ಅನುಷ್ಕಾ, ಕೊಹ್ಲಿ ಬಾಡಿಗಾರ್ಡ್ ಸೋನು ವೇತನ ಎಷ್ಟಿದೆ ತಿಳಿಯಿರಿ.

ಭಾರತದ ಮಾಜಿ ಮುಖ್ಯಸ್ಥ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ದೇಶದಲ್ಲೇ ಅತೀ ಜನಪ್ರಿಯವಾದ ಜೋಡಿ ಎಂಬವುದರಲ್ಲಿ ತಪ್ಪಿಲ್ಲ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ತಮ್ಮ ಖಾಸಗಿ ಜೀವನದಲ್ಲಿ ಬೇರೆಯವರ ಎಂಟ್ರಿಯನ್ನು ಬಯಸುವುದಿಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡಾ ತಮ್ಮ ಖಾಸಗಿ ಜೀವನದ ಬಗ್ಗೆ ಮಾಧ್ಯಮದ ವರದಿ, ಊಹಾಪೋಹಗಳನ್ನು ಇಚ್ಛಿಸುವುದಿಲ್ಲ. ಹಾಗಾಗಿ ಸಾರ್ವಜನಿಕ ವಲಯದಲ್ಲಿ ತಮ್ಮ ಸುರಕ್ಷತೆಗೆ ಬಾಲಿವುಡ್, ಹಾಲಿವುಡ್, ಸ್ಯಾಂಡಲ್‌ವುಡ್ ಸ್ಟಾರ್‌ಗಳು ಅಧಿಕ ಖರ್ಚನ್ನೇ ಮಾಡುತ್ತಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯೂ ಕೂಡಾ ತಮ್ಮ ಸುರಕ್ಷತೆಗಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಂತೆ ಭಾರತೀಯ ಸೆಲೆಬ್ರೆಟಿಗಳು ವೈಯಕ್ತಿಕ ಬಾಡಿಗಾರ್ಡ್‌ಗಳನ್ನು ಹೊಂದಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಾಡಿಗಾರ್ಡ್ ಹೆಸರು ಸೋನು. ಹಲವಾರು ವರ್ಷಗಳಿಂದ ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸೋನು ನಿಜವಾದ ಹೆಸರು ಸೋನು ಅಲ್ಲ. ಬೇರೆಯೇ ಇದೆ. ಸೋನು ನಿಜವಾದ ಹೆಸರು ಏನು, ಅನುಷ್ಕಾ ಶರ್ಮಾ ದಂಪತಿ ಸೋನುಗೆ ಎಷ್ಟು ವೇತನವನ್ನು ನೀಡುತ್ತಾರೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ… ಸೋನು ನಿಜ ಹೆಸರು ಏನು? ಸೋನು ನಿಜ ಹೆಸರು ಪ್ರಕಾಶ್ ಸಿಂಗ್ ಆಗಿದೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಡೆಯಿಂದ ದೊಡ್ಡ ಮೊತ್ತದ ವೇತನವನ್ನು ಪ್ರಕಾಶ್ ಸಿಂಗ್ ಪಡೆಯುತ್ತಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ವಿವಾಹವಾಗುವುದಕ್ಕೂ ಮುನ್ನ ಸೋನು ಹಲವಾರು ವರ್ಷಗಳಿಂದ ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಈಗಲೂ ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಆಗಿ ಸೋನು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪ್ರಕಾಶ್ ಸಿಂಗ್ ವೇತನ ಎಷ್ಟುಪ್ರಕಾಶ್ ಸಿಂಗ್/ ಸೋನು ವೇತನ ವಾರ್ಷಿಕವಾಗಿ 1.2 ಕೋಟಿ ರೂಪಾಯಿ ಆಗಿದೆ. ಇದು ಹಲವಾರು ಸಂಸ್ಥೆಗಳು ಸಿಇಒಗಳ ಸಿಟಿಸಿಗಿಂತ ಅಧಿಕವಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಬಾಡಿಗಾರ್ಡ್ ಅನ್ನು ಬಾಡಿಗಾರ್ಡ್‌ಗಿಂತ ಅಧಿಕವಾಗಿ ಕಾಣುತ್ತಿದ್ದಾರೆ. ಕುಟುಂಬದ ಓರ್ವ ವ್ಯಕ್ತಿಯಾಗಿದ್ದಾರೆ. ಪ್ರತಿ ವರ್ಷವೂ ಅನುಷ್ಕಾ ಶರ್ಮಾ ಸೋನು ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ಅನುಷ್ಕಾ ಶರ್ಮಾ ತಮ್ಮ ಬಾಡಿಗಾರ್ಡ್ ಸೋನು ಜನ್ಮದಿನವನ್ನು ಆಚರಣೆ ಮಾಡುವ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋನು ಅನುಷ್ಕಾ ಶರ್ಮಾರನ್ನು ವಿವಾಹವಾದ ಬಳಿಕ ವಿರಾಟ್ ಕೊಹ್ಲಿ ಬಾಡಿಗಾರ್ಡ್ ಆಗಿಯೂ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಅನುಷ್ಕಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಹಾಗೂ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅನುಷ್ಕಾ ಸಾರ್ವಜನಿಕ ಪ್ರದೇಶಕ್ಕೆ ಬಂದಾಗಲೆಲ್ಲಾ ಸೋನು ಬಾಡಿಗಾರ್ಡ್ ಆಗಿ ಅನುಷ್ಕಾ ಜೊತೆಯಲ್ಲಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ.

Sat Jan 21 , 2023
ಬೆಂಗಳೂರು, ಜನವರಿ 21: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆಯುವಲ್ಲಿ ಮೂರು ಪಕ್ಷಗಳು ಹಲವಾರು ಕಸರತ್ತು ನಡೆಸಿವೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಂಚರತ್ನ ಯಾತ್ರೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತವಾಗಿದೆ. ಕಾಂಗ್ರೆಸ್‌ ಪಕ್ಷವು ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡಿದೆ. ಈ ಬಾರಿಯ ಚುನಾವಣೆ ಮೂರು ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಲಿದೆ. ಈಗಾಗಲೇ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನಿಂದಲೂ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ […]

Advertisement

Wordpress Social Share Plugin powered by Ultimatelysocial