ಕೊರೊನಾ ಗೆ ದಿವ್ಯ ಔಷಧ ಬೇವಿನ ಮರದ ತೊಗಟೆ

ಪ್ರಾಚೀನ ಕಾಲದಿಂದ್ಲೂ ಅನೇಕ ರೋಗಗಳ ಚಿಕಿತ್ಸೆಗಾಗಿ ಬೇವನ್ನು ಬಳಸಲಾಗುತ್ತದೆ. ಇದೀಗ ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್‌ ಗೂ ಬೇವಿನ ಮರದ ತೊಗಟೆಯೇ ಮದ್ದು ಅನ್ನೋದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.

 

ಕೊಲೊರಾಡೋ ವಿಶ್ವವಿದ್ಯಾನಿಲಯ ಹಾಗೂ ಕೋಲ್ಕತ್ತಾದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಬೇವಿನ ಮರದ ತೊಗಟೆ ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯುತ್ತದೆ.

ಜೊತೆಗೆ ಕೋವಿಡ್‌ ಚಿಕಿತ್ಸೆಗೂ ಇದನ್ನು ಬಳಸಬಹುದು.

ವೈರಾಲಜಿ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಬೇವಿನ ತೊಗಟೆಯ ಘಟಕಗಳು, ವೈರಲ್ ಪ್ರೋಟೀನ್‌ಗಳನ್ನು ಟಾರ್ಗೆಟ್‌ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಕೊರೊನಾ ವೈರಸ್‌ ನ SARS-CoV-2 ಸೇರಿದಂತೆ ಹೊಸ ರೂಪಾಂತರಿಗಳ ವಿರುದ್ಧ ಆಂಟಿವೈರಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣ ಹೊಂದಿರೋ ಬೇವಿನ ಮರವನ್ನು ಔಷಧಿಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ತೊಗಟೆಯ ಸಾರವು ಮಲೇರಿಯಾ, ಹೊಟ್ಟೆ ಮತ್ತು ಕರುಳಿನ ಹುಣ್ಣುಗಳು, ಚರ್ಮ ರೋಗಗಳು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಬೇವು ಆಧಾರಿತ ಔಷಧ ಸೇವನೆಯಿಂದ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಅಪಾಯ ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

.

Please follow and like us:

Leave a Reply

Your email address will not be published. Required fields are marked *

Next Post

MCG ಸ್ಟ್ಯಾಂಡ್ ಅನ್ನು ವಾರ್ನ್ ನಂತರ ಮರುಹೆಸರಿಸಲಾಗುತ್ತದೆ; ಅಭಿಮಾನಿಗಳು ಅವರ ಪ್ರತಿಮೆಯ ಬಳಿ ಮಾಂಸದ ಕಡುಬುಗಳು, ಬಿಯರ್ ಕ್ಯಾನ್‌ಗಳು, ಸಿಗರೇಟ್ ಪ್ಯಾಕ್‌ಗಳನ್ನು ಇಡುತ್ತಾರೆ

Sat Mar 5 , 2022
  ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನ (MCG) ಗ್ರೇಟ್ ಸದರ್ನ್ ಸ್ಟ್ಯಾಂಡ್‌ಗೆ 52 ನೇ ವಯಸ್ಸಿನಲ್ಲಿ ಶುಕ್ರವಾರ ಥೈಲ್ಯಾಂಡ್‌ನಲ್ಲಿ ಶಂಕಿತ ಹೃದಯಾಘಾತದ ನಂತರ ನಿಧನರಾದ ದಂತಕಥೆ ಸ್ಪಿನ್ನರ್ ಶೇನ್ ವಾರ್ನ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗುತ್ತದೆ, ಆದರೆ ವಿಕ್ಟೋರಿಯನ್ ಸರ್ಕಾರವು “ರಾಜ್ಯ ಅಂತ್ಯಕ್ರಿಯೆಯನ್ನು ನೀಡಿದೆ” ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಿಗೆ. ಲೆಜೆಂಡ್‌ನ ಹಠಾತ್ ಮರಣದ ನಂತರ ಭಾವೋದ್ರಿಕ್ತ ಕ್ರಿಕೆಟ್ ಅಭಿಮಾನಿಗಳು ಮತ್ತು ಜೀವನದ ಇತರ ಹಂತಗಳ ಜನರು MCG ಯಲ್ಲಿನ […]

Advertisement

Wordpress Social Share Plugin powered by Ultimatelysocial