ಅಯ್ಯೋ ದೇವ್ರೆ. ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ ಅಪ್ಪ ನಂತರ ಮಾಡಿದ್ದೇನು..?

Apple iPhone 12 review: raising the bar - The Verge

ನಾವು ನೀವೆಲ್ಲ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಕೊಂಡುಕೊಂಡ ನಂತರ, ಅದಕ್ಕೆ ಸಿಮ್ ಹಾಕಿ ಬಳಸಲು ಶುರು ಮಾಡ್ತೀವಿ. ಕೆಲವರು ಈ ಖುಷಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಾರೆ.

ಆದ್ರೆ ಇಲ್ಲೊಬ್ಬ ವಿಚಿತ್ರ ಮನುಷ್ಯ, ತನ್ನ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಕ್ಕಾಗಿ, ಅಂಗಡಿಯಿಂದ ಹಿಡಿದು, ಮನೆಯ ತನಕ ಬ್ಯಾಂಡ್‌ ಸಮೇತ, ಭರ್ಜರಿ ಮೆರವಣಿಗೆ ಮಾಡಿದ್ದಾನೆ.

ಮಧ್ಯ ಪ್ರದೇಶದ ಗ್ರಾಮವೊಂದರಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಮುರಾರಿ ಖುಷ್ವಾ ಎಂಬ ವ್ಯಕ್ತಿ, ತನ್ನ 5 ವರ್ಷದ ಮಗಳಿಗೆ ಸ್ಮಾರ್ಟ್ ಕೊಡಿಸುತ್ತೇನೆಂದು ಪ್ರಾಮಿಸ್ ಮಾಡಿದ್ದ. ಮತ್ತು ಆ ಸ್ಮಾರ್ಟ್ ಫೋನ್ ಖರೀದಿ ಮಾಡಿಕೊಟ್ಟ ದಿನ ಅದೇ ಅಂಗಡಿಯಿಂದ ಮನೆಯವರೆಗೆ ಭರ್ಜರಿಯಾಗಿ ಬ್ಯಾಂಡ್ ಬಾಜಾದೊಂದಿದೆ, ಅವಳನ್ನ ಚೆಂದದ ಸಾರೋಟಿನಲ್ಲಿ ಕೂರಿಸಿಕೊಂಡು, ಮೆರವಣಿಗೆ ಮಾಡುವುದಾಗಿ ಹೇಳಿದ್ದ. ಅದೇ ರೀತಿ, ತನ್ನ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ ಮುರಾರಿ, ಅಂಗಡಿಯಿಂದ ಮನೆಯವರೆಗೆ ಭರ್ಜರಿ ಮೆರವಣಿಗೆ ಮಾಡಿಸಿದ್ದಾನೆ.

ಈ ಮೆರವಣಿಗೆಯಲ್ಲಿ ಬಳಸಿದ ಸಾರೋಟಿಗೆ ಲೈಟ್‌ಗಳಿಂದ ಅಲಂಕಾರ ಮಾಡಲಾಗಿತ್ತು. ಮುರಾರಿಯ ಮಗಳು ತನ್ನ ಇಬ್ಬರು ಗೆಳೆಯರೊಂದಿಗೆ ಆ ಸಾರೋಟಿನಲ್ಲಿ ಕುಳಿತಿದ್ದಳು. ಈ ದೃಷ್ಯವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ಮೆರವಣಿಗೆ ವೇಳೆ ಕುಡಿತಕ್ಕೆ ಸಂಬಂಧಪಟ್ಟ ಹಿಂದಿ ಹಾಡೊಂದನ್ನ ಹಾಕಲಾಗಿತ್ತು. ಆ ಹಾಡು ಹಾಕಲು ಕಾರಣವೇನೆಂದರೆ, ಮುರಾರಿಗೂ ಕುಡಿತದ ಚಟವಿದೆ. ಅದಕ್ಕಾಗಿ ಅವನ ಮಗಳು, ನೀನು ಕುಡಿಯುವುದನ್ನು ಬಿಟ್ಟು, ಅದೇ ಹಣವನ್ನು ಕೂಡಿಟ್ಟು ನನಗೆ ಸ್ಮಾರ್ಟ್ ಫೋನ್ ಕೊಡಿಸು ಅಂತಾ ಹೇಳಿದ್ದಳು. ಇದಕ್ಕೆ ಒಪ್ಪಿದ ಮುರಾರಿ ಕುಡಿತವನ್ನು ಬಿಟ್ಟು, ಅದೇ ಹಣವನ್ನು ಕೂಡಿಟ್ಟು ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadada

Please follow and like us:

Leave a Reply

Your email address will not be published. Required fields are marked *

Next Post

ಪಾನಮತ್ತ ವ್ಯಕ್ತಿಯಿಂದ ಅಬಕಾರಿ ಅಧಿಕಾರಿಗಳಿಗೆ ತರಾಟೆ

Thu Dec 23 , 2021
ಚಿಲ್ಲರೆ ಮಳಿಗೆಯಲ್ಲಿ ಮದ್ಯ ತಪಾಸಣೆಗೆ ಬಂದಿದ್ದ ಅಧಿಕಾರಿಗಳನ್ನ ಪಾನಮತ ವ್ಯಕ್ತಿ ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರದ ಶ್ರೀನಿವಾಸಪುರ ಪಟ್ಟಣದ ಬಸ್ ನಿಲ್ದಾಣ ಹಿಂಭಾಗದಲ್ಲಿ ನಡೆದಿದೆ. ಚಿಲ್ಲರೆ ಮಳಿಗೆಯೊಂದರಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಮಾಹಿತಿಯ ಹಿನ್ನಲೆ ತಪಾಸಣೆ ಮಾಡಲಾಗಿದ್ದು, ತಪಾಸಣೆಗೆ ಬಂದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.  ಶ್ರೀನಿವಾಸಪುರ ತಾಲೂಕಿನೆಲ್ಲೆಡೆ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ, ಇದಕ್ಕೆ ಅಬಕಾರಿ ಇಲಾಖೆಯೆ ಕುಮ್ಮಕ್ಕು ನೀಡಿದೆಯೆಂದು ಆರೋಪ ಮಾಡಲಾಗಿದ್ದು, […]

Advertisement

Wordpress Social Share Plugin powered by Ultimatelysocial