2022 ರಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಹಲವು ಚಿತ್ರಗಳಿಗೆ ಓಮಿಕ್ರಾನ್ ಬ್ರೇಕ್;

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಹೆಚ್ಚುತ್ತಿದ್ದು, ಮಹಾಮಾರಿ ನಿಯಂತ್ರಿಸಲು ಹಲವು ರಾಜ್ಯಗಳು ಥಿಯೇಟರ್‌ಗಳನ್ನು ಬಂದ್ ಮಾಡಿವೆ ಅಥವಾ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿವೆ.

ಈ ಮಧ್ಯೆ 2022ರ ಆರಂಭದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ದೊಡ್ಡ ಬಜೆಟ್ ಚಿತ್ರಗಳ ಪಟ್ಟಿ ಸಹ ದೊಡ್ಡದಿದ್ದು, ಓಮಿಕ್ರಾನ್ ನಿಂದಾಗಿ ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಬರಲು ಭಯಪಡುತ್ತಿರುವುದರಿಂದ ಬಿಡುಗಡೆ ಮುಂದೂಡಲು ಮುಂದಾಗಿವೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಮತ್ತೊಂದು ಹೊಡೆತ ನೀಡುತ್ತಿದೆ.

ಎಸ್‌ಎಸ್ ರಾಜಮೌಳಿ ಅವರ “ಆರ್‌ಆರ್‌ಆರ್”, ಅಕ್ಷಯ್ ಕುಮಾರ್ ಅವರ “ಪೃಥ್ವಿರಾಜ್”, ಶಾಹಿದ್ ಕಪೂರ್ ಸ್ಟಾರ್ಟರ್ “ಜೆರ್ಸಿ”, ಪ್ರಭಾಸ್ ಅವರ “ರಾಧೆ ಶ್ಯಾಮ್ ಮತ್ತು ಅಜಿತ್ ಕುಮಾರ್ ಅವರ ತಮಿಳು ಆಕ್ಷನ್-ಡ್ರಾಮಾ “ವಲಿಮೈ” ಈ ತಿಂಗಳು ಬಿಡುಗಡೆಯಾಗಬೇಕಿದ್ದ ಚಿತ್ರಗಳು”. ಆದರೆ ಓಮಿಕ್ರಾನ್ ನಿಂದಾಗಿ ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ.

ಸನ್ನಿವೇಶವು ಇಷ್ಟು ಬೇಗ ಕಠೋರವಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು “ಜೆರ್ಸಿ” ನಿರ್ಮಾಪಕ ಅಮನ್ ಗಿಲ್ ಅವರು ಹೇಳಿದ್ದಾರೆ. ಜೆರ್ಸಿ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.

“ಕಳೆದ ವರ್ಷ ದೀಪಾವಳಿಗೂ ಮುನ್ನ ನಾವೆಲ್ಲರೂ ಏನು ಮಾಡುತ್ತಿದ್ದೆವೋ ಅದೇ ಪರಿಸ್ಥಿತಿ ಈಗಲೂ ಇದೆ. ಪರಿಸ್ಥಿತಿಗಳು ಯಾವಾಗ ಉತ್ತಮವಾಗುತ್ತವೆ ಮತ್ತು ಮುಂಬರುವ ದಿನಗಳು ಮತ್ತು ತಿಂಗಳುಗಳು ಹೇಗೆ ಇರುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ” ಎಂದು ಗಿಲ್ ಪಿಟಿಐಗೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಕ ರಾಹುಲ್ ಈ ನಿರ್ಧಾರಗಳೇ ಡೀನ್ ಎಲ್ಗರ್ ಗೆ ವರವಾಯಿತು: ಗಾವಸ್ಕರ್ ಟೀಕೆ

Fri Jan 7 , 2022
  ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುನುಭವಿಸಿದೆ. ಜೋಹಾನ್ಸ್ ಬರ್ಗ್ ಪಂದ್ಯವನ್ನು ಗೆದ್ದ ಡೀನ್ ಎಲ್ಗರ್ ಪಡೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಕೇಪ್ ಟೌನ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ನಿರ್ಣಾಯಕವಾಗಲಿದೆ. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಾಂಡರರ್ಸ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕನಾಗಿ ಮೊದಲ ಪಂದ್ಯದಲ್ಲೇ ರಾಹುಲ್ ನಿರಾಸೆ ಅನುಭವಿಸಿದರು. ದ.ಆಫ್ರಿಕಾ ನಾಯಕ […]

Advertisement

Wordpress Social Share Plugin powered by Ultimatelysocial