ಮತದಾರರ ಸೆಳೆಯಲು ಪಕ್ಷದ ನಾಯಕರು ಈಗ ಸಮಾವೇಶ ಮೂಲಕ ಜನರ ಮನಗೆಲ್ಲಲು ತಂತ್ರ ಹೆಣೆದಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ..! ಮತದಾರರ ಸೆಳೆಯಲು ಪಕ್ಷದ ನಾಯಕರು ಈಗ ಸಮಾವೇಶ ಮೂಲಕ ಜನರ ಮನಗೆಲ್ಲಲು ತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್, ಕೂಡ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಜಾಧ್ವನಿ ಯಾತ್ರೆ ಮೂಲಕ ಕಹಳೆ ಮೊಳಗಿಸಿದೆ. ಕಮಲ ಕೋಟೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ಪ್ರಜಾಧ್ವನಿ ಯಾತ್ರೆ ನಡೆಸಿ, ಪಿಎಂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರಕಾರದ ಕೆಲಸವನ್ನೆ ನಾವು ಮಾಡಿದ್ದೆವೆಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದು, ಅವರ ಮನೆ ಹಾಳಾಗ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವೈ.ಓ-1: ಹೌದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆ ಇಂದು ಸಹ ಮುಂದುವರೆದಿದೆ. ಗಿರಿಗಳ ನಾಡು ಯಾದಗಿರಿಗೆ ಕಾಲಿಟ್ಟಿರೋ ಬಸ್ ಯಾತ್ರೆ ಶುರರ ನಾಡು ಸುರಪುರದಲ್ಲಿ ಕೈ ನಾಯಕರು ಶಕ್ತಿ ಪ್ರದರ್ಶನ ನಡೆಸಿದ್ರು.. ಸುರಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಹುಣಸಗಿ ತಾಲೂಕಿನ ನಾರಾಯಣಪುರ ಜಲಾಶಯಕ್ಕೆ ಅಳವಡಿಸಿದ್ದ ಸ್ವಯಂ ಚಾಲಿತ ಸ್ಕಾಡಾ ಗೇಟ್ ಗಳನ್ನು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದು ಉದ್ಘಾಟನೆ ಮಾಡುವ ಮೂಲಕ 2023 ರಾಜ್ಯ ವಿಧಾನಸಭಾ ಚುನಾವಣೆಯ ರಣ ಕಹಳೆ ಮೊಳಗಿಸಿದ್ರು. ಮೋದಿ ಮಿಂಚಿನ ಸಂಚಾರ ನಡೆಸಿದ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಮಾಲ್ ಮಾಡಿತು.
ಸಿದ್ದರಾಮಯ್ಯ ಆಗಮಿಸಿ ಸುರಪುರ ಕ್ಷೇತ್ರದಿಂದ ಚುನಾವಣೆ ಡಂಗೂರ ಸಾರಿದ್ರು.. ಅದ್ರಲ್ಲೂ ಕಂದಾಯ ಸಚಿವ ಆರ್.ಅಶೋಕ್ ಗ್ರಾಮವಾಸ್ತವ್ಯ ಮಾಡಿದ್ದ ದೇವತ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲೇ ಕೈ ನಾಯಕರ ಪ್ರಜಾಧ್ವನಿ ಯಾತ್ರೆಯ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ರು..
ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವತ್ಕಲ್ ಗ್ರಾಮ, ಕಕ್ಕೇರಾ, ವಜ್ಜಲ್, ಶಾಂತಪುರ, ಯಡಳ್ಳಿ ಗ್ರಾಮ ದಲ್ಲಿ ಕುರುಬ ಸಮಾಜ ಹೆಚ್ಚಿರುವ ಕಾರಣಕ್ಕೆ ಕೈ ನಾಯಕರು ದೇವತ್ಕಲ್ ಗ್ರಾಮದಲ್ಲೇ ಪ್ರಜಾಧ್ವನಿ ಶಕ್ತಿ ಪ್ರದರ್ಶನ ಮಾಡುವ ಮೂಲಕ
ಕುರುಬ ಸಮಾಜದ ಮತಗಳನ್ನು ಹಿಡಿದಿಟ್ಟುಕೊಳ್ಳಲು ಮುಂದಾದ್ರು. ಇನ್ನು ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ನಾರಾಯಣಪುರ ಡ್ಯಾಂ ಕಟ್ಟಿದ್ದು ಕಾಂಗ್ರೇಸ್ ನವರು, ಆದ್ರೆ
ಬಿಜೆಪಿಯವರು ನಮ್ಮ ನೀರು ನೀವು ಕುಡಿಯುತ್ತಿದ್ದೀರಾ ನಮ್ಮ ನೀರು ಕೃಷಿಗೆ ಬಳಸುತ್ತಿದ್ದೀರಾ ಎಂದು ಹೇಳಿದರು.ಅಷ್ಟೆ ಅಲ್ಲಾ ರಾಜ್ಯ ಬಿಜೆಪಿ ವಿರುದ್ಧ ಕೆಂಡಾ ಮಂಡಲರಾದ್ರು. ಸುರಪುರ ನಾಯಕರು ಈ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆದ್ರೆ ಬಿಜೆಪಿ ನಾಯಕರಿಗೆ ಸುರಪುರ ನಾಯಕರು ಕಿತ್ತೂರು ರಾಣಿ ಚೆನ್ನಮ್ಮ, ಬೇಳವಡಿ ಮಲ್ಲಮ್ಮ,ಒನಕೆ ಒಬ್ಬವ ಕಾಣೋದಿಲ್ಲ. ಬೇರೆ ರಾಜ್ಯದ ನಾಯಕರು ಕಾಣುತ್ತಾರೆ. ನಿಮಗೆ ಅಭಿಮಾನಾ ಅನ್ನೊದು‌ ಇದ್ದರೆ ಸುರಪುರ ನಾಯಕರ ಫೋಟೊ ವಿಧಾನಸೌಧದಲ್ಲಿ ಹಾಕಿ ಎನ್ನುವ ಮೂಲಕ ಪರೋಕ್ಷವಾಗಿ ವೀರ ಸಾವರ್ಕರ್ ವಿಚಾರ ಪ್ರಸ್ತಾಪ ಮಾಡಿದರು. ಇನ್ನು ಸ್ಕಾಡಾ ಗೇಟ್ ವಿಚಾರವಾಗಿ ಮಾತನಾಡಿದ್ದು, ಬಿಜೆಪಿಯವರೆ ಕಳ್ಳತನ ಮಾಡೋದಾದ್ರೆ ಚೆನ್ನಾಗಿ ಕಳ್ಳತನ ಮಾಡಿ ಎಂದು ಬಿಜೆಪಿ ವಿರುದ್ದ ವ್ಯಂಗ್ಯವಾಡಿದ್ರು.

ಬೈಟ್:- ಎಂ.ಬಿ. ಪಾಟೀಲ ( ಮಾಜಿ ಸಚಿವ)

ವೈ.ಓ-2: ಹೌದು ರಾಜ್ಯದಲ್ಲಿ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಸಾಕಷ್ಟು ಯೋಜನೆಗಳು ಜಾರಿಗೆ ತಂದಿದ್ದೇನೆ. ಕೊಟ್ಟ ಮಾತಿನಂತೆ ಭರವಸೆ ಈಡೆರಿಸಿದ್ದೇನೆ. ಬಸವರಾಜ್ ಬೊಮ್ಮಾಯಿ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ ಭ್ರಷ್ಟಾಚಾರದ ಸರ್ಕಾರವಾಗಿದೆ. ಇಂದು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಕೆಲಸದ ಬಗ್ಗೆ ಹೇಳಿದ್ದಾರೆ ಅವರ ಭಾಷಣದಲ್ಲೂ ಬಿಜೆಪಿ‌ ಸುಳ್ಳು ಹೇಳಿಸಿದೆ ಇದನ್ನು ನಾನು ಓದಿದ್ದೇನೆ.. ಬೊಮ್ಮಾಯಿ ಅವರಿಗೆ ನಾನು‌ ನೇರವಾಗಿ ಕರೆದಿದ್ದೆನೆ ನಿಮಗೆ ತಾಕತ್ತಿದ್ದರೆ ಬನ್ನಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಒಂದೆ ವೇದಿಕೆ ಮೇಲೆ ಚರ್ಚೆ ಮಾಡೋಣ ನಿಮಗೆ ಸಾಬಿತು ಮಾಡಲು ಆಗಲಿಲ್ಲ ಅಂದರೇ ರಾಜೀನಾಮೆ ಕೊಟ್ಟು ಹೋಗಿ, ಒಂದು ವೇಳೆ ಸಾಬಿತು ಪಡೆದಿದ್ದರೆ ನಾನು ರಾಜೀನಾಮೆ ಕೊಡುತ್ತೆನೆ ಎಂದ್ರು. ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದ ಸ್ಕಾಡಾ ಗೇಟ್ ಯೋಜನೆ ಈಗಾಲೇ ಚಾಲನೆ ಯಲ್ಲಿದೆ, ಐದು ವರ್ಷದ ಹಿಂದೆಯೆ ಗೇಟ್ ಓಪ್ ಆಗಿದೆ, ರಾಜುಗೌಡ ನಿನಗೆ ಬುದ್ದಿ ಇದೆಯಾ ಪ್ರಧಾನಿ ಅವರನ್ನು ಕರೆತಂದು ಅದನ್ನು ಉದ್ಘಾಟನೆ ಮಾಡಿಸಿದ್ರಿ ಮಾನಾ ಮರೆಯಾದಿ ಇದೆಯಾ ಎಂದ್ರು..

ಬೈಟ್:- ಸಿದ್ದರಾಮಯ್ಯ ಮಾಜಿ ಸಿಎಂ.

ವೈ.ಓ-3: ಇನ್ನು ಕಾರ್ಯ ಕ್ರಮದ ವೇಳೆ ವೇದಿಕೆ ಮೇಲೆಯೆ ನಿಂಗಣ್ಣ ಬಾಚಿಮಟ್ಟಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಸಹೋದರ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ರು, ಮತ್ತೊಂದು ಕಡೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದ ಹಿನ್ನಲೆಯಲ್ಲಿ ಕಲಾವಿದ ಸಿದ್ದರಾಮ ಎನ್ನುವ ಅಕ್ಕಿಯಲ್ಲಿ ಸಿದ್ದರಾಮಯ್ಯ ಭಾವಚಿತ್ರ ಬಿಡಿಸಿ ಕಾಣಿಕೆ ನೀಡಿದ್ರು, ಅಷ್ಟೇ ಅಲ್ಲಾ ಇಲ್ಲೂ ಕೂಡ ಸಿದ್ದರಾಮಯ್ಯ ಗೆ ಗ್ರಾಮಸ್ಥರು ಟಗರು ನೀಡುವ ಮೂಲಕ ಅಭಿಮಾನ ಮೆರೆದರು. ಮತ್ತೆ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರನ್ನು ಗೆಲ್ಲಿಸಬೇಕೆಂದು ಜನರಲ್ಲಿ ವಿನಂತಿ ಮಾಡಿದ್ರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶದಲ್ಲಿ ಲಕ್ಷ ಕೋಟಿ ಹೂಡಿಕೆಗೆ ಮುಂದಾದ ಅಂಬಾನಿ, ಬಿರ್ಲಾ

Sat Feb 11 , 2023
ಲಕ್ನೋ: ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಉದ್ಯಮ ಕ್ಷೇತ್ರದ ಹಲವು ಮಂದಿ ದಿಗ್ಗಜರು ರಾಜ್ಯದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವ ಆಶ್ವಾಸನೆ ನೀಡಿದ್ದಾರೆ. ಉತ್ತರ ಪ್ರದೇಶವನ್ನು “ಇಡೀ ವಿಶ್ವಕ್ಕೆ ಭಾರತ ನಿರೀಕ್ಷೆಯ ಕೇಂದ್ರವಾಗಿ ಹೊರಹೊಮ್ಮಿದಂತೆ ಇಡೀ ಭಾರತಕ್ಕೆ ಉತ್ತರಪ್ರದೇಶ ನಿರೀಕ್ಷೆಯ ಕೇಂದ್ರ” ಎಂದು ಬಣ್ಣಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 75 ಸಾವಿರ ಕೋಟಿ ಹೂಡಿಕೆ ಮಾಡುವ […]

Advertisement

Wordpress Social Share Plugin powered by Ultimatelysocial