಿಯೋಗಿಸುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ದೊಡ್ಡ ಬಜೆಟ್ ಆಗಿದೆ.

2022ನೇ ವರ್ಷದ ಭಾರತದ ರಕ್ಷಣಾ ಬಜೆಟ್ ಗಾತ್ರ 5.25 ಲಕ್ಷ ಕೋಟಿ ಆಗಿದೆ.

ರಕ್ಷಣಾ ಬಜೆಟ್ ಅನ್ನು ಸಿದ್ಧಪಡಿಸಿದ ಕುರಿತು ಚೀನಾದ ಸಂಸತ್ತಿಗೆ ಪ್ರಸ್ತುತಪಡಿಸಿದ ತಮ್ಮ ವರದಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ಸಮಗ್ರ ಯುದ್ಧಕ್ಕೆ ಸನ್ನದ್ಧತೆ ಮಾಡಿಕೊಳ್ಳಬೇಕು. ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಚೀನಾ ಸರ್ಕಾರದ ಪ್ರತಿನಿಧಿಯೋರ್ವರು ತಿಳಿಸಿದ್ದಾರೆ.

ಚೀನಾದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಚೀನಾ ಸೇನೆಯು ಭವಿಷ್ಯದಲ್ಲಿ ಮಿಲಿಟರಿ ಹೋರಾಟಗಳನ್ನು ನಡೆಸಬೇಕಾಗಿದೆ. ಮತ್ತು ಅಂತಹ ಹೋರಾಟಗಳನ್ನು ಅತ್ಯಂತ ಬಲಿಷ್ಠ ಸೇನೆಯನ್ನು ಹೊಂದುವ ಮೂಲಕವೇ ಗೆಲ್ಲಲು ಸಾಧ್ಯವಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ-ಉಕ್ರೇನ್ ಯುದ್ಧ: Minecraft ಇನ್ನು ಮುಂದೆ ರಷ್ಯಾದಲ್ಲಿ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಲ್ಲಿ ಲಭ್ಯವಿಲ್ಲ!

Sun Mar 6 , 2022
ರಷ್ಯಾದಲ್ಲಿ ಮೈಕ್ರೋಸಾಫ್ಟ್ ಉತ್ಪನ್ನಗಳು ಮತ್ತು ಸೇವೆಗಳ ಎಲ್ಲಾ ಹೊಸ ಮಾರಾಟಗಳನ್ನು ಅಮಾನತುಗೊಳಿಸುವ ಕುರಿತು Microsoft ನ ಪ್ರಕಟಣೆಯ ನಂತರ, ಜನಪ್ರಿಯ ಸ್ಯಾಂಡ್‌ಬಾಕ್ಸ್-ಮಾದರಿಯ ಆಟ Minecraft ರಷ್ಯಾದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಅಂಗಡಿಯಿಂದ ಕಣ್ಮರೆಯಾಗಿದೆ. ಹಲವಾರು ವರದಿಗಳ ಪ್ರಕಾರ, ರಷ್ಯಾದಲ್ಲಿ ಆಪಲ್‌ನ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ Minecraft ಇನ್ನು ಮುಂದೆ ಲಭ್ಯವಿಲ್ಲ. ಈ ಬೆಳವಣಿಗೆಯು ನಿನ್ನೆ, ಮಾರ್ಚ್ 5, 2022 ರಂದು ನಡೆದಿದೆ. ರಷ್ಯಾ ಉಕ್ರೇನ್ ಯುದ್ಧದ ಸಮಯದಲ್ಲಿ […]

Advertisement

Wordpress Social Share Plugin powered by Ultimatelysocial