ಅಮಿತ್ ಶಾ ಉಕ್ಕಿನ ಮನುಷ್ಯ ಎಂದ ಸಿಎಂ: ಕಾಲೇಜಿನ ದಿನ ನೆನೆದು ಭಾವುಕರಾದ ಬೊಮ್ಮಾಯಿ.

ಹುಬ್ಬಳ್ಳಿ: ಭಾರತವನ್ನು ನಕ್ಸಲೈಟ್ ಮುಕ್ತ, ಟೆರಿರಿಸ್ಟ್ ಮುಕ್ತ ಮಾಡಿದ್ದು ಅಮಿತ್ ಶಾ.‌ ಅಮಿತ್ ಶಾ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿವ್ಹಿಬಿ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನ ನೋಡಿದರೆ ಹೊಟ್ಟೆಕಿಚ್ಚ ಆಗತ್ತದೆ. ನಾನು ಇಲ್ಲಿ ಕುಳಿತುಕೊಳ್ಳು ಬದಲು ಮುಂದೆ ಕುಳಿತುಕೊಳ್ಳಬೇಕಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು.

ಕ್ಯಾಂಪಸ್ ನೋಡಿದರೆ ನಾವು ಇವಾಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕಿತ್ತು. ಕಾಲೇಜ್ ನಲ್ಲಿ ಮೊದಲು ಸಿವಿಲ್,ಮೆಕ್ಯಾನಿಕಲ್ ಬಿಟ್ಟರೆ ಅವಾಗ ಏನೂ ಇರಲಿಲ್ಲ.
ಕ್ಯಾಂಟಿನ್ ನಮ್ಮ ಫೇವರೇಟ್ ಪ್ಲೇಸ್. ಕ್ಯಾಂಟಿನ್ ನಲ್ಲಿ ಕೊಡುವ ಬೋಂಡಾ ಸೂಪ್ ನೆನಪಿಸಿಕೊಂಡ ಭಾವುಕರಾದರು.

ಭಾರತದ ನವ ನಿರ್ಮಾಣದಲ್ಲಿ ಕೆಎಲ್ಇ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಎಷ್ಟೇ ದೊಡ್ಡವರಾದರೂ ಕಲಿತ ಶಾಲೆ, ಗುರುಗಳನ್ನು ಎಂದು ಮರೆಯಬಾರದು,ಇದು ನಮ್ಮ ಧರ್ಮ ಎಂದರು.

ಆರ್ಥಿಕವಾಗಿ ಒಂದು ರಾಜ್ಯ ಬೆಳೆದರೆ ,ಶೈಕ್ಷಣಿಕವಾಗಿ ರಾಜ್ಯ ಬೆಳೆಯುತ್ತದೆ. ಇಡೀ ದೇಶದಲ್ಲಿ FDI ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೂಡಿ ಉತ್ತಮ ಕೆಲಸ ಮಾಡುತ್ತಿದ್ದೇವೆ.ಇದು ಡಬಲ್ ಇಂಜಿನ್ ಸರ್ಕಾರ. ಅಮಿತ್ ಶಾ ಗೃಹ ಖಾತೆಯಲ್ಲಿ ಬಹಳ ಬದಲಾವಣೆ ಮಾಡಿದ್ದಾರೆ. ಇವತ್ತು ಕರ್ನಾಟಕಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಕೊಟ್ಟಿದ್ದು ಅಮಿತ್ ಶಾ. ಇದು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ ಎಂದು ಅವರು ಹೇಳಿದರು.

ಹೆಣ್ಣು ಮಕ್ಜಳಿಗಾಗಿ 700 ಕೋಟಿ ಹಣ ಕೊಟ್ಟಿದ್ದಾರೆ. ಅಮಿತ್ ಶಾ ಸಹಕಾರಿ ಸಚಿವರು,ಬರುವ ದಿನದಲ್ಲಿ ಸಹಕಾರ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಬಿವ್ಹಿಬಿ ಕಾಲೇಜ್ ಗೆ ಅಭಿನಂದನೆ ಸಲ್ಲಿಸಿದ ಸಿಎಂ
ಮತ್ತೆ ಸೆಂಚೂರಿ ಸಂಭ್ರಮದಲ್ಲಿ ಭಾಗಿಯಾಗೋಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿಯ ಅದ್ದೂರಿ ಸಮಾವೇಶಕ್ಕೆ ಬಂದ ಕಾಂಗ್ರೇಸ್ ಪ್ರಜಾದ್ವನಿ ಯಾತ್ರೆ..

Sat Jan 28 , 2023
ಯಾದಗಿರಿಯ ಅದ್ದೂರಿ ಸಮಾವೇಶಕ್ಕೆ ಬಂದ ಕಾಂಗ್ರೇಸ್ ಪ್ರಜಾದ್ವನಿ ಯಾತ್ರೆ.. ಪ್ರಜಾ ದ್ವನಿಯಾತ್ರೆಗೆ ಅದ್ದೂರಿ ಸ್ವಾಗತ ನೀಡಿದ ಕಾಂಗ್ರೇಸ್ ಕಾರ್ಯಕರ್ತರು. ಪುದೀನ ಹಾರ ಹಾಗೂ ಮಲ್ಲಿಗೆ ಹೂವಿನ ಬೃಹತ ಹಾರಗಳನ್ನು ಹಾಕಿ ಪ್ರಜಾದ್ವನಿಗೆ ಸ್ವಾಗತ ಕೋರಿದರು. ಯಾದಗಿರಿ ನಗರದ ವನಕೇರಾ ಲೇಔಟನಲ್ಲಿ ಆಯೋಜಿಸಲಾದ ಬಹಿರಂಗ ಸಮಾವೇಶಕ್ಕೆ ಬಂದ ನಾಯಕರು. ದೀಪ ಬೆಳಗಿಸುವ ಮೂಲಕ ಉದ್ಘಾಟನೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ ,ಬಿ.ಕೆ ಹರಿಪ್ರಸಾದ,ರಣದೀಪ ಸುರ್ಜೆವಾಲ,ಸತೀಶ ಜಾರಕಿಹೊಳಿ,ಈಶ್ವರ ಖಂಡ್ರೆ,ಪ್ರೀಯಾಂಕ ಖರ್ಗೆ,ಶರಣಬಸಪ್ಪಗೌಡ […]

Advertisement

Wordpress Social Share Plugin powered by Ultimatelysocial