ಖಾಲಿ ಹೊಟ್ಟೆಯಲ್ಲಿ ಈ 4 ಕೆಲಸಗಳನ್ನು ಎಂದಿಗೂ ಮಾಡಬಾರದು.!

 

ಮ್ಮ ಬೆಳಗಿನ ದಿನಚರಿ ಆರೋಗ್ಯಕರವಾಗಿರಬೇಕು. ಇಲ್ಲದಿದ್ದರೆ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಕ್ರಮ ಹೇಗಿದೆ? ನಿಮ್ಮ ಜೀವನ ಶೈಲಿ ಯಾವ ರೀತಿಯಿದೆ ಅನ್ನೋದು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.ಆದ್ದರಿಂದ ದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಅಪಾಯಕಾರಿ, ಅವು ಯಾವುವು ಅನ್ನೋದನ್ನು ನೋಡೋಣ. ಬೆಳಗ್ಗೆ ಎದ್ದ ನಂತರ ನಿಮ್ಮ ಮನಸ್ಥಿತಿಯನ್ನು ಧನಾತ್ಮಕವಾಗಿ ಇಟ್ಟುಕೊಳ್ಳಿ. ಬೆಳಗ್ಗೆ ಬೇಗನೆ ಏಳುವುದು, ಕಚೇರಿಗೆ ಹೋಗುವ ಆಲೋಚನೆ ಕೋಪಗೊಳ್ಳುವಂತೆ ಮಾಡುತ್ತದೆ. ನೀವು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳದೇ ಇದ್ದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿದ್ದಾಗ ಕೋಪ ಮಾಡಿಕೊಳ್ಳುವುದರಿಂದ ಹೃದಯದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಜನರು ಬೆಳಗ್ಗೆ ಎದ್ದ ನಂತರ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಚಹಾ ಅಥವಾ ಕಾಫಿಯಿಲ್ಲದೆ ಅನೇಕರಿಗೆ ದಿನವೇ ಪ್ರಾರಂಭವಾಗುವುದಿಲ್ಲ, ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳಿಗೆ ಕಾರಣವಾಗಬಹುದು.ಕೆಲವರಿಗ ಆಗಾಗ ಚೂಯಿಂಗ್ ಗಮ್ ಅಗಿಯುವ ಚಟವಿದ್ದು, ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಲು ಆರಂಭಿಸುತ್ತಾರೆ. ಇದು ಎರಡು ಅನಾನುಕೂಲಗಳನ್ನು ಹೊಂದಿದೆ, ಮೊದಲನೆಯದು ಚೂಯಿಂಗ್ ಜಗಿಯುವುದರಿಂದ ಒಸಡುಗಳು ಸಿಹಿಯಾಗಿ ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ ಚೂಯಿಂಗ್‌ ಗಮ್‌ ಅಗಿಯುವುದರಿಂದ ಜೀರ್ಣಕಾರಿ ಆಮ್ಲಗಳು ಹೊಟ್ಟೆಯಲ್ಲಿ ಬಿಡುಗಡೆಯಾಗುತ್ತವೆ ಮತ್ತು ಆಸಿಡಿಟಿ ಉಂಟಾಗುತ್ತದೆ.ಬೆಳಿಗ್ಗೆ ಅಥವಾ ರಾತ್ರಿ ಯಾವುದೇ ಸಮಯದಲ್ಲಾದರೂ ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸಿದರೆ ಅದು ನಿಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸಬಹುದು ಮತ್ತು ನಂತರ ದೇಹದಲ್ಲಿ ವೇಗವಾಗಿ ಹರಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಾಡಿ ಬಡಿತವು ಕಡಿಮೆಯಾಗಲು ಪ್ರಾರಂಭಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೂಕ ಇಳಿಸಿಕೊಳ್ಳಲು ಸಹಾಯಕ ಮೊಟ್ಟೆ

Fri Dec 30 , 2022
ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ ತೂಕ ಇಳಿಸಲು ಸಹಾಯ ಮಾಡುತ್ತೆ ಎಂಬ ಸಂಗತಿ ತಿಳಿದಿಲ್ಲ.ಆಹಾರವನ್ನು ಬಿಟ್ಟು ನೀವು ತೂಕ ಇಳಿಸಿಕೊಳ್ಳಬೇಕಾಗಿಲ್ಲ. ಮೊಟ್ಟೆಯನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡಿದ್ರೂ ನಿಮ್ಮ ತೂಕ ಇಳಿಯುತ್ತದೆ.ಮೊಟ್ಟೆಯನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಮ್ಲೆಟ್ ತಯಾರಿಸುತ್ತಾರೆ. ಆದ್ರೆ […]

Advertisement

Wordpress Social Share Plugin powered by Ultimatelysocial