ಕಂಪನಿಯ ಷೇರು ಮೌಲ್ಯ ಕುಸಿತ: ಒಂದೇ ದಿನ ಬರೋಬ್ಬರಿ 2.16 ಲಕ್ಷ ಕೋಟಿ ರೂ. ಕಳೆದುಕೊಂಡ ಜುಕರ್‌ಬರ್ಗ್‌

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಸದ್ಯ ತಮ್ಮ ಕಂಪನಿಯ ಹೆಸರನ್ನು ‘ ಮೆಟಾ’ ಎಂದು ಬದಲಾಯಿಸಿಕೊಂಡಿದ್ದಾರೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ತಲ್ಲಣದಿಂದಾಗಿ ಗುರುವಾರದಂದು ಒಂದೇ ದಿನದಲ್ಲಿ ಮೆಟಾ ಕಂಪನಿಯ ಷೇರು ಮೌಲ್ಯ 26% ಕುಸಿದಿದೆ.‌ಅಂದರೆ, ಜುಕರ್‌ಬರ್ಗ್‌ಗೆ ಒಟ್ಟು 2.16 ಲಕ್ಷ ಕೋಟಿ ರೂ. ನಷ್ಟವಾಗಿದೆ.ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಗ್ರಾಹಕರನ್ನು ಹೊಂದಿರುವ ಮೆಟಾ ಒಡೆತನದ ಸಾಮಾಜಿಕ ಜಾಲತಾಣ ”ಫೇಸ್‌ಬುಕ್‌”ನಲ್ಲಿ ಜುಕರ್‌ಬರ್ಗ್‌ವೊಬ್ಬರೇ ಶೇ.12.8 ರಷ್ಟು ಷೇರುಗಳ ಒಡೆತನ ಹೊಂದಿದ್ದಾರೆ.ಫೇಸ್‌ಬುಕ್‌ ಒಡೆತನ ಮೆಟಾದ ಷೇರುಗಳ ಮೌಲ್ಯ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕುಸಿಯಲು ಕಾರಣ ಪ್ರತಿಸ್ಪರ್ಧಿಗಳಾದ ಟಿಕ್‌ಟಾಕ್‌ ಹಾಗೂ ಯೂಟ್ಯೂಬ್‌ ಬಲಗೊಳ್ಳುತ್ತಿರುವುದು ಎನ್ನಲಾಗಿದೆ. ಜತೆಗೆ ಆಯಪಲ್‌ ಕಂಪನಿಯ ಖಾಸಗಿ ನೀತಿಗಳಲ್ಲಿ ಮಹತ್ತರ ಬದಲಾವಣೆಯೂ ಕಾರಣ ಎಂದು ಷೇರುಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ದೊಡ್ಡ ಮೊತ್ತದ ಆಸ್ತಿ ನಷ್ಟವಾದ ಹಿನ್ನೆಲೆಯಲ್ಲಿ ಜುಕರ್‌ಬರ್ಗ್‌, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತೀಯ ಉದ್ಯಮಿಗಳಾದ ಮುಕೇಶ್‌ ಅಂಬಾನಿ ಮತ್ತು ಗೌತಮ್‌ ಅದಾನಿ ಅವರು ಜುಕರ್‌ಬರ್ಗ್‌ನನ್ನು ಹಿಂದಿಕ್ಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಜೋಯ್ ಘೋಷ್ ಅವರ ಕ್ರೈಮ್ ಮಿಸ್ಟರಿಯೊಂದಿಗೆ ಕರೀನಾ ಕಪೂರ್ ಖಾನ್ ಪುನರಾಗಮನ?

Fri Feb 4 , 2022
ಕರೀನಾ ಕಪೂರ್ ಖಾನ್ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಕಳೆದ ವರ್ಷ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗ ಜಹಾಂಗೀರ್ ಅಲಿ ಖಾನ್ ಅವರನ್ನು ಸ್ವಾಗತಿಸಿದರು. ಅಂದಿನಿಂದ ನಟಿ ಹೆರಿಗೆ ರಜೆಯಲ್ಲಿದ್ದರು. ಈಗ ನಟಿ ಸುಜೋಯ್ ಘೋಷ್ ಅವರ ಚಿತ್ರದೊಂದಿಗೆ ಚಿತ್ರದ ಸೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಇನ್ನಷ್ಟು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ. ವರದಿಯ ಪ್ರಕಾರ, ಸುಜೋಯ್ ಅವರ ಚಲನಚಿತ್ರವು ಕೀಗೊ ಹಿಗಾಶಿನೊ ಅವರ ಅತ್ಯಂತ ಮೆಚ್ಚುಗೆ ಪಡೆದ […]

Advertisement

Wordpress Social Share Plugin powered by Ultimatelysocial