ಸೋಂಕಿತರು-ಸಾವಿನ ಸಂಖ್ಯೆಯಲ್ಲಿ ಏರಿಕೆ, ದೇಶದಲ್ಲಿ 1,72,433 ಹೊಸ ಪ್ರಕರಣ, 1,008 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ನಡುವೆ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಅಧಿಕವಾಗಿದೆ. 1,72,433 ಹೊಸ ಪ್ರಕರಣಗಳು ವರದಿಯಾಗಿದೆ. ನಿನ್ನೆಗಿಂತ ಶೇಕಡಾ 6.8ರಷ್ಟು ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 1,008 ಮಂದಿ ಮೃತಪಟ್ಟಿದ್ದಾರೆ.ಕಳೆದೊಂದು ದಿನದಲ್ಲಿ 2,59,107 ಮಂದಿ ಗುಣಮುಖರಾಗಿದ್ದಾರೆ.ಇದುವರೆಗೆ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,98, 983 ಆಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 15,33,921 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಂಕಿಅಂಶ ತಿಳಿಸಿದೆ.ಪ್ರತಿದಿನ ದೇಶದಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರ ದರ ಶೇಕಡಾ 10.99ರಷ್ಟು ಇದೆ. ಇನ್ನು ಭಾರತದಲ್ಲಿ ನಿನ್ನೆ ಒಂದೇ 15,69,449 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 73,41,92,614 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.ದೇಶದಲ್ಲಿ ಇದುವರೆಗೆ 167.87 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಥರ್ವನ ಅವತಾರದಲ್ಲಿ ಎಂ.ಎಸ್.ಧೋನಿ: ಇದ್ಯಾಯ ಸಿನಿಮಾ!

Thu Feb 3 , 2022
ಕ್ರಿಕೆಟಿಗ ಎಂಎಸ್ ಧೋನಿಗೂ ಸಿನಿಮಾ ರಂಗಕ್ಕೂ ಹತ್ತಿರದ ಸಂಬಂಧವೇ ಇದೆ. ಎಂ.ಎಸ್.ಧೋನಿ ಕುರಿತಾಗಿ ಈಗಾಗಲೇ ಸಿನಿಮಾ ಸಹ ಆಗಿದೆ. ಎಂ.ಎಸ್.ಧೋನಿ ಸಹ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಧೋನಿ ಯಾವುದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.ಈ ನಡುವೆ ಎಂಎಸ್ ಧೋನಿ ವೀರ ಯೋಧನ ಅವತಾರದಲ್ಲಿರುವ ಪೋಸ್ಟರ್‌ಗಳು, ಮೋಷನ್ ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಎಂಎಸ್ ಧೋನಿ ಸಿನಿಮಾ ನಟನೆ ಆರಂಭಿಸಿದರೆ ಎಂಬ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸ್ವತಃ ಎಂಎಸ್ ಧೋನಿ ‘ಅಥರ್ವ’ ಹೆಸರಿನ ತಮ್ಮದೇ ಗ್ರಾಫಿಕ್ […]

Advertisement

Wordpress Social Share Plugin powered by Ultimatelysocial