ಈ 7 ಸಿನಿಮಾ ಮಿಸ್ ಮಾಡ್ಬೇಡಿ ಎಂದ RRR ನಟ!.

 

ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸೋ ಇವರಿಗೆ ಯಾವ ಸಿನಿಮಾ ಇಷ್ಟ ಅಂತ ಅವರೇ ಹೇಳಿದ್ದಾರೆ ನೋಡಿ.ರಾಮ್ ಚರಣ್‍ಗೆ ತೆಲುಗಿನ ದಾನ ವೀರ ಶೂರ ಕರ್ಣ ಸಿನಿಮಾ ತುಂಬಾ ಇಷ್ಟ ಅಂತೆ. ಅಲ್ಲದೇ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಹ ರಾಮ್ ಚರಣ್ ಗೆ ಇಷ್ಟವಾದ ಸಿನಿಮಾ.ರಾಮ್ ಚರಣ್ ಅವರು ನಟಿಸಿರುವ ‘ರಂಗಸ್ಥಳಂ’ ಸಿನಿಮಾ ಅವರಿಗೆ ತುಂಬಾ ಇಷ್ಟ ಅಂತೆ. ಮತ್ತು ಅನಿಲ್ ಕಪೂರ್ ನಟನೆಯ ‘ಮಿಸ್ಟರ್ ಇಂಡಿಯಾ’ ಸಹ ನನ್ನ ಮೆಚ್ಚಿನ ಸಿನಿಮಾ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ನಟ ರಾಮ್ ಚರಣ್‍ಗೆ ತೆಲುಗು ಸಿನಿಮಾ ಜೊತೆ ಇಂಗ್ಲಿಷ್ ಸಿನಿಮಾ ಸಹ ಇಷ್ಟ ಅಂತೆ. ‘ದಿ ನೋಟ್‍ಬುಕ್’, ‘ಟರ್ಮಿನೇಟರ್ 2’ ಸಿನಿಮಾ ಬಹಳ ಇಷ್ಟ ಎಂದು ಹೇಳಿದ್ದಾರೆ. ‘ಟರ್ಮಿನೇಟರ್ 2’ ಸಿನಿಮಾವನ್ನು 50 ಬಾರಿ ನೋಡಿದ್ದಾರಂತೆ ರಾಮ್ ಚರಣ್. ರಾಮ್ ಚರಣ್‍ಗೆ ನಿರ್ದೇಶಕ ಕ್ವಿಂಟನ್ ಟೊರೆಂಟೀನೊ ನಿರ್ದೇಶನದ ಎಲ್ಲ ಸಿನಿಮಾಗಳು ಇಷ್ಟ ಅಂತೆ. ಜೊತೆಗೆ ‘ಇಂಗ್ಲೋರಿಯಸ್ ಬಾಸ್ಟಡ್ರ್ಸ್’ ಸಿನಿಮಾ ಸಹ ಇಷ್ಟ ಎಂದಿದ್ದಾರೆ.ನಟ ರಾಮ್ ಚರಣ್ RRR ಸಿನಿಮಾ ಸೂಪರ್ ಹಿಟ್ ಆಗಿದೆ. ಅದಕ್ಕೆ ಮುಂದಿನ ಸಿನಿಮಾ ಆಯ್ಕೆಗಳ ಬಗ್ಗೆ ನಟ ಎಚ್ಚರ ವಹಿಸಿದ್ದಾರೆ. ತಮಿಳಿನ ಸ್ಟಾರ್ ನಟ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್‌ ಜತೆ ಸಿನಿಮಾ ಮಾಡಲಿದ್ದಾರೆ ಭೂಷಣ್ ಕುಮಾರ್, ಸಂದೀಪ್ ರೆಡ್ಡಿ.

Fri Mar 3 , 2023
    ನಿರ್ಮಾಪಕ ಭೂಷಣ್ ಕುಮಾರ್ , ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್  ಹೊಸ ಯೋಜನೆಗೆ ಕೈ ಹಾಕಿದ್ದಾರೆ.ಈ ಅಸೋಸಿಯೇಶನ್‌ ​​ಅಡಿಯಲ್ಲಿ ಚಲನಚಿತ್ರವನ್ನು ಟಿ-ಸಿರೀಸ್ ಫಿಲ್ಮ್ಸ್ ಪ್ರೊಡಕ್ಷನ್ ಮತ್ತು ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಲಿದೆ. ನಿರ್ಮಾಪಕ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜತೆ ಸಹ-ನಿರ್ಮಾಪಕ ಶಿವ ಚಾನಾನ ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ […]

Advertisement

Wordpress Social Share Plugin powered by Ultimatelysocial