19 ವರ್ಷದೊಳಗಿನವರ ವಿಶ್ವಕಪ್‌: ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಇಂಗ್ಲೆಂಡ್‌ !

ನಾರ್ತ್‌ಸೌಂಡ್‌, ಆಂಟಿಗಾ: ಅಫ್ಗಾನಿಸ್ತಾನದ ಸವಾಲು ಮೀರಿದ ಇಂಗ್ಲೆಂಡ್‌ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿತು. ಇದರೊಂದಿಗೆ 24 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ತಲುಪಿದ ಸಾಧನೆ ಮಾಡಿತು.ಕೆಚ್ಚೆದೆಯ ಹೋರಾಟ ನೀಡಿದ ಅಫ್ತಾನಿಸ್ತಾನ ತಂಡವು ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಡಕ್ವರ್ತ್‌ ಲೂಯಿಸ್‌ ನಿಯಮದಡಿ 15 ರನ್‌ಗಳಿಂದ ಇಂಗ್ಲೆಂಡ್‌ಗೆ ಮಣಿಯಿತು. ಇದರೊಂದಿಗೆ ಮೊದಲ ಬಾರಿ ಪ್ರಶಸ್ತಿ ಜಯಿಸುವ ತಂಡದ ಕನಸು ಕೈಗೂಡಲಿಲ್ಲ.ಮಳೆ ಕಾಡಿದ ಪಂದ್ಯದಲ್ಲಿ ಓವರ್‌ಗಳನ್ನು 47ಕ್ಕೆ ಸೀಮಿತಗೊಳಿಸಲಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗೆ 231 ರನ್‌ ಗಳಿಸಿತು. ಅಫ್ಘಾನಿಸ್ತಾನದ ಗೆಲುವಿಗೆ ಡಕ್ವರ್ತ್‌ ಲೂಯಿಸ್‌ ನಿಯಮದಡಿ 231 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಆದರೆ ಕಣಿವೆ ದೇಶದ ಯುವ ತಂಡವು 9 ವಿಕೆಟ್‌ ಕಳೆದುಕೊಂಡು 215 ರನ್‌ ಗಳಿಸಲಷ್ಟೇ ಶಕ್ತವಾಯಿತು.ಇಂಗ್ಲೆಂಡ್‌ ತಂಡದ ಆರಂಭ ಚೆನ್ನಾಗಿರಲಿಲ್ಲ. ಮೊದಲ ವಿಕೆಟ್‌ ರೂಪದಲ್ಲಿ ಜಾಕೊಬ್ ಬೆಥೆಲ್ (2) ಔಟಾದಾಗ ತಂಡದ ಮೊತ್ತ ಕೇವಲ ಒಂಬತ್ತು ರನ್‌ಗಳಾಗಿತ್ತು. ಈ ಹಂತದಲ್ಲಿ ಬ್ಯಾಟರ್‌ ಜಾರ್ಜ್ ಥಾಮಸ್‌ (50) ಮತ್ತು ನಾಯಕ ಟಾಮ್ ಪ್ರೆಸ್ಟ್ (17) ತಂಡಕ್ಕೆ ಆಸರೆಯಾದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 43 ರನ್‌ ಸೇರಿಸಿದರು. ಆ ಬಳಿಕ ತಂಡ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಜಾರ್ಜ್‌ ಬೆಲ್‌ (ಔಟಾಗದೆ 56) ಮತ್ತು ಅಲೆಕ್ಸ್ ಹಾರ್ಟನ್‌ (ಔಟಾಗದೆ 53) ಮುರಿಯದ ಏಳನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.ಅಫ್ಗಾನಿಸ್ತಾನ ಪರ ನವೀದ್ ಜದ್ರಾನ್‌ (67ಕ್ಕೆ 2), ನೂರ್ ಅಹಮದ್‌ (32ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.ಗುರಿ ಬೆನ್ನತ್ತಿದ ಕಣಿವೆ ದೇಶದ ತಂಡದ ಆರಂಭ ಕೂಡ ಕಳಪೆಯಾಗಿತ್ತು. ನಂಗೆಯಲಿಯಾ ಖರೋಟೆ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದಾದ ತಂಡದ ಮೊತ್ತ ಒಂದು ರನ್ ಆಗಿತ್ತು. ಮೊಹಮ್ಮದ್ ಇಶಾಕ್‌ (43) ಮತ್ತು ಅಲ್ಲಾ ನೂರ್‌ (60) ಎರಡನೇ ವಿಕೆಟ್‌ಗೆ 93 ರನ್‌ ಸೇರಿಸಿ ತಂಡದಲ್ಲಿ ಜಯದ ಆಸೆ ಚಿಗುರಿಸಿದರು. ಇವರಿಬ್ಬರ ವಿಕೆಟ್‌ ಪತನದ ಬಳಿಕ ಅಬ್ದುಲ್ ಹಾದಿ (ಔಟಾಗದೆ 37), ಬಿಲಾಲ್ ಅಹಮದ್‌ (33) ಮತ್ತು ನೂರ್ ಅಹಮದ್‌ (25) ಹೋರಾಟ ತೋರಿದರು.ಕೊನೆಯ 10 ಎಸೆತಗಳಲ್ಲಿ ಗೆಲುವಿಗೆ 18 ರನ್‌ ಬೇಕಿದ್ದವು. ಈ ವೇಳೆ ಅಫ್ಗಾನಿಸ್ತಾನದ ನಾಲ್ಕು ವಿಕೆಟ್‌ ಬಾಕಿ ಇದ್ದವು. 46ನೇ ಓವರ್‌ ಎಸೆದ ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್‌ ರೆಹಾನ್ ಅಹಮದ್‌ ಕೇವಲ ಒಂದು ರನ್‌ ನೀಡಿ ಮೂರು ವಿಕೆಟ್ ಪಡೆದು ಅಫ್ಗಾನಿಸ್ತಾನದ ಜಯದ ಆಸೆಗೆ ತಣ್ಣೀರೆರೆಚಿದರು.1998ರಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಯಿ ತನ್ನ ಪುಟ್ಟ ಮಗಳನ್ನು ಕರಡಿ ಆವರಣಕ್ಕೆ ಎಸೆಯುತ್ತಾಳೆ; ಭಯಾನಕ ವಿಡಿಯೋ ವೈರಲ್ ಆಗಿದೆ

Wed Feb 2 , 2022
  ತಾಯಿ ತನ್ನ ಪುಟ್ಟ ಮಗಳನ್ನು ಕರಡಿ ಆವರಣಕ್ಕೆ ಎಸೆಯುತ್ತಾಳೆ; ಭಯಾನಕ ವಿಡಿಯೋ ವೈರಲ್ ಆಗಿದೆ ಪ್ರಾಣಿಸಂಗ್ರಹಾಲಯವು ಕಾಡು ಪ್ರಾಣಿಗಳು ಮತ್ತು ಸಾಕುಪ್ರಾಣಿಗಳನ್ನು ಸೆರೆಯಲ್ಲಿ ಪ್ರದರ್ಶಿಸುವ ಸ್ಥಳವಾಗಿದೆ. ಪ್ರವಾಸಿಗರು ಮೃಗಾಲಯಕ್ಕೆ ಹೋಗುವುದನ್ನು ಆನಂದಿಸುತ್ತಾರೆ ಏಕೆಂದರೆ ಎಲ್ಲಾ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಈ ಪ್ರಾಣಿಗಳನ್ನು ವೀಕ್ಷಿಸುವಾಗ ಒಬ್ಬರು ಸುರಕ್ಷಿತವಾಗಿರಬಹುದು. ಕೆಲವೊಮ್ಮೆ ಕಾಡು ಪ್ರಾಣಿಗಳನ್ನು ನೋಡುವುದು ಅಥವಾ ಅವುಗಳನ್ನು ಕೀಟಲೆ ಮಾಡುವುದು ಅಪಾಯಕಾರಿ ವಿಷಯವಾಗಿದೆ. ಪ್ರಾಣಿಗಳು ಸಂದರ್ಶಕರ ಮೇಲೆ ದಾಳಿ ಮಾಡಿದ ಅನೇಕ […]

Advertisement

Wordpress Social Share Plugin powered by Ultimatelysocial