ಪುಟ್ಟ ಹುಡುಗಿಯ ಖುಷಿಯ ಡ್ಯಾನ್ಸ್‌

 

ಮನಸ್ಸಿಗೆ ಆನಂದ ನೀಡುವ ದೃಶ್ಯವನ್ನು ಹುಡುಕುತ್ತಿದ್ದೀರಾ ? ಹಾಗಾದರೆ, ಇಲ್ಲಿರುವ ದೃಶ್ಯ ನಿಮಗೆ ಖುಷಿಯಾಗಲೂಬಹುದು. ಇದು ಪುಟ್ಟ ಬಾಲಕಿಯೊಬ್ಬಳು ಅದ್ಭುತವಾಗಿ ನೃತ್ಯ ಮಾಡುವ ದೃಶ್ಯ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರಲ್ಲೂ ಮುಗುಳ್ನಗೆ ಮೂಡಿಸಿದೆ. ಕೆಲವರು ಈ ದೃಶ್ಯವನ್ನು ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ.ಮಕ್ಕಳ ಖುಷಿಯ ಕ್ಷಣದ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಇಂತಹ ದೃಶ್ಯಗಳು ಒಂದು ಕ್ಷಣ ನಮ್ಮ ಎಲ್ಲಾ ನೋವನ್ನು ಮರೆಸಿ ಖುಷಿ ಮೂಡಿಸುತ್ತದೆ. ಹಾಗೆ ಮಂದಹಾಸ ಮೂಡಿಸುವಂತಹ ದೃಶ್ಯಗಳಲ್ಲಿ ಈ ದೃಶ್ಯವೂ ಸೇರುತ್ತದೆ. ಇಲ್ಲೊಬ್ಬಳು ಪಟಾಣಿ ಹರ್ಯಾನ್ವಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾಳೆ. ಇದು ನಿಮ್ಮ ಈ ದಿನದ ಖುಷಿಗೆ ಜತೆಯಾಗುವಂತಹ ದೃಶ್ಯ.ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೇದಿಕೆಯಲ್ಲಿ ಗಾಯಕರೊಬ್ಬರು ಹಾಡು ಹಾಡುತ್ತಿದ್ದರೆ ಅಲ್ಲೇ ನಿಂತಿರುವ ಪುಟಾಣಿ ಮ್ಯೂಸಿಕ್ ಬೀಟ್ಸ್‌ಗೆ ಸೊಂಟ ಬಳುಕಿಸುವುದನ್ನು ನೋಡಬಹುದು. ಅತ್ಯಂತ ಮನಮೋಹಕವಾಗಿ ಈ ಬಾಲಕಿ ನೃತ್ಯ ಮಾಡಿದ್ದಾಳೆ. ಈ ನೃತ್ಯಕ್ಕೆ ಗಾಯಕ ಕೂಡಾ ಜತೆಯಾಗುತ್ತಾರೆ. ದಿಶು ಯಾದವ್ ಎಂಬ ಪುಟ್ಟ ಬಾಲಕಿಯ ಖುಷಿಯ ನೃತ್ಯದ ದೃಶ್ಯವಿದು. ಈ ಪುಟಾಣಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಗಾಯಕ ಅಜಯ್ ಹೂಡಾ ಈ ಹಾಡನ್ನು ಹಾಡುತ್ತಿದ್ದರೆ ದಿಶು ಯಾದಮ್ ಕುಣಿದು ಆನಂದಿಸಿದ್ದಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು!

Mon Jan 9 , 2023
ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ದುಷ್ಕರ್ಮಿಗಳು ಮಾರುತಿ ಸ್ವಿಫ್ಟ್ ಕಾರು ಹರಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮುತ್ತುರಾಯನಗರದಲ್ಲಿ ನಡೆದಿದೆ.ಮುತ್ತುರಾಯ ನಗರದ ಸಪ್ತಗಿರಿ ಲೇಔಟ್ ನಲ್ಲಿ ಜನವರಿ 7 ರ ಬೆಳಗ್ಗೆ 11 ಗಂಟೆಗೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾರೆ.ಸದ್ಯ ಆರೋಪಿಗಳು ನಾಯಿ ಮೇಲೆ ಕಾರು ಹರಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

Advertisement

Wordpress Social Share Plugin powered by Ultimatelysocial