ದತ್ತಾತ್ರೇಯ ಅರಳಿಕಟ್ಟೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಕಲಾವಿದರು.

ದತ್ತಾತ್ರೇಯ ಅರಳಿಕಟ್ಟೆ ಅವರು ಸಲಾಖೆಗೊಂಬೆಯಾಟದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಕಲಾವಿದರು.ದತ್ತಾತ್ರೇಯ ಅರಳಿಕಟ್ಟೆ 1953ರ ಫೆಬ್ರವರಿ 22ರಂದು, ಶೃಂಗೇರಿ ಸಮೀಪದ ಅರಳೀಕಟ್ಟೆ ಎಂಬಲ್ಲಿ ಜನಿಸಿದರು. ತಂದೆ ಅರಳೀಕಟ್ಟೆ ರಾಮರಾಯರು ಮತ್ತು ತಾಯಿ ಲಲಿತಮ್ಮನವರು.ದತ್ತಾತ್ರೇಯರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ., ಬಿ.ಎಡ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಎಡ್. ಪದವಿ ಪಡೆದು ಆಧ್ಯಾಪನ ನಡೆಸಿದರು. ಜೊತೆಗೆ ಗೊಂಬೆಯಾಟದಲ್ಲಿನ ಅಪಾರ ಸಾಧನೆ ಅವರ ಜೊತೆ ಜೊತೆಗೆ ಸಾಗಿ ಬಂತು.ವಿದ್ಯಾರ್ಥಿ ದೆಸೆಯಿಂದಲೇ ದತ್ತಾತ್ರೇಯ ಅವರಿಗೆ ರಂಗಭೂಮಿಯ ನಂಟು ಬೆಳೆಯಿತು. ಜೊತೆಗೆ ಗೊಂಬೆಯಾಟದ ಬಗ್ಗೆ ಅಪಾರ ಆಸಕ್ತಿ ಬೆಳೆಯಿತು. ಸುಮಾರು 8-10 ಕೆ.ಜಿ. ತೂಗುವ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೊಳಪಡಿಸಿ, ಸಂಗೀತ, ನೃತ್ಯ, ನಾಟಕದ ಮತ್ತು ಸರಳ ಮಾತುಗಾರಿಕೆಗಳ ಮೂಲಕ ನೋಡುಗರಿಗೆ ಕಥಾನಕವನ್ನು ಬಿಂಬಿಸುವ ಕಲೆಯಲ್ಲಿ ದತ್ತಾತ್ರೇಯ ಅವರದು ಬಹು ದೊಡ್ಡ ಸಾಧನೆ. ಗೊಂಬೆಯಾಟ ಕಲೆಯ ಮಹಾನ್ ಸಾಧಕರಾದ ಎಂ.ಆರ್. ರಂಗನಾಥ್‌ರಾವ್ ಅವರೇ ಇವರ ಗುರುಗಳು.ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಗೊಂಬೆಯಾಟದ ಕರಿತು ಸಂಶೋಧನೆ ನಡೆಸಿದ ದತ್ತಾತ್ರೇಯರು ಸ್ಥಾಪಿಸಿದ್ದು ‘ಪುತ್ಥಳಿ’ ಕಲಾರಂಗ. ಒಂದು ಕಾಲದಲ್ಲಿ ಮನೆಮನೆಯ ಮಾತಾಗಿದ್ದ ಗೊಂಬೆಯಾಟ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಾ ಬಂತು. ಈ ಪುರಾತನ ಕಲೆಯನ್ನು ಜೀವಂತವಾಗಿರಿಸಲು ಪ್ರಯತ್ನಗಳು ನಡೆಯುತ್ತಲೇ ಇದ್ದು, ಆ ನಿಟ್ಟಿನಲ್ಲಿ ಪುತ್ಥಳಿ ಕಲಾರಂಗ ಸಂಚಾರಿ ಸೂತ್ರಗೊಂಬೆಯಾಟ ಮಾಡಿರುವ ರಂಗಶಾಲೆಯ ಕೆಲಸ ಮಹತ್ವದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ವೈಶಿಷ್ಟ್ಯತೆಯನ್ನು ವಿಶೇಷವಾಗಿ ಕಟ್ಟಿಕೊಡಲಿದೆ ‘ಹೈನ’ ಚಿತ್ರ - ವೆಂಟಕ್ ಭಾರಧ್ವಾಜ್ ನಿರ್ದೇಶನದಲ್ಲಿ ಮತ್ತೊಂದು ವಿಭಿನ್ನ ಸಿನಿಮಾ

Wed Feb 22 , 2023
ನಿರ್ದೇಶಕ ವೆಂಕಟ್ ಭಾರಧ್ವಾಜ್ ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಹೈನ ಎಂದು ಶೀರ್ಷಿಕೆ ಇಡಲಾಗಿದ್ದು, ‘ಹೈನ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಕಳೆದವಾರ ಸೆಟ್ಟೇರಿರುವ ಹೈನ ಚಿತ್ರ ಕಂಟೆಂಟ್ ಬೇಸ್ಡ್ ಚಿತ್ರವಾಗಿದ್ದು ಸಂಪೂರ್ಣ ನವ ಕಲಾವಿದರ ತಾರಾಗಣವನ್ನೊಳಗೊಂಡಿದೆ. ಚೆನೈನ ಕಪಾಲೇಶ್ವರ ದೇವಸ್ಥಾನದಲ್ಲಿ ‘ಹೈನ’ ಚಿತ್ರ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ. ಡೆಡ್ಲಿ ಸ್ಕ್ವಾಡ್ ಅಡಿ ಬರಹವಿರುವ ಈ ಚಿತ್ರದಲ್ಲಿ ಭಾರತದ ಮಣ್ಣಿನ ಸೊಗಡನ್ನು ವಿಶೇಷವಾಗಿ ಛಲ, […]

Advertisement

Wordpress Social Share Plugin powered by Ultimatelysocial