ಅಪರಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ  3263 ರೌಡಿಗಳಿಗೆ ಮುಕ್ತಿ 

ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ 3,263 ರೌಡಿಶೀಟರ್‌ಗಳಲ್ಲಿ 1256 ಮಂದಿಯ ರೌಡಿಶೀಟ್ ಗಳನ್ನು ಮಂಗಳೂರಲ್ಲಿ ಮುಕ್ತಗೊಳಿಸಲಾಯಿತು. ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರೌಡಿ ಶೀಟರ್ ಹಾಳೆಯಿಂದ ಮುಕ್ತ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಉದ್ಯಮಿ ಡಾ.ಎ.ಜೆ.ಶೆಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ, ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಹಬೀಬ್ ರೆಹಮಾನ್ ಅತಿಥಿಗಳಾಗಿದ್ದರು. ಕಮಿಷನರೇಟ್ ವ್ಯಾಪ್ತಿಯ 3263 ರೌಡಿಶೀಟರ್‌ಗಳಲ್ಲಿ 1256 ಮಂದಿ ರೌಡಿಶೀಟ್ ತೆರವು ಮಾಡಲಾಗಿದೆ.

ಅವರಲ್ಲಿ 80 ಮಂದಿ ವಯಸ್ಸಾದವರಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಮುಕ್ತವಾದ ರೌಡಿಗಳ ಸಂಖ್ಯೆ 663, ಚಟುವಟಿಕೆಯಲ್ಲಿ ಇಲ್ಲದೆ ಇರುವವರು 523. ಸುಮಾರು 5ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವವರನ್ನು ಪರಿಗಣಿಸಿ ರೌಡಿಶೀಟರ್ ತೆರವು ಮಾಡಲಾಗಿದೆ. ಈ ಪರಿಶೀಲನಾ ಕಾರ್ಯಕ್ಕೆ ಕಮಿಷನರ್ ವ್ಯಾಪ್ತಿಯ ಅಧಿಕಾರಿಗಳು 3 ತಿಂಗಳಿನಿಂದ ಶ್ರಮಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ, ಎನ್. ಶಶಿಕುಮಾರ್ ಹೇಳಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

  ಹೆಲಿಕಾಪ್ಟರ್‌ ದುರಂತದಲ್ಲಿ ವಿಧಿವಶರಾದ  CDS ಚಾಪರ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ರವರಿಗೆ  ಗೌರವ ಶ್ರದ್ಧಾಂಜಲಿ

Fri Dec 17 , 2021
CDS ಚಾಪರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಐಎಎಫ್ ಕಮಾಂಡ್ ಆಸ್ಪತ್ರೆಯಲ್ಲಿ ವಿಧಿವಶರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಅಂತಿಮ ಗೌರವಗಳಿಗಾಗಿ ಇದೀಗ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಆವರಣದಲ್ಲಿ ಕರೆತರಲಾಗುತ್ತಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಸರ್ಕಾರದ ಪರವಾಗಿ ವ್ರೀತ್ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial