ಕಮರ್ಷಿಯಲ್​ ಸಿಲಿಂಡರ್​​ ಬೆಲೆ 266. ರೂ ಹೆಚ್ಚಳ : ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಬರೆ..!

ಕ್ರೂರಿ ಕೊರೋನಾ ಬಂದಮೇಲೆ ಜನರು ಅನುಭಸುತ್ತಿರುವ ಕಷ್ಟ ಒಂದೊಂದಲ್ಲ. ಎಲ್ಲ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಅಂತೂ ಕೇಳಲೇ ಬೇಡಿ. ಪ್ರತಿನಿತ್ಯಇಂಧನದ ಬೆಲೆ ಏರುತ್ತಲೇ ಇದೆ. ಈಗಾಗಲೇ ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿ ಸಾಮನ್ಯರು ನಲುಗಿಹೋಗಿದ್ದಾರೆ. ಇದೀಗ ದೀಪಾವಳಿಗೂ ಮುನ್ನ ಮತ್ತೆ ಬೆಲೆ ಏರಿಕೆ ಶಾಕ್ ಗ್ರಾಹಕರಿಗೆ ಎದುರಾಗಿದೆ. ನವೆಂಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಏರಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಇದೀಗ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ. ಎಲ್​ಪಿಜಿ ಕಮರ್ಷಿಯಲ್​ ಸಿಲಿಂಡರ್​ ಬೆಲೆ 266 ರೂ.ಯಷ್ಟು ಹೆಚ್ಚಾಗಿದೆ. ದೀಪಾವಳಿ ಹಬ್ಬಕೂ ಮುನ್ನವೇ ಎಲ್​​ಪಿಜಿ ಗ್ರಾಹಕರ ಜೇಬು ಸುಟ್ಟಿದೆ. ಒಂದೇ ಬಾರಿ 266 ರೂ. ಏರಿಕೆ ಮಾಡಿರುವುದು ಜನಸಾಮ್ಯನರಿಗೆ ದೊಡ್ಡ ಶಾಕ್​ ನೀಡಿದೆ. 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಓದಿಸುತ್ತಿದ್ದ 1800 ಮಕ್ಕಳ ಹೊಣೆ ಹೊತ್ತ ತಮಿಳು ನಟ ವಿಶಾಲ್..!

Mon Nov 1 , 2021
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅವರಿಗೆ ಅವರೇ ಸಾಟಿ. ಸಿನಿಮಾದಲ್ಲಿ ಅಷ್ಟೇ ಅಲ್ಲದೇ ಸಮಾಜಮುಖಿ ಕಾರ್ಯದಲ್ಲಿ ಪುನೀತ್​ ರಾಜ್​ಕುಮಾರ್​ ತೊಡಗಿಸಿಕೊಂಡಿದ್ದವರು. ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಅವರು ನಡೆಸುತ್ತಿದ್ದ ಹಲವಾರು ಸಮಾಜಮುಖಿ ಕಾರ್ಯಗಳ ನಡುವೆ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದರು. ಆದರೆ ಅವರ ನಿಧನದ ಬಳಿಕ ಈ ಮಕ್ಕಳ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. […]

Advertisement

Wordpress Social Share Plugin powered by Ultimatelysocial