ಚೀನಾಕ್ಕೆ ಅಮೆರಿಕ ನೆರವು ಕಡಿತಕ್ಕೆ ನಿಕ್ಕಿ ಆಗ್ರಹ.

 

ಜಗತ್ತಿಗೆ ಮಾರಕ ಕೋವಿಡ್ ಸೋಂಕು ಚೀನಾದ ಪ್ರಯೋಗಾಲಯದಿಂದ ಬಂದಿರಬಹುದು ಹೀಗಾಗಿ ಚೀನಾಕ್ಕೆ ನೀಡುವ ಅಮೇರಿಕಾ ಸಹಾಯ ಕಡಿತ ಮಾಡುವಂತೆ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಅವರು ಜೋ ಬೈಡೆನ್ ಆಡಳಿತವನ್ನು ಆಗ್ರಹಿಸಿದ್ದಾರೆ.೨೦೨೪ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಮೇರಿಕಾದಲ್ಲಿ ಅಧಿಕಾರಕ್ಕೆ ಬಂದರೆ ಮೊದಲು ಮಾಡುವ ಕೆಲಸ ಇದು. ಇದರ ಜೊತೆಗೆ ಅಮೇರಿಕಾವನ್ನು ದ್ವೇಷ ಮಾಡುವ ಎಲ್ಲಾ ದೇಶಗಳಿಗೆ ನೆರವು ಕಡಿತ ಮಾಡುವುದಾಗಿ ಪ್ರಕಟಿಸಿದ್ದಾರೆ.ಕೋವಿಡ್ ಸೋಂಕು ಚೀನಾಸ ಪ್ರಯೋಗಾಲಯಂದ ಬಂದಿದೆ ಎಂದು ಬಹುತೇಕ ಅಧ್ಯಯನಗಳು ಹೇಳಿವೆ ಎಂದ ಅವರು, ಚೀನಾಕ್ಕೆ ಅಮೇರಿಕಾ ಯಾವುದೇ ರೀತಿಯಲ್ಲಿಯೂ ಸಹಾಯ ಮಾಡಬಾರದು ಎಂದು ತಿಳಿಸಿದ್ದಾರೆ.ಅಮೇರಿಕಾದ ದ್ವೇಷಿ ರಾಷ್ಟ್ರಗಳ ಪೈಕಿ ಚೀನಾ, ಪಾಕಿಸ್ತಾನ ಮತ್ತು ಇತರೆ ದೇಶಗಳಿವೆ. ಈ ದೇಶಗಳಿಗೆ ಮೊದಲು ನೆರವು ಕಡಿತ ಮಾಡಲಿದೆ. ಅಮೇರಿಕಾ ಎಂದು ಕೆಟ್ಟ ದೇಶಗಳಿಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.“ನಮ್ಮನ್ನು ದ್ವೇಷಿಸುವ ದೇಶಗಳಿಗೆ ವಿದೇಶಿ ನೆರವನ್ನು ಪ್ರತಿ ಶೇಕಡಾವಾರು ಕಡಿತಗೊಳಿಸುತ್ತೇನೆ. ಅಮೇರಿಕಾದ ಜನರು ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡುವುದಿಲ್ಲ. ನಂಬಿಕೆಗೆ ಅರ್ಹರಾದ ಏಕೈಕ ನಾಯಕರು, ನಮ್ಮ ಶತ್ರುಗಳ ವಿರುದ್ಧ ನಿಲ್ಲುವವರು ಮತ್ತು ನಮ್ಮ ಸ್ನೇಹಿತರಿಗೆ ನೆರವು ನೀಡುತ್ತೇವೆ ಎಂದಿದ್ದಾರೆ.ಅಮೆರಿಕ ಕಳೆದ ವರ್ಷ ವಿದೇಶಿ ನೆರವಿಗಾಗಿ ೪೬ ಶತಕೋಟಿ ಡಾಲರ್ ಖರ್ಚು ಮಾಡಿದೆ. ಇಲ್ಲಿಯವರೆಗೆ ಯಾವುದೇ ದೇಶಕ್ಕಿಂತ ಹೆಚ್ಚು. ತೆರಿಗೆದಾರರು ಆ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಅದು ಏನು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅರ್ಹರು. ಅದರಲ್ಲಿ ಹೆಚ್ಚಿನ ಮೊತ್ತ ಅಮೇರಿಕನ್ ವಿರೋಧಿ ರಾಷ್ಟ್ರಗಳಿಗೆ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.೨೦೨೪ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ನಿಕ್ಕಿ ಹ್ಯಾಲೆ ಸ್ಪರ್ಧಾಕಣದಲ್ಲಿದ್ದು ವಿವಿದ ರಾಜ್ಯಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.
ಹ್ಯಾಲಿ ಈಗ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಬಿಡ್‌ಗೆ ಸ್ಪರ್ಧಿಸಿದ ಮೊದಲ ಭಾರತೀಯ ಅಮೆರಿಕನ್ ಮಹಿಳೆಯಾಗಿದ್ದಾರೆ. ಸೌತ್ ಕೆರೊಲಿನಾದ ಮಾಜಿ ಗವರ್ನರ್ ಮತ್ತು ವಿಶ್ವಸಂಸ್ಥೆಯ ಅಮೇರಿಕಾ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ!

Wed Mar 1 , 2023
ತಿರುವನಂತಪುರಂ: ಯುವಕನೊಬ್ಬ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಕಪಾಳಕ್ಕೆ ಬಾರಿಸಿ ಎಸ್ಕೇಪ್​ ಆಗುವಾಗ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ. ಯುವತಿಯ ಕೆನ್ನೆಗೆ ಬಾರಿಸಿದ ಯುವಕನನ್ನು ಅನವೂರ್​ ಮೂಲದ ಶಿನೋಜ್ ಎಂದು ಗುರುತಿಸಲಾಗಿದೆ. ಕಪಾಳಕ್ಕೆ ಬಾರಿಸಿ ಓಡಿ ಹೋಗುವಾಗ ಶಿನೋಜ್​ನನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಶಿನೋಜ್​ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಎಸ್ಕೇಪ್​ ಆಗುವ ಭರದಲ್ಲಿ ಸರಣಿ […]

Advertisement

Wordpress Social Share Plugin powered by Ultimatelysocial