ಸಿಲಿಂಡರ್ ಬುಕ್ ಮಾಡಿ ಪಡೆಯಿರಿ 2700 ರೂ.: HP ಗ್ಯಾಸ್, ಇಂಡೇನ್, ಭಾರತ್ ಗ್ಯಾಸ್ ಗ್ರಾಹಕರಿಗೆ Paytm ಕ್ಯಾಶ್ ಬ್ಯಾಕ್ ಕೊಡುಗೆ

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ಮತ್ತು ತೈಲ ಬೆಲೆಗಳಿಂದಾಗಿ 2021 ರಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್‌ ಗಳ ಬೆಲೆ ನೂರಾರು ರೂಪಾಯಿಗಳಷ್ಟು ಹೆಚ್ಚಾಗಿದೆ. ಏರುತ್ತಿರುವ ಎಲ್‌ಪಿಜಿ ದರಗಳು ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವಾಗಲೇ ಪೇಟಿಎಂ ಕೊಂಚ ಬಿಡುವು ನೀಡಲು ಹೊಸ ಆಫರ್‌ ನೀಡಿದೆ.

ವಿಶೇಷ ಕೊಡುಗೆಯ ಅಡಿಯಲ್ಲಿ, Paytm ಗ್ರಾಹಕರು LPG ಸಿಲಿಂಡರ್‌ನ ಬುಕಿಂಗ್‌ ನಲ್ಲಿ 2700 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಹೊಸ Paytm ಗ್ರಾಹಕರು ತಮ್ಮ Paytm ವ್ಯಾಲೆಟ್‌ ಗಳಲ್ಲಿ ಕ್ಯಾಶ್‌ ಬ್ಯಾಕ್ ಸ್ವೀಕರಿಸಲು ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್‌ ಗಳನ್ನು ಬುಕ್ ಮಾಡಬೇಕಾಗುತ್ತದೆ.

LPG ಬುಕಿಂಗ್‌ ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದರ ಬಗ್ಗೆ ಮಾಹಿತಿ

Paytm ನೊಂದಿಗೆ LPG ಸಿಲಿಂಡರ್‌ಗಳನ್ನು ಬುಕ್ ಮಾಡುವ ಗ್ರಾಹಕರು 2,700 ರೂ.ವರೆಗೆ ನೇರ ಪ್ರಯೋಜನ ಪಡೆಯಬಹುದು. ಫಿನ್‌ ಟೆಕ್ ಕಂಪನಿಯು ಹೊಸ ಆಫರ್ ‘3 ಪೇ 2700 ಕ್ಯಾಶ್‌ಬ್ಯಾಕ್’ ಪ್ರಾರಂಭಿಸಿದೆ. ಇದರಲ್ಲಿ ಹೊಸ ಗ್ರಾಹಕರು ಮೂರು ವಿಭಿನ್ನ ತಿಂಗಳುಗಳವರೆಗೆ ಗ್ಯಾಸ್ ಸಿಲಿಂಡರ್‌ ಗಳನ್ನು ಸತತವಾಗಿ ಬುಕ್ ಮಾಡುವಲ್ಲಿ 2700 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಕೊಡುಗೆಯ ಅಡಿಯಲ್ಲಿ, Paytm ತನ್ನ ಅಪ್ಲಿಕೇಶನ್ ಮೂಲಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್‌ ಬುಕ್ ಮಾಡುವ ಗ್ರಾಹಕರಿಗೆ ಮೂರು ಪ್ರತ್ಯೇಕ ತಿಂಗಳುಗಳಲ್ಲಿ ಸತತ ಮೂರು ಬುಕಿಂಗ್‌ಗಳಿಗೆ 900 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಲು ಅನುಮತಿಸುತ್ತದೆ.

ಆಫರ್‌ನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಹೊಸ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ 10 ರಿಂದ 900 ರೂ.ವರೆಗೆ ಇರುತ್ತದೆ. ಹಳೆಯ ಗ್ರಾಹಕರು ಪ್ರತಿ ಬುಕಿಂಗ್‌ ನಲ್ಲಿಯೂ ಸಹ ಬಹುಮಾನಗಳನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಲು ಅವರು 5000 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಪಡೆಯಬಹುದು. Paytm ವ್ಯಾಲೆಟ್ ಅಥವಾ ಇತರ ಅತ್ಯಾಕರ್ಷಕ ಡೀಲ್‌ಗಳು ಅಥವಾ ವೋಚರ್‌ಗಳಲ್ಲಿ ಹಣಕ್ಕಾಗಿ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.

Paytm ಇತ್ತೀಚೆಗೆ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯ ಹೊಂದಿದ್ದು, ಅದು ಆನ್‌ ಲೈನ್ ಬುಕಿಂಗ್ ನಂತರ ಸಿಲಿಂಡರ್‌ ಗಳ ವಿತರಣೆಯನ್ನು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಗ್ರಾಹಕರು ತಮ್ಮ ಫೋನ್‌ಗಳಲ್ಲಿ LPG ಸಿಲಿಂಡರ್ ಅನ್ನು ರೀಫಿಲ್ ಮಾಡಲು ಜ್ಞಾಪನೆಗಳನ್ನು ಸಹ ಸ್ವೀಕರಿಸುತ್ತಾರೆ.

‘3 ಪೇ 2700 ಕ್ಯಾಶ್‌ಬ್ಯಾಕ್’ ಡೀಲ್ 3 ಪ್ರಮುಖ LPG ಕಂಪನಿಗಳ LPG ಸಿಲಿಂಡರ್‌ಗಳ ಬುಕಿಂಗ್‌ಗೆ ಅನ್ವಯಿಸುತ್ತದೆ. ಅವುಗಳೆಂದರೆ Indane, HP Gas ಮತ್ತು BharatGas.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗ್ಗಿನ ವಾಕಿಂಗ್​​ಗಿಂತ ರಾತ್ರಿ ನಡಿಗೆಯೇ ಆರೋಗ್ಯಕ್ಕೆ ಉತ್ತಮ

Sun Dec 26 , 2021
ಬೆಳಗ್ಗಿನ ನಡಿಗೆಗಿಂತ ರಾತ್ರಿಯ ನಡಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು. ಹೌದು, ರಾತ್ರಿ ಊಟದ ನಂತರ 15 ನಿಮಿಷಗಳ ಕಾಲವಾದರೂ ಅರಾಮದಾಯಕ ನಡಿಗೆಯನ್ನು ಮಾಡಬೇಕುಬದಲಾದ ಜೀವನಶೈಲಿಯಲ್ಲಿ ಕುಳಿತಲ್ಲೇ ಕುಳಿತು ಕೆಲಸ ಮಾಡಿ ದೇಹದಲ್ಲಿ ಬೊಜ್ಜು ತುಂಬಿರುತ್ತದೆ. ದೇಹಕ್ಕೆ ಜಡ ಹಿಡಿದು ಆಲಸ್ಯ ತುಂಬಿಕೊಂಡಿರುತ್ತದೆ. ಹೀಗಾಗಿ ನಿಮಗೆ ನಡಿಗೆ ಈ ರೀತಿಯ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ತೂಕ ಇಳಿಸಿಕೊಳ್ಳಲು, ಗ್ಯಾಸ್ಟ್ರಿಕ್​ ಅಥವಾ ಆಸಿಡಿಟಿ ಸಮಸ್ಯೆಗಳಿಗೂ ನಡಿಗೆ ಪರಿಹಾರವಾಗಿದೆ. […]

Advertisement

Wordpress Social Share Plugin powered by Ultimatelysocial