ದಾವಣಗೆರೆಯ ಕಾಂಗ್ರೆಸ್‌ ನಾಯಕಿಯ ಹಾಟ್‌ ಫೋಟೋ ವೈರಲ್‌.

 

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಅವರದ್ದು ಎನ್ನಲಾದ ಹಾಟ್ ಪೋಟೋಗಳು ಈಗ ವೈರಲ್‌ ಆಗಿದ್ದು, ಎಲ್ಲರ ಮೊಬೈಲ್‌ನಲ್ಲೂ ಹರಿದಾಡುತ್ತಿವೆ. ಇದರಿಂದ ಚುನಾವಣೆ ವೇಳೆ ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಸವಿತಾಬಾಯಿ ಅವರಿಗೆ ಇರಿಸುಮುರುಸು ಉಂಟಾಗಿದೆ.ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಸವಿತಾಬಾಯಿ ಅವರು ಈ ಹಿಂದೆ ನಟಿಯಾಗಿಯೂ ವೃತ್ತಿ ನಿರ್ವಹಿಸಿದ್ದಾರೆ. ಮಾಜಿ ಸಿಎಂ ಜೆಎಚ್ ಪಟೇಲ್ ಅವರ ಊರು ಕಾರಿಗನೂರು ಸವಿತಾಬಾಯಿ ಊರಾಗಿದ್ದು, ಮಾಡೆಲಿಂಗ್ ಕ್ಷೇತ್ರದ ಹಿನ್ನೆಲೆ ಹೊಂದಿರುವ ಇವರು ಅಮೆರಿಕ, ಯುರೋಪ್‌ಗಳಲ್ಲಿ ಹಲವು ಉತ್ಪನ್ನಗಳ ಮಾಡೆಲಿಂಗ್‌ ಕೂಡ ಮಾಡಿದ್ದಾರೆ. ಅವೇ ಫೋಟೋಗಳು ಈಗ ವೈರಲ್‌ ಆಗಿವೆ ಎನ್ನಲಾಗಿದೆ.ರಾಜಕೀಯ ಕಾರಣಕ್ಕಾಗಿ ಈ ಫೋಟೋಗಳನ್ನು ಎಡಿಟ್‌ ಮಾಡಿ ಬಿಡಲಾಗಿದೆ ಎಂದು ಸವಿತಾಬಾಯಿ ಅವರು ಸ್ಪಷ್ಟಪಡಿಸಿದ್ದಾರೆ. ಅವುಗಳು ನನ್ನ ಪೋಟೊ ಅಲ್ಲ. ಅವು ಎಡಿಟೆಡ್ ಪೋಟೋಗಳು‌, ನಾನು ಮಾಯಕೊಂಡ ಕ್ಷೇತ್ರದಲ್ಲಿ ಹೆಚ್ಚು ಬೆಳೆಯುತ್ತಿದ್ದೇನೆ. ಮೂರೇ ವರ್ಷದಲ್ಲಿ ಹೆಚ್ಚು ಜನಪ್ರಿಯವಾಗಿದ್ದೇನೆ ಎಂಬ ಹೊಟ್ಟೆಕಿಚ್ಚು ಕೆಲವರಿಗಿದೆ. ಇಂತಹ ಕೆಟ್ಟ ಮನಸ್ಥಿತಿವುಳ್ಳ ರಾಜಕಾರಣಿಗಳ ನಡುವೆ ಇದ್ದು ಜನರ‌ ಮನಸ್ಸು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಫೆ.24 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ,

Fri Feb 24 , 2023
ದೇಶದ ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ 24ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 24 ರಂದು ಕೂಡ ಕಚ್ಚಾ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ದೇಶದ ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ 24ರಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಿದೆ.ಫೆಬ್ರವರಿ 24 ರಂದು ಕೂಡ ಕಚ್ಚಾ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಹಲವು ತಿಂಗಳುಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಫೆಬ್ರವರಿ 24 […]

Advertisement

Wordpress Social Share Plugin powered by Ultimatelysocial