ದಿಲ್ಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಹತ್ತಾರು ವಾಹನಗಳ ನಡುವೆ ಡಿಕ್ಕಿ!

ಹೊಸದಿಲ್ಲಿ: ದಿಲ್ಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಹತ್ತಾರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ರವಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 709 ಬಿ ನಲ್ಲಿರುವ ಪಾಲಿ ಗ್ರಾಮದ ಬಳಿ ರವಿವಾರ ಅಪಘಾತ ಸಂಭವಿಸಿದ್ದು, ಕಡಿಮೆ ಗೋಚರತೆಯ ನಡುವೆ ಬೈಕ್ ಗಳು , ಕಾರುಗಳು ಹಾಗೂ ಶಾಲಾ ಬಸ್‌ಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದುಕೊಂಡವು.

ಬಾಗ್‌ಪತ್‌ನಲ್ಲಿರುವ ಸೈದ್‌ವಾಡ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಸೇರಿರುವ ಬಸ್ ದಿಲ್ಲಿಯಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು.

ಅಪಘಾತದ ಸಮಯದಲ್ಲಿ ಸುಮಾರು 24 ವಿದ್ಯಾರ್ಥಿಗಳು ಬಸ್‌ನಲ್ಲಿದ್ದರು ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ನಿಲುಗಡೆಗೊಂಡಿದ್ದ ವಾಹನಕ್ಕೆ ತಮ್ಮ ಬಸ್ ಡಿಕ್ಕಿ ಹೊಡೆಯಲು ಮುಂದಾದಾಗ, ಚಾಲಕನು ಬ್ರೇಕ್ ಹಾಕಿದ್ದರು, ಆದರೆ ಮತ್ತೊಂದು ಡಿಪೋ ಬಸ್ ನಮ್ಮ ಬಸ್‌ಗೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯ ಬೇರೆ ಸ್ನೇಹ ಬೇರೆ.

Sun Feb 19 , 2023
ನಾವು ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತೇವೆ, ರಾಜಕೀಯ ಮತ್ತು ಸ್ನೇಹವನ್ನು ಒಂದೇ ತಕ್ಕಡಿಯಲ್ಲಿ ಇಟ್ಟುಕೊಳ್ಳಲ್ಲ. ರಾಜಕೀಯ ವಿಷಯದಲ್ಲಿ ತಮ್ಮದೇ ಹೋರಾಟ ಇರುತ್ತದೆ. ಸ್ನೇಹವನ್ನು ಪರಿಗಣಿಸಲ್ಲ ಎಂದು ಕೆಅರ್ ಪಿಪಿ ಪಕ್ಷದ ವಿರುದ್ದ ಹೋರಾಟದ ಬಗ್ಗೆ ಶ್ರೀರಾಮುಲು ಹೇಳಿದರು.ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸುವುದು ನನ್ನ ಉದ್ದೇಶ. ಈ ವಿಷಯದಲ್ಲಿ ರಾಜಕೀಯವೇ ಮುಖ್ಯವಾಗಿದೆ. ಯಾವುದೇ ಪಕ್ಷದಲ್ಲಿನ ಸ್ನೇಹವನ್ನು […]

Advertisement

Wordpress Social Share Plugin powered by Ultimatelysocial