PAN CARD:ನೀವು ಮಾಡುವ ʼಈ ಸಣ್ಣ ತಪ್ಪುʼ 10,000 ದಂಡ ಪಾವತಿಗೆ ಕಾರಣವಾಗ್ಬೋದು..!

 

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬ್ಯಾಂಕ್‌ ಸೇರಿ ಅರ್ಥಿಕ ಚಟುವಟಿಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಇನ್ನು ಕೇಂದ್ರ ಸರ್ಕಾರ ಕೂಡ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್‌ ಲಿಂಕ್‌ ಮಾಡುವುದು ಕಡ್ಡಾಯಗೊಳಿಸಿದೆ.

ಹಣಕಾಸು ಸಚಿವಾಲಯದ  ಪ್ರಕಾರ, ನೀವು ನಿಮ್ಮ ಪ್ಯಾನ್ ಕಾರ್ಡ್ʼನ್ನ ನಿಗದಿತ ಕಾಲಮಿತಿಯೊಳಗೆ ಆಧಾರ್ʼನೊಂದಿಗೆ ಲಿಂಕ್ ಮಾಡದಿದ್ದರೆ, ಆಗ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯ ಎಂದು ಘೋಷಿಸಲಾಗುತ್ತೆ.

ಸೆಬಿ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದ್ರೆ, ನಿಮ್ಮ ವಹಿವಾಟುಗಳು ಸಹ ನಿಲ್ಲುತ್ತವೆ. ನೀವು ಅದನ್ನ ಹಣಕಾಸು ವ್ಯವಹಾರಗಳಿಗೆ ಅಥವಾ ಇತರ ಯಾವುದೇ ರೀತಿಯ ಕೆಲಸಕ್ಕೆ ಬಳಸಿದ್ರೆ, ನೀವು ದಂಡ ವಿಧಿಸಬೇಕಾಗುತ್ತೆ. ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ರೆ , ಇನ್ನು ನೀವು ಅದನ್ನ ಯಾವುದೇ ರೀತಿಯ ಕೆಲಸಕ್ಕೆ ಬಳಸಲು ಸಾಧ್ಯವಾಗುವುದಿಲ್ಲ. ಇನ್ನು ನೀವು ಸಾಕಷ್ಟು ತೊಂದರೆಗಳನ್ನ ಎದುರಿಸಬೇಕಾಬೋದು.

ನೀವು ನಿಷ್ಕ್ರಿಯ ಪ್ಯಾನ್ ಕಾರ್ಡ್ʼನೊಂದಿಗೆ ವಹಿವಾಟು ನಡೆಸಿದ್ರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವ ಮೂಲಕ ನಿಮ್ಗೆ 10,000 ರೂ.ಗಳ ದಂಡ ವಿಧಿಸಬಹುದು. ಒಬ್ಬರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದಾರೆ ಎಂದು ಅನೇಕ ಬಾರಿ ಗಮನಿಸಲಾಗಿದೆ. ಇದು ಕೂಡ ಕಾನೂನಿನಲ್ಲಿ ಸರಿಯಲ್ಲ. ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ʼಗಳನ್ನ ಹೊಂದಿದ್ದರೆ, ನೀವು ದೊಡ್ಡ ದಂಡ ಪಾವತಿಸಬೇಕಾಗಬಹುದು.

ಇದು ನಿಮ್ಮ ಬ್ಯಾಂಕ್ ಖಾತೆಯನ್ನ ಫ್ರೀಜ್ ಮಾಡಲು ಕಾರಣವಾಗಬಹುದು. ಹಾಗಾಗಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ʼಗಳಿದ್ರೆ, ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ. ಇದನ್ನ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 272ಬಿಯಲ್ಲಿ ಒದಗಿಸಲಾಗಿದೆ. ಈ ನಿಬಂಧನೆಯ ಅಡಿಯಲ್ಲಿ, ನೀವು ಒಂದು ನಮೂನೆಯನ್ನು ಭರ್ತಿ ಮಾಡಬೇಕು.

ನೀವು ಅದನ್ನು ಆದಾಯ ತೆರಿಗೆ ವೆಬ್ ಸೈಟ್ʼನಿಂದ ಡೌನ್ ಲೋಡ್ ಮಾಡಬಹುದು. ಇದಕ್ಕಾಗಿ ನೀವು ‘Request For New PAN Card Or/ And Changes Or Correction in PAN Data’ ವೆಬ್ ಸೈಟ್ ಬಳಸಬಹುದು. ಪ್ಯಾನ್ ಡೇಟಾ ಲಿಂಕ್ʼನಲ್ಲಿನ ಮತ್ತು ಬದಲಾವಣೆಗಳು ಅಥವಾ ತಿದ್ದುಪಡಿಯನ್ನ ಕ್ಲಿಕ್ ಮಾಡುವ ಮೂಲಕ ನೀವು ಫಾರ್ಮ್ ಡೌನ್ ಲೋಡ್ ಮಾಡಬಹುದು. ನಂತ್ರ ಫಾರ್ಮ್ ಭರ್ತಿ ಮಾಡಬೇಕು ಮತ್ತು ಯಾವುದೇ ಎನ್ ಎಸ್ ಡಿಎಲ್ ಕಚೇರಿಗೆ ಸಲ್ಲಿಸಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ-ತಮಿಳುನಾಡು ಹೋಲಿಕೆ ಮಾಡಿದ ಮಾಜಿ ಕ್ರಿಕೆಟಿಗ ಕಪಿಲ್ ದೇವ್'ಗೆ ಕನ್ನಡಿಗರಿಂದ 'ನೀತಿ ಪಾಠ'!

Tue Dec 28 , 2021
ಕರ್ನಾಟಕಕ್ಕಿಂತ ತಮಿಳುನಾಡಿನ ಮೇಲೆ ನನಗೆ ಹೆಚ್ಚಿನ ಪ್ರೀತಿ ಎಂದಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಗೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ತರಾಟೆ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮವೊಂದರ ತಮ್ಮ ಭಾಷಣದಲ್ಲಿ ಮಾತನಾಡಿದ್ದ ಕಪಿಲ್ ದೇವ್, ಕರ್ನಾಟಕಕ್ಕಿಂತ ತಮಿಳುನಾಡಿನ ಮೇಲೆ ನನಗೆ ಹೆಚ್ಚು ಪ್ರೀತಿ. ಇದಕ್ಕೆ ಕಾರಣ ದಕ್ಷಿಣ ಭಾರತ ಆಹಾರ ಹಾಗೂ ಇಲ್ಲಿನ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ನಾನು ವಿಫಲನಾಗಿಲ್ಲ. ಹೀಗಾಗಿ ತಮಿಳುನಾಡು ಕಂಡರೆ ನನಗೆ ಇಷ್ಟ ಎಂದಿದ್ದರು. ತಮ್ಮ ಕ್ಲಬ್ ಕ್ರಿಕೆಟ್ […]

Advertisement

Wordpress Social Share Plugin powered by Ultimatelysocial