CRICKET:ಶೂನ್ಯ ಸುತ್ತಿ ದಾಖಲೆ ಬರೆದ ಇಂಗ್ಲೆಂಡ್ ತಂಡ;

ಪ್ರತಿಷ್ಠಿತ ಆಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೇವಲ ಎರಡೂವರೆ ದಿನಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡದ ವಿರುದ್ಧ ಅತ್ಯಂತ ಹೀನಾಯ ಸೋಲು ಅನುಭವಿಸಿದೆ. ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಕೇವಲ 68 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಸೋಲು ಕಂಡಿದೆ.

ಈ ಸೋಲಿನೊಂದಿಗೆ ಆಶಸ್ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಇರುವಂತೆಯೇ 0-3 ಅಂತರದಿಂದ ಆತಿಥೇಯರಿಗೆ ಶರಣಾಗಿದೆ.

ಇನ್ನು ಈ ಸರಣಿ ಸೋಲಿನ ಮುಖಭಂಗದ ಜೊತೆಗೆ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಬಾರಿ ಶೂನ್ಯ ಸುತ್ತಿದ ತಂಡ ಎಂಬ ಬೇಡದ ದಾಖಲೆಯನ್ನು ಒಂದಲ್ಲ ಎರಡನೇ ಬಾರಿಗೆ ಬರೆದಿದೆ. ಈ ವರ್ಷ ಇಂಗ್ಲೆಂಡ್ ತಂಡದ ಆಟಗಾರರು ಒಟ್ಟು 54 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯ ಸುತ್ತಿದ ತನ್ನದೇ ಕೆಟ್ಟ ದಾಖಲೆಯನ್ನು ಸರಿಗಟ್ಟಿದೆ. ಈ ಹಿಂದೆ 1998ರಲ್ಲಿಯೂ ಇಂಗ್ಲೆಂಡ್ ತಂಡ 54 ಬಾರಿ ಶೂನ್ಯ ಸುತ್ತಿದ ದಾಖಲೆಯನ್ನು ಬರೆದಿತ್ತು.

ಆಸ್ಟ್ರೇಲಿಯಾ ಆಡುವ ಬಳಗ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್,ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್

ಬೆಂಚ್: ಉಸ್ಮಾನ್ ಖವಾಜಾ, ಮೈಕೆಲ್ ನೆಸರ್, ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್

ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್

ಎರಡನೇ ಇನ್ನಿಂಗ್ಸ್‌ನಲ್ಲಿ 4 ಶೂನ್ಯ;ಮೆಲ್ಬರ್ನ್‌ಲ್ಲಿ ನಡೆದ ಆಶಸ್ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಹಸೀಬ್ ಹಮೀದ್ ಸೊನ್ನೆಗೆ ಔಟ್ ಆಗುವ ಮೂಲಕ 2021ರಲ್ಲಿ ಇಂಗ್ಲೆಂಡ್ ಪರವಾಗಿ 50ನೇ ಶೂನ್ಯ ಸುತ್ತಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಒಟ್ಟು ನಾಲ್ವರು ಆಟಗಾರರು ಶೂನ್ಯ ಸುತ್ತಿ ಫೆವಿಲಿಯನ್‌ಗೆ ಸೇರಿಕೊಂಡಿದ್ದರು. ಡೇವಿಡ್ ಮಲನ್, ಜ್ಯಾಕ್ ಲೀಚ್, ಮಾರ್ಕ್‌ವುಡ್ ಹಾಗೂ ಓಲ್ಲೀ ರಾಬಿನ್ಸನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಇತಿಹಾಸದ ಕಳಪೆ ದಾಖಲೆಗೆ ಕಾರಣವಾದರು.

 ಇಂಗ್ಲೆಂಡ್ ಪಾಲಿಗೆ ಕೆಟ್ಟ ವರ್ಷ;

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 2021 ಇಂಗ್ಲೆಂಡ್ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂಗ್ಲೆಂಡ್ ತಂಡ ಈ ಬಾರಿ 28 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು ಇದರಲ್ಲಿ ಬರೊಬ್ಬರಿ 13 ಬಾರಿ ಇಂಗ್ಲೆಂಡ್ ತಂಡ 200ಕ್ಕಿಂತ ಕಡಿಮೆ ರನ್‌ಗಳಿಸಿದೆ. ಅಲ್ಲದೆ ಮೆಲ್ಬರ್ನ್ ಪಂದ್ಯದ ಸೋಲಿನೊಂದಿಗೆ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ವರ್ಷ 9ನೇ ಸೋಲು ಅನುಭವಿಸಿದೆ. ಇದು ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡದ ಅತ್ಯಂತ ಕಳಪೆ ಸಾಧನೆಯಾಗಿದೆ.

 ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ;

ಇನ್ನು ಇಂಗ್ಲೆಂಡ್ ತಂಡದ ಈ ಹೀನಾಯ ಪ್ರದರ್ಶನದಲ್ಲಿ ತಂಡದ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ ಪ್ರಮುಖ ಕಾರಣ ಎಂಬುದಲ್ಲಿ ಅನುಮಾನವಿಲ್ಲ. ಇದಕ್ಕೆ ಆಶಸ್ ಸರಣಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿನ ಇಂಗ್ಲೆಂಡ್ ತಂಡದ ಪ್ರದರ್ಶನವೇ ಸಾಕ್ಷಿಯಾಗಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಕ್ರಮವಾಗಿ 147, 297, 236, 192, 185 ಮತ್ತು 68 ರನ್‌ಗಳಿಸಿದೆ. ಅಂದರೆ ಕೇವಲ ಎರಡು ಬಾರಿ ಮಾತ್ರವೇ ಇಂಗ್ಲೆಂಡ್ ತಂಡ 200ಕ್ಕೂ ಅಧಿಕ ರನ್‌ಗಳಿಸಲು ಯಶಸ್ವಿಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

PAN CARD:ನೀವು ಮಾಡುವ ʼಈ ಸಣ್ಣ ತಪ್ಪುʼ 10,000 ದಂಡ ಪಾವತಿಗೆ ಕಾರಣವಾಗ್ಬೋದು..!

Tue Dec 28 , 2021
  ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬ್ಯಾಂಕ್‌ ಸೇರಿ ಅರ್ಥಿಕ ಚಟುವಟಿಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಇನ್ನು ಕೇಂದ್ರ ಸರ್ಕಾರ ಕೂಡ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್‌ ಲಿಂಕ್‌ ಮಾಡುವುದು ಕಡ್ಡಾಯಗೊಳಿಸಿದೆ. ಹಣಕಾಸು ಸಚಿವಾಲಯದ  ಪ್ರಕಾರ, ನೀವು ನಿಮ್ಮ ಪ್ಯಾನ್ ಕಾರ್ಡ್ʼನ್ನ ನಿಗದಿತ ಕಾಲಮಿತಿಯೊಳಗೆ ಆಧಾರ್ʼನೊಂದಿಗೆ ಲಿಂಕ್ ಮಾಡದಿದ್ದರೆ, ಆಗ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯ ಎಂದು ಘೋಷಿಸಲಾಗುತ್ತೆ. ಸೆಬಿ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದ್ರೆ, ನಿಮ್ಮ ವಹಿವಾಟುಗಳು ಸಹ […]

Advertisement

Wordpress Social Share Plugin powered by Ultimatelysocial