ಧಾರವಾಡದಲ್ಲಿ ಅನಧಿಕೃತ ವೋಟರ್ ಐಡಿ ಸೃಷ್ಠಿ, ಝರಾಕ್ಸ್ ಅಂಗಡಿ ಮೇಲೆ ದಾಳಿ, ಮಹ್ಮದ್ ಅಲಿ ಬಂಧನ*

ಧಾರವಾಡ…-ಭಾರತ ಸರಕಾರದ
ಚುನಾವಣಾ ಆಯೋಗದ ವೆಬ್‌ಸೈಟ್ ಬಳಸಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬುಧವಾರ ಮಧ್ಯಾಹ್ನ
ಬಂಧಿಸಿದ್ದಾರೆ.
ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್‌ನಲ್ಲಿರುವ ಎಂಜೆಆರ್ ಝರಾಕ್ಸ್ ಸೆಂಟರ್‌ನ ಮಹ್ಮದ್‌ಅಲಿ ಎಂಬಾತನೇ ಬಂಧಿತ ಆರೋಪಿ. ಈತ ಚುನಾವಣಾ ಆಯೋಗದ ವೆಬ್‌ಸೈಟ್ ಬಳಕೆ ಮಾಡಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ. ಈ ರೀತಿಯ ವೋಟರ್‌ ಐಡಿ ಪಡೆದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಲು ಬಂದಾಗ ಅದು ತಹಶೀಲ್ದಾರ ಕಚೇರಿಯಿಂದ ಪೂರೈಕೆ ಮಾಡಲಾದ ಅಧಿಕೃತ ವೋಟರ್ ಐಡಿ ಅಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಸ್ವತಃ ತಹಶೀಲ್ದಾರ ಸಂತೋಷ ಹಿರೇಮಠ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸಿದ್ದು, ಮಹ್ಮದ್‌ಅಲಿ ಅವರ ಝರಾಕ್ಸ್ ಅಂಗಡಿಗೆ ಭೇಟಿ ನೀಡಿದ ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಸೈಬರ್ ಕ್ರೈಂ ಠಾಣೆಯ ಪೊಲೀಸರು ಅಂಗಡಿಯಲ್ಲಿ ಪರಿಶೀಲನೆ ನಡೆಸಿ, ಅಲ್ಲಿದ್ದ ಪ್ರಿಂಟರ್‌ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಬೈಟ್ ಇನ್ನು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ವೋಟರ್ ಐಡಿ ಅಷ್ಟೇ ಅಲ್ಲ
ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲಾಧ್ಯಂತ ಕೇವಲ ವೋಟರ್ ಐಡಿ ನಕಲಿ ತಯಾರಿಕೆ ಅಷ್ಟೇ ಅನೇಕ ಅವ್ಯಾಹತವಾಗಿ ಅವ್ಯವಹಾರಗಳು ನಡೆಯುತ್ತಲೇ ಇವೆ. ಈ ಹಿಂದೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನಲ್ಲಿ ನೆರೆ ಹಾವಳಿ ಹಿಂದೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಸುಮಾರು ,50 ಲಕ್ಷ ರೂಪಾಯಿ ಗುಳಂ ಸಹ ಮಾಡಲಾಗಿತ್ತು. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೃದ್ಯಾಪ ವೇತನ, ಅಂಗವಿಕಲೇಚನ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಸಹಾಯ ಸೇರಿದಂತೆ ಅನೇಕ ಯೋಜನೆಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಧಾರವಾಡ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಲ್ಲಿ ಎರಡು ವಾರಗಳಲ್ಲಿ 340 ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳು ವರದಿಯಾಗಿವೆ

Wed Jul 20 , 2022
ಗ್ಯಾಸ್ಟ್ರೋಎಂಟರೈಟಿಸ್ ಅಥವಾ ಹೊಟ್ಟೆ ಜ್ವರ, ಕರುಳಿನ ಉರಿಯೂತ (ಕೆರಳಿಕೆ) ಎಂದು ಕರೆಯಬಹುದು. ಇದು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಅಥವಾ ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹರಡುತ್ತದೆ. ಸಾಮಾನ್ಯ ಲಕ್ಷಣಗಳೆಂದರೆ ಅತಿಸಾರ, ವಾಂತಿ ಮತ್ತು ಜ್ವರ. ಜೂನ್‌ನಲ್ಲಿ ನಗರದಲ್ಲಿ 543 ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳು ವರದಿಯಾಗಿವೆ. ಗ್ಯಾಸ್ಟ್ರೋಎಂಟರೈಟಿಸ್‌ನ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ವಿವರಿಸುತ್ತಾ, ಅಪೊಲೊ ಸ್ಪೆಕ್ಟ್ರಾದ ಆಂತರಿಕ ಔಷಧ ತಜ್ಞರಾದ ಡಾ ತುಷಾರ್ ರಾಣೆ, “ಮಾನ್ಸೂನ್ ಸಮಯದಲ್ಲಿ ಇದು ಸಾಮಾನ್ಯ ಘಟನೆಯಾಗಿದೆ. […]

Advertisement

Wordpress Social Share Plugin powered by Ultimatelysocial