ಫೆಬ್ರವರಿ 5: ದೇಶಾದ್ಯಂತ ಮಾರ್ಚ್ ವೇಳೆಗೆ ಕೊರೊನಾ ಸೋಂಕಿತ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ!

ನವದೆಹಲಿ, ಫೆಬ್ರವರಿ 5: ದೇಶಾದ್ಯಂತ ಮಾರ್ಚ್ ವೇಳೆಗೆ ಕೊರೊನಾ ಸೋಂಕಿತ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ತಿಳಿಸಿದೆ.ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಸಕ್ರಿಯ ಪ್ರಕರಣಗಳು ಇಳಿದಿರುವ ಕುರಿತು ಮಾಹಿತಿ ನೀಡಿವೆ.ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಏರುಗತಿಯತ್ತ ಸಾಗುತ್ತಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14.35 ಲಕ್ಷ ದಷ್ಟಿದೆಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉನ್ನತಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ದೇಶದ ಕೆಲವು ಭಾಗಗಳಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಮೂರನೇ ಅಲೆಯು ಕ್ಷೀಣಿಸುವ ಸಾಧ್ಯತೆ ಇದೆ ಎಂದಿದ್ದಾರೆ.ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅತ್ಯಂತ ಗರಿಷ್ಠ ಮಟ್ಟದ ಪ್ರಕರಣಗಳನ್ನು ಎದುರಿಸಿ ಇದೀಗ ಕೆಳಗಿಳಿಯುತ್ತಿವೆ. ಕೊರೊನಾ ಸೋಂಕಿನ ಮೂರನೇ ಅಲೆಯಿಂದ ಮಾರ್ಚ್‌ನ ಎರಡು ಹಾಗೂ ಮೂರನೇ ವಾರದ ವೇಳೆಗೆ ಹೊರಬರಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅಭಿಪ್ರಾಯಪಟ್ಟಿದ್ದಾರೆ.ಒಂದು ದಿನದಲ್ಲಿ ಮೂರು ಲಕ್ಷದವರೆಗಿನ ಪ್ರಕರಣಗಳು ಪತ್ತೆಯಾಗಿ ಇದೀಗ ಮತ್ತೆ ಇಳಿಮುಖಗೊಂಡಿದೆ. ದಿನಕ್ಕೆ ಒಂದು ಲಕ್ಷದಷ್ಟು ಸೋಂಕಿತರು ದಾಖಲಾಗುತ್ತಿದ್ದಾರೆ. ಆದರೆ ಈ ಮೂರನೇ ಅಲೆ ಇದೊಂದು ತಿಂಗಳು ಕಾಡಲಿದೆ. ಭಾರತದಲ್ಲಿ ಮಾರ್ಚ್​ ತಿಂಗಳ ಹೊತ್ತಿಗೆ ಕೊವಿಡ್​ 19 ಮೂರನೇ ಅಲೆ ಪ್ರಮಾಣ ತುಸು ತಗ್ಗಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೂಡ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆ ಆಗಿವೆ.ಮುಂಬೈ, ಪುಣೆ, ಥಾಣೆ ಮತ್ತು ರಾಯಗಢದಂತಹ ಪ್ರಮುಖ ನಗರಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ, ದಿನಕ್ಕೆ 48 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಕಾಣುತ್ತಿದ್ದ ಪ್ರದೇಶಗಳಲ್ಲಿ ಈಗ 15 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಣ್ಣೀರು ಕುಡಿಯುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು ಮತ್ತು ಅದರ ದುಷ್ಪರಿಣಾಮಗಳು

Sat Feb 5 , 2022
  ನೀರು ಜೀವನ ಮತ್ತು ಒಟ್ಟಾರೆ ಆರೋಗ್ಯದ ಮೂಲಭೂತ ಅವಶ್ಯಕತೆಯಾಗಿದೆ. ಬೇಸಿಗೆ ಶೀಘ್ರದಲ್ಲೇ ಸಮೀಪಿಸುತ್ತಿದ್ದಂತೆ, ನಮ್ಮಲ್ಲಿ ಅನೇಕರು ನಮ್ಮ ಬಾಯಾರಿಕೆಯನ್ನು ನೀಗಿಸಲು ಶೀತಲವಾಗಿರುವ ಬಾಟಲಿಯ ನೀರನ್ನು ಹಿಡಿಯಲು ರೆಫ್ರಿಜರೇಟರ್‌ಗೆ ಓಡುತ್ತಾರೆ. ಮತ್ತು, ಸುಡುವ ಶಾಖದಲ್ಲಿ ಯಾರು ಅದನ್ನು ಇಷ್ಟಪಡುವುದಿಲ್ಲ? ಆದರೆ, ನೀರಿನ ತಾಪಮಾನವೂ ನಿರ್ಣಾಯಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ತಣ್ಣೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಮಾನ್ಯವಾಗಿ ತಿಳಿದಿದೆ. ಆಯುರ್ವೇದದ ಪ್ರಕಾರ, ಆರೋಗ್ಯಕರ […]

Advertisement

Wordpress Social Share Plugin powered by Ultimatelysocial