ಯಾವುದೇ ಸೌಲಭ್ಯ ನೀಡದೆ 11 ಸಾವಿರ ಬಿಸಿಯೂಟ ನೌಕರರ ವಜಾ :

ಬೆಂಗಳೂರು : 60 ವರ್ಷ ಪೂರ್ಣಗೊಂಡಿದೆ ಎನ್ನುವ ಕಾರಣ ನೀಡಿ ಯಾವುದೇ ರೀತಿಯ ನಿವೃತ್ತಿ ಸೌಲಭ್ಯವನ್ನು ನೀಡದೇ ಸುಮಾರು 11 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡುವ ಮೂಲಕ ಖಂಡಿಸಿದ್ದಾರೆ.

“ಯಾವುದೇ ನಿವೃತ್ತಿ ಭತ್ಯೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡದೆ ರಾಜ್ಯದ 11 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದಶಕಗಳಿಂದ ನಮ್ಮ ಮಕ್ಕಳ ಪಾಲನೆ, ಪೋಷಣೆ ಮಾಡಿದವರನ್ನು ʼನಾಳೆಯಿಂದ ಬರುವ ಅವಶ್ಯಕತೆ ಇಲ್ಲʼ ಎಂದು ಹೇಳಲು ಮನಸ್ಸಾದರೂ ಹೇಗೆ ಬಂತು. ಅವರಿಗೆ ನಾವು ಕೃತಜ್ಞರಾಗಿರಬೇಕಲ್ಲವೇ?” ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾಗೊಳಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

ಬಿಸಿಯೂಟ ನೌಕರರ ಹಿತಾಸಕ್ತಿಯ ಬಗ್ಗೆ ಗಮನ ಸೆಳೆದಿರುವ ಅವರು, “2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ, ನಾವು ಅವರ ಬೆಂಬಲಕ್ಕೆ ನಿಲ್ಲುವುದು ಮಾತ್ರವಲ್ಲದೆ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ.” ಎಂದು ಭರವಸೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​​ ಸಿಧು ಜೈಲಿನಲ್ಲಿ ಮೊದಲ ದಿನ ಕಳೆದಿದ್ದು ಹೀಗೆ:

Sat May 21 , 2022
ಚಂಡಿಗಢ: ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೊಳಗಾಗಿ ನಿನ್ನೆಯಷ್ಟೇ ಶರಣಾಗಿರುವ ಕಾಂಗ್ರೆಸ್​​ ನಾಯಕ ನವಜೋತ್​ ಸಿಂಗ್​ ಸಿಧು ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾರೆ. ರಸ್ತೆ ಗಲಾಟೆ ಪ್ರಕರಣವೊಂದರಲ್ಲಿ ಸಿಧುಗೆ ಸುಪ್ರೀಂಕೋರ್ಟ್​​ ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಗಡುವು ನೀಡಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಪೊಲೀಸರ ಮುಂದೆ ಶರಣಾಗಿದ್ದರು. ಇದೀಗ ಪಟಿಯಾಲ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಸಿಧು ಅವರಿಗೆ ಸದ್ಯಕ್ಕೆ ಯಾವುದೇ ವಿಶೇಷ ಆತಿಥ್ಯ ನೀಡಿಲ್ಲ, ಸಾಮಾನ್ಯ ಖೈದಿಯಂತೆ ಇದ್ದಾರೆ ಎಂದು […]

Advertisement

Wordpress Social Share Plugin powered by Ultimatelysocial