ಕಾಂಗ್ರೆಸ್‍ ಭಿನ್ನಮತಕ್ಕೆ ಮತ್ತಷ್ಟು ತುಪ್ಪ ಸುರಿದ ರಾಜ್ಯಸಭೆ ಚುನಾವಣೆ

ಬೆಂಗಳೂರು,ಜೂ.5- ರಾಜ್ಯಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‍ನಲ್ಲಿ ಭಿನ್ನಮತ ತಲೆ ದೋರಿವೆ ಎಂಬ ಅನುಮಾನಗಳು ಸಾರ್ವಜನಿಕ ರಲ್ಲಿ ಗೊಂದಲ ಮೂಡಿಸಿದೆ. ಕೇಂದ್ರದ ಮಾಜಿ ಸಚಿವ ಜಯರಾಮ್ ರಮೇಶ್ ಅವರನ್ನು ಪಕ್ಷದ ಅಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.

ರಾಜ್ಯದ ಸ್ಥಳೀಯ ನಾಯಕರು ಹೈಕಮಾಂಡ್ ನಾಯಕರ ಮನವೊಲಿಸಿ ಹೆಚ್ಚುವರಿ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದಾರೆ.

ಈ ಕುರಿತು ನಾನಾ ರೀತಿಯ ವದಂತಿಗಳು ಹುಟ್ಟಿಕೊಂಡಿದ್ದು, ಕಾಂಗ್ರೆಸ್‍ನಲ್ಲಿನ ಗುಂಪುಗಾರಿಕೆ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಈವರೆಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕ ಗುಂಪುಗಳು ಹಾಗೂ ಎರಡು ಶಕ್ತಿ ಕೇಂದ್ರಗಳಾಗಿ ಗುರುತಿಸಿಕೊಂಡಿ ದ್ದರು.

ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಒಂದಾಗಿದ್ದು, ಜೆಡಿಎಸ್ ವಿರುದ್ಧ ಪೈಪೋಟಿಗಿಳಿದಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ವಿಧಾನಸಭೆ ಫಲಿತಾಂಶ ಅತಂತ್ರವಾದರೆ ನಿರ್ಮಾಣವಾದರೆ ಜೆಡಿಎಸ್ ಬೆಂಬಲ ಪಡೆದು ಮುಖ್ಯಮಂತ್ರಿಯಾಗುವ ಕಾರ್ಯ ಯೋಜನೆಯಿಂದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ನೆರವಾಗುವ ಪ್ರಯತ್ನ ನಡೆಸಿದರು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಬೆಂಗಳೂರಿನ ಹೊರವಲಯದಲ್ಲಿ ನಡೆದ ನವಸಂಕಲ್ಪ ಶಿಬಿರದಲ್ಲಿ ಮೊದಲ ದಿನ ಗೈರುಹಾಜರಾಗಿ ದೆಹಲಿಯಲ್ಲಿ ಕುಳಿತು ಜೆಡಿಎಸ್ ಅಭ್ಯರ್ಥಿಯ ಪರವಾಗಿ ಲಾಬಿ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ಅವರ ನಾಮಪತ್ರ ವಾಪಸ್ ಪಡೆಯುವ ಸಲುವಾಗಿ ಪ್ರಯತ್ನ ನಡೆಸಿದ್ದಾರೆ ಎಂಬೆಲ್ಲ ವದಂತಿಗಳು ಹಬ್ಬಿವೆ.

ಮಾರನೆಯ ದಿನ ನವಸಂಕಲ್ಪ ಶಿಬಿರಕ್ಕೆ ಹಾಜರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕುರಿತಾಗಿ ಕೇಳಿ ಬರುತ್ತಿರುವ ವದಂತಿಗಳಿಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಶಿಬಿರದ ಕೊನೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತ್ರ ಮಾತನಾಡಿದರು. ಆದರೆ ಖರ್ಗೆ ಅವರು ಧನ್ಯವಾದಗಳನ್ನು ಹೇಳಿ ತಮ್ಮ ಪಾಡಿಗೆ ತಾವು ಹೊರಟರು. ಇದು ಮತ್ತಷ್ಟು ವದಂತಿಗಳಿಗೆ ರೆಕ್ಕೆಪುಕ್ಕ ಮೂಡಲು ಕಾರಣವಾಯಿತು. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಖರ್ಗೆ ಸೇರಿದಂತೆ ಯಾರೂ ಕೂಡ ಜೆಡಿಎಸ್ ಪರವಾಗಿ ಲಾಬಿ ನಡೆಸಿಲ್ಲ ಎಂದು ಹೇಳಲಾಗಿದೆ.

ರಾಜಕೀಯ ಕಾರಣಕ್ಕಾಗಿ ಕೆಲವು ಸ್ಥಳೀಯ ನಾಯಕರು ದುರದ್ದೇಶಪೂರಕವಾದ ವದಂತಿಗಳನ್ನು ಹರಡುತ್ತಿದ್ದಾರೆ ಎಂಬ ಆರೋಪಗಳಿವೆ. ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಪದೇ ಪದೇ ಪ್ರತಿಬಿಂಬಿಸುವ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಎದುರಾಳಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಖರ್ಗೆ ಅವರು ನವಸಂಕಲ್ಪ ಶಿಬಿರದ ಮೊದಲ ದಿನ ಗೈರು ಹಾಜರಾಗಲು ಮೂಲ ಕಾರಣವೆಂದರೆ ಜಾರಿ ನಿರ್ದೇಶನಾಲಯದ ನೋಟಿಸ್ ಎಂದು ಹೇಳಲಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದು, ಈ ಮೊದಲು ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್ ಸೇರಿದಂತೆ ಹಲವು ನಾಯಕರಿಗೆ ಸಮನ್ಸ್ ನೀಡಿ ಹೇಳಿಕೆ ಪಡೆದಿದೆ.

ಜೂನ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಲಾಗಿತ್ತು. ಈಗಾಗಲೇ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದ ಖರ್ಗೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಹೈಕಮಾಂಡ್ ನಾಯಕರು ದೆಹಲಿಗೆ ಕರೆಸಿಕೊಂಡಿದ್ದರು. ಆ ಕಾರಣಕ್ಕಾಗಿ ಖರ್ಗೆ ನವಸಂಕಲ್ಪ ಶಿಬಿರದ ಮೊದಲ ದಿನ ಭಾಗವಹಿಸದೆ ದೆಹಲಿ ಪ್ರವಾಸದಲ್ಲಿದ್ದರು ಎಂದು ಹೇಳಲಾಗಿದೆ.
ಈ ವಿಷಯವನ್ನು ಕಾಂಗ್ರೆಸ್ ಬಹಿರಂಗವಾಗಿ ಹೇಳಲು ಮುಜುಗರ ಪಡುತ್ತಿದೆ. ಇದನ್ನೇ ಬಳಸಿಕೊಂಡ ರಾಜಕೀಯ ಎದುರಾಳಿಗಳು ನಾನಾ ವದಂತಿಗಳನ್ನು ಹುಟ್ಟು ಹಾಕಿದ್ದಾರೆ ಎಂಬ ಅಸಮಾಧಾನಗಳು ಕೇಳಿಬಂದಿವೆ.

ಈ ನಡುವೆ ಮುಂದಿನ ವಿಧಾನಸಭೆಯ ಚುನಾವಣೆಯನ್ನು ತಳುಕು ಹಾಕಿ ಮುಖ್ಯಮಂತ್ರಿ ಹುದ್ದೆಯ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ನಿನ್ನೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಕುರಿತಂತೆ ಯಾವ ನಾಯಕರು ಸಂಧಾನ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷದ ಒಳಗೆ ಇರುವ ಕೆಲವರು ವದಂತಿಗಳಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬ ಆಕ್ಷೇಪ ಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Leovegas Online Casino Bonus, Get Upward To 1000 Plus 200 Free Spins

Sun Jun 5 , 2022
Leo Vegas On The Internet Casino Review Content People Who Looked At This Specific Company Also Looked At Table Games How Long Does It Take To Withdraw From Leovegas Sports? About The Leovegas Casino 💳 Leovegas Casino Deposit And Withdrawing Transaction Options Casino Table Games Best Bookmaker Bonuses I Opened […]

Advertisement

Wordpress Social Share Plugin powered by Ultimatelysocial