CYBER CRIME: ಡೇಂಜರಸ್‌ ಹ್ಯಾಕರ್ಸ್‌ಗಳ ವಿವರ ಇಲ್ಲಿದೆ!

ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಮುಂದುವರೆದ ಟೆಕ್ನಾಲಜಿಯಿಂದ ಎಲ್ಲವೂ ಇಂದು ಸುಲಭವಾಗಿದೆ. ಅಂಗೈನಲ್ಲಿಯೇ ಇಡೀ ವಿಶ್ವದ ಮಾಹಿತಿಯನ್ನು ತಿಳಿದುಕೊಳ್ಳುವ ಮಟ್ಟಿಗೆ ತಂತ್ರಜ್ಞಾನ ಸಹಾಯಕವಾಗಿದೆ. ಆದರೆ ಟೆಕ್ನಾಲಜಿ ಎಷ್ಟು ಉಪಯೋಗವಾಗುತ್ತಿದೆಯೋ ಅದೇ ರೀತಿ ಕೆಟ್ಟ ವಿಚಾರಗಳಿಗೂ ಕೂಡ ಸಾಖಷ್ಟಿಯಾಗುತ್ತಿದೆ.

ಮುಂದುವರೆದ ಟೆಕ್ನಾಳಜಿಯನ್ನು ಬಳಸಿಕೊಂಡು ಸೈಬರ್‌ ಕ್ರೈಮ್‌ಗಳು ಇಂದು ಎಗ್ಗಿಲ್ಲದೆ ನಡೆಯುತ್ತಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಪ್ರಮುಖ ವಿಚಾರಗಳಲ್ಲಿ ಸೈಬರ್‌ ಕ್ರೈಮ್‌ ಕೂಡ ಸೇರಿ ಕೊಂಡಿದೆ.

ಸೈಬರ್‌
ಹೌದು, ಇಂದು ಸೈಬರ್‌ ಕ್ರೈಮ್‌ ಹೆಚ್ಚಿನ ಸದ್ದು ಮಾಡುತ್ತಿದೆ. ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತು ಬೇರೆಯವರ ಡೇಟಾ ಕದಿಯುವ ಕೆಲಸ ನಡೆಯುತ್ತಿದೆ. ಬೇರೆಯವರ ಬ್ಯಾಂಕ್‌ ಅಕೌಂಟ್‌ ಹ್ಯಾಕ್‌ ಮಾಡಿ ಹಣ ಕದಿಯುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಅಷ್ಟೇ ಯಾಕೆ ವಿಶ್ವದ ಪ್ರಮುಖ ಗಣ್ಯವ್ಯಕ್ತಿಗಳ ಸೊಶೀಯಲ್‌ ಮೀಡಿಯಾ ಅಕೌಂಟ್‌ಗಳನ್ನ ಹ್ಯಾಕ್‌ ಮಾಡಿ ತಮ್ಮ ವಿಚಾರಗಳನ್ನು ಹರಡುವ ಕೆಲಸ ನಡೆಯುತ್ತಿದೆ. ಹೀಗೆ ಹ್ಯಾಕಿಂಗ್‌ ಅನ್ನೋ ವಿಚಾರ ಇಡೀ ಪ್ರಪಂಚವನ್ನೇ ಕಾಡುತ್ತಿದೆ. ಹೀಗೆ ಹ್ಯಾಕಿಂಗ್‌ ಮೂಲಕವೇ ಅನೇಕ ಮಂದಿ ಕುಖ್ಯಾತಿ ಪಡೆದಿದ್ದಾರೆ. ಹಾಗಾದ್ರೆ ಇಡೀ ಪ್ರಪಂಚದಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿರುವ ಪ್ರಮುಖ ಹ್ಯಾಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಹ್ಯಾಕಿಂಗ್ ಎಂದರೇನು?

ಬೇರೆಯವರ ಡಿಜಿಟಲ್‌ ಖಾತೆಗಳಿಗೆ ಅನಧಿಕೃತವಾಗಿ ಪ್ರವೇಶ ಪಡೆಯುವುದನ್ನ ಹ್ಯಾಕಿಂಗ್‌ ಅಮತಾ ಹೆಸರಿಸಲಾಗುತ್ತದೆ. ಇದಕ್ಕಾಗಿ ಬೇರೆಯವರ ಸಿಸ್ಟಮ್ ಮತ್ತು ನೆಟ್ವರ್ಕ್ ದೋಷಗಳನ್ನು ಗುರುತಿಸುವ ಮತ್ತು ದುರ್ಬಳಕೆ ಮಾಡುವ ಕ್ರಿಯೆ ಕಂಪ್ಯೂಟರ್ ಹ್ಯಾಕಿಂಗ್ ಆಗಿದೆ. ಹಾಗಂತ ಎಲ್ಲಾ ಹ್ಯಾಕಿಂಗ್ ವಿಚಾರಗಳು ದುರುದ್ದೇಶಪೂರಿತವಲ್ಲ. ಕೆಲವೊಮ್ಮೆ ಸರ್ಕಾರದ ಕೆಲಸಗಳಿಗಾಗಿ ಕೂಡ ಹ್ಯಾಕಿಂಗ್‌ ನಡೆಯುತ್ತದೆ. ಆದರೆ ಹೆಚ್ಚಿನ ಹ್ಯಾಕಿಂಗ್‌ಗಳು ದುರುದ್ದೇಶಪೂರಿತ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಾರೆ. ಹ್ಯಾಕಿಂಗ್‌ ಅನ್ನೊದು ನೆನ್ನೆ ಮೊನ್ನೆ ಶುರುವಾಗಿದ್ದಲ್ಲ. ಹ್ಯಾಕಿಂಗ್‌ನಲ್ಲಿ ಸಾಕಷ್ಟು ಸದ್ದು ಮಾಡಿದ ಅತ್ಯಂತ ಕುಖ್ಯಾತ ಹ್ಯಾಕರ್‌ಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಕೆವಿನ್ ಮಿಟ್ನಿಕ್

ಹ್ಯಾಕಿಂಗ್‌ ವಿಚಾರ ಬಂದಾಗ ಕೆವಿನ್‌ ಮಿಟ್ನಿಕ್‌ ಹೆಸರು ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅಮೆರಿಕದಲ್ಲಿ ಹ್ಯಾಕಿಂಗ್‌ ವಿಚಾರದಲ್ಲಿ ಈತ ಒಂದು ಸೆಮಿನಲ್ ಫಿಗರ್. 1981ರಲ್ಲಿಯೇ ಹ್ಯಾಕಿಂಗ್‌ ವಿಚಾರದಲ್ಲಿ ಈತ ಸಿಕ್ಕಿಬಿದ್ದಿದ್ದ ಎನ್ನಲಾಗುತ್ತದೆ. ಪೆಸಿಫಿಕ್ ಬೆಲ್‌ನಿಂದ ಕಂಪ್ಯೂಟರ್ ಕೈಪಿಡಿಗಳನ್ನು ಕದಿಯುವ ಆರೋಪ ಮಾಡಲಾಗಿತ್ತು. 1989 ರಲ್ಲಿ, ಡಿಜಿಟಲ್ ಸಲಕರಣೆ ನಿಗಮದ ನೆಟ್ವರ್ಕ್ ಅನ್ನು ಹ್ಯಾಕ್ ಮಾಡಿದ್ದರಿಂದ ಈತನನ್ನು ಬಂದಿಸಲಾಗಿತ್ತು.ಆದರೆ ಬಿಡುಗಡೆಯ ನಂತರ ಅವರು ಪೆಸಿಫಿಕ್ ಬೆಲ್ನ ಧ್ವನಿಯಂಚೆ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿದ್ದರು ಎನ್ನಲಾಗಿದೆ. ಆದರೆ ಈತ ತನ್ನ ಹ್ಯಾಕಿಂಗ್ ವೃತ್ತಿಜೀವನದುದ್ದಕ್ಕೂತಾಣು ಹ್ಯಾಕ್‌ ಮಾಡಿದ ಡೇಟಾವನ್ನು ಎಂದಿಗೂ ಬಳಸಿಕೊಳ್ಳಲಿಲ್ಲ ಎನ್ನಲಾಗುತ್ತದೆ.

ಆಡ್ರಿಯನ್ ಲಾಮೊ

2001 ರಲ್ಲಿ ಬೆಳಕಿಗೆ ಬಂದ 20 ವರ್ಷ ವಯಸ್ಸಿನ ಆಡ್ರಿಯನ್ ಲಾಮೊ ಕೂಡ ಕುಖ್ಯಾತ ಹ್ಯಾಕರ್ಸ್‌ ಆಗಿದ್ದಾನೆ. ಈತನ ಹ್ಯಾಕಿಂಗ್‌ ಕೌಶಲ್ಯಕ್ಕೆ ಸರ್ಕಾರದ ಹಲವು ಇಲಾಖೆಗಳ ಮಾಹಿತಿಯೇ ಕಳುವಾಗಿದ್ದ ಘನಟೆಗಳು ಕೂಡ ನಡೆದಿವೆ. ಈ ಹ್ಯಾಕರ್‌ಗೆ ಯಾವುದೇ ವಿಳಾಸವಿಲ್ಲ. ಈತ ಯಾವಾಗ ಎಲ್ಲಿರುತ್ತಾನೇ ಅನ್ನೊದು ಕೂಡ ತಿಳಿದಿಲ್ಲ. ತನ್ನ ಕೆಲಸ ಸಾಧನೆಗಾಗಿ ಯಾವ ಇಲಾಖೆಯನ್ನು ಬೇಖಾದರೂ ಹ್ಯಾಕ್‌ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಲಾಮೋ ಮಾನಿಕರ್ ಅನ್ನು “ದಿ ಹೋಮ್ಲೆಸ್ ಹ್ಯಾಕರ್” ಎಂದು ಹೇಳಲಾಗುತ್ತದೆ.

ಆಲ್ಬರ್ಟ್ ಗೊನ್ಜಾಲೆಜ್

ನ್ಯೂಯಾರ್ಕ್ ಡೈಲಿ ನ್ಯೂಸ್ ಪ್ರಕಾರ, ಗೊನ್ಜಾಲೆಜ್ ತನ್ನ ಮಿಯಾಮಿ ಪ್ರೌಢಶಾಲೆಯಲ್ಲಿ ಇರುವಾಗಲೇ ಹ್ಯಾಕ್‌ ಮಾಡುತ್ತಿದ್ದ ಎನ್ನಲಾಗಿದೆ. ಈತ ಕ್ರಿಮಿನಲ್ ವಾಣಿಜ್ಯ ಸೈಟ್ ShadowCrew.com ನಲ್ಲಿ ಸಕ್ರಿಯನಾಗಿದ್ದು, 22 ನೇ ವಯಸ್ಸಿನಲ್ಲಿ, ಲಕ್ಷಾಂತರ ಕಾರ್ಡ್ ಖಾತೆಗಳಿಂದ ಡೇಟಾ ಕದ್ದು ಮಾರಿರುವ ಆರೋಪವಿದೆ. ಅದರಲ್ಲೂ ಗೊನ್ಜಾಲೆಜ್ 180 ದಶಲಕ್ಷ ಡೆಬಿಟ್‌ ಕಾರ್ಡ್ ಖಾತೆಗಳ ಮಾಹಿತಿ ಕದ್ದು ಮಾರಾಟ ಮಾಡಿದ್ದ ಎನ್ನಲಾಗಿದೆ. 2005ರಲ್ಲಿ ಈತ ಮಾಡಿದ ಹ್ಯಾಕಿಂಗ್‌ ದಾಳಿಯು ಕ್ರೆಡಿಟ್ ಮಾಹಿತಿಯ ಮೇಲೆ ನಡೆದ ಮೊದಲ ಸರಣಿ ಡೇಟಾ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತದೆ.

ಮ್ಯಾಥ್ಯೂ ಬೆವನ್ ಮತ್ತು ರಿಚರ್ಡ್ ಪ್ರೈಸ್

ಮ್ಯಾಥ್ಯೂ ಬೆವನ್ ಮತ್ತು ರಿಚರ್ಡ್ ಪ್ರೈಸ್ ಎಂದರೆ 1996 ರಲ್ಲಿ ಮಲ್ಟಿ ಮಿಲಿಟರಿ ಜಾಲಗಳಲ್ಲಿ ಹ್ಯಾಕ್ ಮಾಡಿದ ಬ್ರಿಟಿಷ್ ಹ್ಯಾಕರ್ಸ್‌ ಟೀಂ ಆಗಿದೆ. ಗ್ರಿಫ್ಸ್ ಏರ್ ಫೋರ್ಸ್ ಬೇಸ್, ಡಿಫೆನ್ಸ್ ಇನ್ಫರ್ಮೇಷನ್ ಸಿಸ್ಟಮ್ ಏಜೆನ್ಸಿ ಮತ್ತು ಕೊರಿಯನ್ ಅಟಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ (ಕರಿ) ಸೇರಿದಂತೆ ಅಮೆರಿಕನ್ ಮಿಲಿಟರಿ ವ್ಯವಸ್ಥೆಗಳ ಮೇಲೆ ಹ್ಯಾಕಿಂಗ್‌ ಮಾಡಿದ ಆರೋಪ ಈ ಸಂಸ್ಥೆ ಮೇಲಿದೆ. ಮ್ಯಾಥ್ಯೂ ಬೆವೆನ್‌ ಮತ್ತು ಪ್ರೈಸ್ ಮೂಲಕ ಮಿಲಿಟರಿ ಜಾಲಗಳನ್ನು ಸಹ ಹ್ಯಾಕ್‌ ಮಾಡಬಹುದು ಅನ್ನೊ ವಿಚಾರ ಬೆಳಕಿಗೆ ಬಂತು ಅಂತಾನೇ ಹೇಳಬಹುದು.

ಜೀನ್ಸನ್ ಜೇಮ್ಸ್ ಆಂಚೆಟಾ

ಜೀನ್ಸನ್ ಜೇಮ್ಸ್ ಆಂಚಟಾ ಅನ್ನೊ ಹೆಸರು ಹೆಚ್ಚು ಕೇಳಿ ಬಂದಿದ್ದು ಕ್ರೆಡಿಟ್ ಕಾರ್ಡ್ ಡೇಟಾ ಹ್ಯಾಕಿಂಗ್‌ನಲ್ಲಿ. ಬಾಟ್-ಸಾಫ್ಟ್ವೇರ್ ಆಧಾರಿತ ರೋಬೋಟ್‌ಗಳ ಬಳಕೆಯ ಬಗ್ಗೆ ಆಂಚೆಟಾಗಿದ್ದ ಕುತೂಹಲವೇ ಹ್ಯಾಕರ್ಸ್‌ ಆಗಲು ಪ್ರಮುಖ ಕಾರಣ ಎನ್ನಲಾಗುತ್ತದೆ. ಇವರ ಹ್ಯಾಕಿಂಗ್‌ನಿಂದ 2005 ರಲ್ಲಿ 400,000 ಕ್ಕಿಂತಲೂ ಹೆಚ್ಚು ಕಂಪ್ಯೂಟರ್‌ಗಳು ಹಾನಿಗೊಳಗಾಗಿದ್ದವು ಎನ್ನಲಾಗಿದೆ. ಈ ಕಾಣಕ್ಕಾಗಿ ಆಂಚೆಟಾರಿಗೆ 57 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು.

ಮೈಕೆಲ್ ಕಾಲ್ಸೆ

2000ನೇ ಇಷವಿಯಲ್ಲಿ “ಮಾಫಿಯಾಬಾಯ್” ಎಂದೂ ಕರೆಯಲ್ಪಡುವ 15 ವರ್ಷ ವಯಸ್ಸಿನ ಮೈಕೆಲ್ ಕಾಲ್ಸ್ ಯುನಿವರ್ಸಿಟಿ ಕಂಪ್ಯೂಟರ್‌ಗಳ ಹ್ಯಾಕ್‌ ಮಾಡಿದ್ದ ಸುದ್ದಿ ಸಾಕಷ್ಟು ಸಂಚಲನ ಮೂಡಿಸಿತ್ತು. ಯಾಹೂ ವೆಬ್‌ಸೈಟ್‌ ಮೂಲಕ ಡೆಲ್, ಇಬೇ, ಸಿಎನ್‌ಎನ್ ಮತ್ತು ಅಮೆಜಾನ್ ಸರ್ವರ್ ದಾಳಿ ನಡೆಸುವ ಮೂಲಕ ಕಾರ್ಪೊರೇಟ್ ಸರ್ವರ್‌ಗಳನ್ನು ಹ್ಯಾಕ್‌ ಮಾಡಿದ್ದರು.

ಕೆವಿನ್ ಪೋಲ್ಸೆನ್

1983 ರಲ್ಲಿ, 17 ವರ್ಷ ವಯಸ್ಸಿನ ಪೌಲ್ಸೆನ್, ಅಲಿಯಾಸ್ ಡಾರ್ಕ್ ಡಾಂಟೆಯನ್ನು ಬಳಸಿ, ಪೆಂಟಗನ್‌ ಕಂಪ್ಯೂಟರ್ ಆರ್ಪಾನೆಟ್ ಆನ್ನು ಹ್ಯಾಕ್‌ ಮಾಡಿದ್ದ. ಈತನನ್ನು ಶೀಘ್ರವಾಗಿ ಪೋಲಿಸರು ಬಂದಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ 1988 ರಲ್ಲಿ, ಪೌಲ್ಸೆನ್ ಫೆಡರಲ್ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ ಫಿಲಿಪೈನ್ಸ್, ಫರ್ಡಿನ್ಯಾಂಡ್ ಮಾರ್ಕೋಸ್ನ ಪದಚ್ಯುತ ಅಧ್ಯಕ್ಷರಿಗೆ ಸಂಬಂಧಿಸಿದಂತೆ ಫೈಲ್‌ಗಳನ್ನು ಬಹಿರಂಗ ಪಡಿಸಿದ್ದ. ಜೊತೆಗೆ 1990 ರಲ್ಲಿ, ರೇಡಿಯೋ ಸ್ಟೇಷನ್ ಗೇಂ್‌ ಅನ್ನು ಹ್ಯಾಕ್‌ ಮಾಡಿ $ 20,000 ಬಹುಮಾನ ಕೂಡ ಗೆದ್ದಿದ್ದ. ಆದರೆ ನಂತರದ ದಿನಗಳಲ್ಲಿ ಈತ ವೈಟ್‌ ಹ್ಯಾಟ್‌ ಹ್ಯಾಕಿಂಗ್‌ ಆಗಿ ಬದಲಾಗಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಷ್ಟೇ ಬ್ಯೂಸಿ ಇದ್ರು ವರ್ಕೌಟ್‌ ಮಿಸ್‌ ಮಾಡಲ್ವಂತೆ ನಟಿ ರಶ್ಮಿಕಾ ಮಂದಣ್ಣ | Rashmika Mandanna | Speed News |

Fri Feb 4 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial