ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರಿಗೆ ಅಪಮಾನ:ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಪ್ರತಿಭಟನೆ

ಅರಕಲಗೂಡು : ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರಿಗೆ ಅಪಮಾನ ಎಸಗಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಕರವೇ(ಪ್ರವೀಣ್‌ಶೆಟ್ಟಿಬಣ) ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಬೆಳಗಾವಿಯಲ್ಲಿನ ಎಂಇಎಸ್ ಮತ್ತುಶಿವಸೇನೆ ಸಂಘಟನೆಗಳ ಕಾರ್ಯಕರ್ತರು ಕನ್ನಡಿಗರು,ಕನ್ನಡಭಾಷೆ ವಿರುದ್ಧ ಸಲ್ಲದ ದಬ್ಬಾಳಿಕೆಯನ್ನು ಪ್ರದರ್ಶಿಸುತ್ತಾ ಬಂದಿದ್ದರೂ ಕೂಡ ಸರಕಾರ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ.ಇದು ಮಿತಿಮೀರಿ ರಾಜ್ಯಧ್ವಜವನ್ನು ಸುಟ್ಟುಹಾಕಿರುವುದು ಇಡೀ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ.ಕೂಡಲೇ ಕೃತ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭನಾ ನಿರತರು ಒತ್ತಾಯಿಸಿದರು.ಪಟ್ಟಣದ ಪ್ರವಾಸಿಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಅನಕೃ ವೃತ್ತಮೂಲಕ ಸಾಗಿ ತಹಸೀಲ್ದಾರ್ ಕಚೇರಿ ಆವರಣಕ್ಕೆ ತೆರಳಿ ಕೆಲ ಕಾಲ ಪ್ರತಿಭಟನಾಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಕುಶಾಲ್,ರಾಜ್ಯದ ಸಕಲ ಸೌಕರ್ಯಗಳನ್ನು ಪಡೆದುಕೊಂಡು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಕನ್ನಡ ವಿರೋಧಿ ಸಂಘಟನೆಯನ್ನು ನಿಷೇಧಿಸಬೇಕು.ಮುಂದೆ ಹೀಗಾಗದಂತ್ತೆ ಎಚ್ಚರಿಕೆ ಕ್ರಮವನ್ನು ರಾಜ್ಯ ಸರಕಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು. ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ವೈಎಂ ರೇಣುಕುಮಾರ್ ಅವರಿಗೆ ಸಲ್ಲಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ:ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್

Sat Dec 18 , 2021
ಯುದ್ಧ ಸ್ಥಿತಿಯ ಸ್ವರೂಪವು ಮೂಲಭೂತ ಬದಲಾವಣೆಗೊಳಪಟ್ಟಿದೆ ಎಂದು ಗುರುತಿಸಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್‍ರಾವ್ ಚೌಧರಿ ಅವರು ಭಾರತದ ಭದ್ರತಾ ಕ್ರಿಯಾತ್ಮಕತೆ ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದ ಹೇಳಿದ್ದಾರೆ.ಇಲ್ಲಿನ ದುಂಡ್‍ಗಲ್ ಸಮೀಪ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮಿತ ಸಂಯುಕ್ತ ಪದವೀಧರರ ಪಥಸಂಚಲನದಲ್ಲಿ ಭಾಷಣ ಮಾಡಿದ ಚೌಧರಿ ಅವರು ಭಾರತೀಯ ವಾಯುಪಡೆಯು ಪರಿವರ್ತನೆಯ ಶೃಂಗದಲ್ಲಿದ್ದು ರಫೇಲ್ ಯುದ್ದ ವಿಮಾನಗಳು, ಅಪಾಚೆ […]

Advertisement

Wordpress Social Share Plugin powered by Ultimatelysocial