ಟೆಕ್ಸಾಸ್‌ನಲ್ಲಿ ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ ಟ್ರಕ್‌ನಲ್ಲಿ ಹೆಣದ ರಾಶಿ ಪತ್ತೆ.

 

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರ್ಯಾಕ್ಟರ್-ಟ್ರೇಲರ್ ರಿಗ್‌ನಲ್ಲಿ 46 ಮೃತದೇಹಗಳು ಪತ್ತೆಯಾಗಿದೆ. ಇನ್ನೂ 16 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ರೈಲು ಹಳಿಗಳ ಬಳಿ ಈ ಟ್ರಕ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದ್ರೆ, ಈ ಬಗ್ಗೆ ಸ್ಯಾನ್ ಆಂಟೋನಿಯೊ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಟ್ರಕ್‌ನಲ್ಲಿದ್ದವರು ಅಮೆರಿಕದ ದಕ್ಷಿಣ ಟೆಕ್ಸಾಸ್‌ಗೆ ಅಕ್ರಮವಾಗಿ ವಲಸೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಅವರು ಮುಚ್ಚಿದ ಟ್ರಕ್‌ನಲ್ಲಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ತೋರುತ್ತದೆ ಎನ್ನಲಾಗಿದೆ. ಅಧಿಕಾರಿಗಳು ಲಾರಿ ತಪಾಸಣೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಟ್ರಕ್‌ ಪತ್ತೆಯಾಗಿದೆ. ಇದರಲ್ಲಿ 46 ಜನ ಸಾವನ್ನಪ್ಪಿದ್ದಾರೆ. ಇನ್ನೂ, 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರು ಎಲ್ಲಿಯವರು ಎಂದು ಇನ್ನೂ ತಿಳಿದುಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದ್ರೆ, ಅವರು ಮಾನವ ಕಳ್ಳಸಾಗಣೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ಮೆಕ್ಸಿಕೋದಿಂದ US ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಸಾವಿರಾರು ಮಂದಿಯಲ್ಲಿ ಇದು ಅತ್ಯಂತ ಮಾರಣಾಂತಿಕ ದುರಂತವಾಗಿದೆ. 2017 ರಲ್ಲಿ ಸ್ಯಾನ್ ಆಂಟೋನಿಯೊದಲ್ಲಿನ ವಾಲ್‌ಮಾರ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನೊಳಗೆ ಸಿಲುಕಿ ಹತ್ತು ವಲಸಿಗರು ಸಾವನ್ನಪ್ಪಿದರು. 2003 ರಲ್ಲಿ, 19 ವಲಸಿಗರು ಸ್ಯಾನ್ ಆಂಟೋನಿಯೊದ ಆಗ್ನೇಯ ಟ್ರಕ್‌ನಲ್ಲಿ ಕಂಡುಬಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಪೇಂದ್ರ 'UI' ಶೂಟಿಂಗ್ ಶುರು:

Tue Jun 28 , 2022
  ನಟ ನಿರ್ದೇಶಕ ಉಪೇಂದ್ರ ಬ್ರೇಕ್ ಬಳಿಕ ಮತ್ತೆ ನಿರ್ದೇಶಕನ ಹ್ಯಾಟ್ ತೊಟ್ಟಿದ್ದಾರೆ.‌ ಉಪೇಂದ್ರ ಕಥೆ ಬರೆದು, ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಅಲ್ಲಿಂದಲೇ ನಿರೀಕ್ಷೆಗಳು ಹುಟ್ಟಿ ಕೊಳ್ಳುತ್ತವೆ. ಮತ್ತೆ ನಿರ್ದೇಶಕನ ಮಾಡಲು ಮುಂದಾಗಿರುವ ಉಪೇಂದ್ರ ಟೈಟಲ್ ಮತ್ತು ಪೋಸ್ಟರ್ ಗಳಿಂದಲೇ ಸಾಕಷ್ಟು ಕುತೂಹಲದ ಜೊತೆಗೆ, ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಕೊನೆಗೆ ಸಿನಿಮಾ ಟೈಟಲ್ ‘ಯುಐ’ ಎನ್ನುವುದು ಅರ್ಥವಾಗಿದೆ.‌ ‘ನೀನು ನಾನು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಹೊಸ ಕಥೆ ಹೇಳಲು […]

Advertisement

Wordpress Social Share Plugin powered by Ultimatelysocial