‘ಏಕ್ ಲವ್ ಯಾ’ ಸಿನಿಮಾ ರಿಲೀಸ್ ಮುಂದೂಡಿಕೆ;

ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಮುಂತಾದ ನಿರ್ಬಂಧಗಳ ಹೇರಿಕೆಯಿಂದ ಚಿತ್ರೋದ್ಯಮದ ವಹಿವಾಟು ಕುಸಿಯಲಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕ ಮುಂದೂಡಿಕೊಳ್ಳುತ್ತಿವೆ.

ಜೋಗಿ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ ಕೂಡ ಇದೇ ನಿರ್ಧಾರಕ್ಕೆ ಬಂದಿದೆ.

ರಾಣಾ, ರಚಿತಾ ರಾಮ್ ​, ರೇಷ್ಮಾ ನಾಣಯ್ಯ ಮುಖ್ಯಭೂಮಿಕೆ ನಟಿಸಿರುವ ಈ ಸಿನಿಮಾದ ರಿಲೀಸ್​ ದಿನಾಂಕ ಸಹ ಮುಂದೂಡಿಕೆ ಆಗಿದೆ.

ಈ ಸಂಬಂಧ ವಿಡಿಯೋ ರಿಲೀಸ್ ಮಾಡಿರುವ ನಿರ್ದೇಶಕ ಪ್ರೇಮ್, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿ 21ರಂದು ‘ಏಕ್​ ಲವ್​ ಯಾ’ ತೆರೆಗೆ ಬರಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಕಲೆಕ್ಷನ್​ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ‘ಏಕ್​ ಲವ್​ ಯಾ’ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಿದ್ದಾರೆ. ‘ಕೊವಿಡ್​ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿ, ಎಲ್ಲ ಸಮಸ್ಯೆಗಳು ಪರಿಹಾರ ಆದಮೇಲೆ ಹೊಸ ಡೇಟ್​ ಅನೌನ್ಸ್​ ಮಾಡುತ್ತೇನೆ’ ಎಂದು ಪ್ರೇಮ್​ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಪೇಂದ್ರ ಚಿತ್ರರಂಗಕ್ಕೆ ಬಂದು 33 ವರ್ಷ;

Fri Jan 7 , 2022
ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಉಪೇಂದ್ರ ಚಿತ್ರರಂಗಕ್ಕೆ ಪರಿಚಯವಾಗಿ ಇಂದಿಗೆ ಬರೋಬ್ಬರಿ 33 ವರ್ಷಗಳಾಗಿವೆ. ಉಪೇಂದ್ರ ಮೊದಲ ಬಾರಿಗೆ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ ‘ಅನಂತನ ಅವಾಂತರ’ ಸಿನಿಮಾ ಬಿಡುಗಡೆ ಆಗಿ (1989) ಇಂದಿಗೆ ಹದಿಮೂರು ವರ್ಷಗಳಾಗಿವೆ. ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ಹಾಡೊಂದರಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ‘ಕಮಾನ್ ಕಮಾನ್ ಕಾಮಣ್ಣ’ ಎಂಬ ಹಾಡಿನಲ್ಲಿ ಉಪೇಂದ್ರ ಕಾಮರಾಜನ ಪಾತ್ರದಲ್ಲಿ ನಟಿಸಿದ್ದರು. ತಮಾಷೆಯಾಗಿದ್ದ ಈ ಹಾಡಿನಲ್ಲಿ […]

Advertisement

Wordpress Social Share Plugin powered by Ultimatelysocial