ಉತ್ತರ ಕನ್ನಡ: ರಾಜ್ಯದ ಮತ್ತೊಂದು ಮಹಾನ್ ಚೇತನ ನಮ್ಮಿಂದ ದೈಹಿಕವಾಗಿ ಮರೆಯಾಗಿದೆ!

 

ಉತ್ತರ ಕನ್ನಡ: ರಾಜ್ಯದ ಮತ್ತೊಂದು ಮಹಾನ್ ಚೇತನ ನಮ್ಮಿಂದ ದೈಹಿಕವಾಗಿ ಮರೆಯಾಗಿದೆ. ನಮ್ಮ ನಿಮ್ಮ ನಡುವೆ ಪರಿಸರ   ಪ್ರಜ್ಞೆಯಂತೆ   ಜೀವಿಸುತ್ತಿದ್ದ ಪರಿಸರ ಸಂರಕ್ಷಕ  ಇಂದು ಅಮರರಾಗಿದ್ದಾರೆ.’ರಾಜ್ಯೋತ್ಸವ’   ಪ್ರಶಸ್ತಿ   ಪುರಸ್ಕೃತ  ಪರಿಸರ ತಜ್ಞ, ಜಾನಪದ ಕಲಾವಿದ ಜೊಯಿಡಾ ತಾಲ್ಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವ ಬುದೋ ವೇಳಿಪ ನಿಧನರಾಗಿದ್ದಾರೆ. 92 ವರ್ಷದ ಇವರು ಇಂದು ಬೆಳಗ್ಗೆ ನಿಧನರಾದರು. ಇಂದು ಅವರೇ ಅಂತ್ಯಕ್ರಿಯೆಯು ಕಾರ್ಟೋಳಿಯಲ್ಲಿ ನಡೆಯಲಿದೆ ಅಂತ ಕುಟುಂಬದ ಮೂಲಗಳು ತಿಳಿಸಿವೆ. ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿಯವರಾದ ಅವರು, ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಅವರ ಸಾಧನೆಯನ್ನು ಪರಿಗಣಿಸಿ 2021ರ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ರಾಜ್ಯ ಸರ್ಕಾರ ಗೌರವಿಸಿತ್ತು. ಈ ಪುರಸ್ಕಾರಕ್ಕೆ ಜೊಯಿಡಾ ತಾಲ್ಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಗೂ ಅವರು ಭಾಜನರಾಗಿದ್ದರು.ಪರಿಸರದ ಬಗ್ಗೆ ಅಪಾರ ಅನುಭವಮಹಾದೇವ ವೇಳಿಪ ಅವರು ಮೂಲತಃ ಕೃಷಿ ಕುಟುಂಬದಿಂದ ಬಂದವರು. ಉತ್ತರ ಕನ್ನಡದಲ್ಲಿ ಸಹಜವಾಗಿ ಬೆಳೆಸಲಾಗುವ ಅಡಿಕೆ, ಬಾಳೆ, ತೆಂಗು, ಕಾಳ ಮೆಣಸು, ಹಲವು ಔಷಧಿ ಗುಣವುಳ್ಳ ಸಸ್ಯಗಳು, ಗೆಡ್ಡೆಗೆಣಸುಗಳು ಇತ್ಯಾದಿಗಳನ್ನು ಮನೆಯಲ್ಲಿ ಬೆಳೆಯುತ್ತಿದ್ದರು. ತೋಟ, ಗದ್ದೆ, ಬೆಟ್ಟ, ಹೊಲ, ಅರಣ್ಯದಲ್ಲೆಲ್ಲ ಓಡಾಡಿ, ಮರ, ಗಿಡ, ಹಕ್ಕಿ, ಪ್ರಾಣಿಗಳೊಂದಿಗೆ ಬೆರೆತು ಸಹಜವಾಗಿಯೇ ಪರಿಸರದ ಬಗ್ಗೆ ಪ್ರೀತಿ, ಪರಿಸರದ ಬಗ್ಗೆ ಅಪಾರ ಅನುಭವ ಇತ್ತು.ಹಕ್ಕಿಗಳ ಕೂಗಿನಿಂದ ಸಮಯ ಹೇಳುತ್ತಿದ್ದ ಮೇಧಾವಿ!
ಮಹಾದೇವ ವೇಳಿಪ ಅವರಿಗೆ ಯಾವ ಹಕ್ಕಿಯ ಕೂಗು ಹೇಗಿರುತ್ತದೆ, ಯಾವ ಹಕ್ಕಿ ಯಾವಾಗ ಕೂಗುತ್ತದೆ, ಯಾಕೆ ದನಿ ಬದಲಿಸುತ್ತದೆ ಎಂಬ ಬಗ್ಗೆ ಅಪಾರ ಮಾಹಿತಿ ಇತ್ತು. ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವುದು ಅವರಿಗೆ ಕರತಗವಾಗಿತ್ತು ಎಂದರೆ ನಿಮಗೆ ಆಶ್ಚರ್ಯ ಆಗಬಹುದು.
ಕಾಡಿನಲ್ಲಿ ಮಾನವ ಹಸ್ತಕ್ಷೇಪಕ್ಕೆ ಭಾರೀ ವಿರೋಧಅರಣ್ಯ, ಮರ, ಗಿಡ, ಪ್ರಾಣಿ ಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಹಾದೇವ ವೇಳಿಪ ಅವರು, ಅದರ ಸಂರಕ್ಷಣೆಗೂ ಪಣ ತೊಟ್ಟಿದ್ದರು. ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ಅವರು ವಿರೋಧಿಸುತ್ತಿದ್ದರು. ಪರಿಸರ ಸಮತೋಲನದಲ್ಲಿ ಉಣುಗು (ಉಣ್ಣಿ), ಉಂಬಳಗಳೂ ಮಹತ್ವದ ಪಾತ್ರ ಹೊಂದಿವೆ, ಅವುಗಳನ್ನು ನಾಶ ಮಾಡಬಾರದು ಎಂದು ತಿಳಿವಳಿಕೆ ಮೂಡಿಸುತ್ತಿದ್ದರು. ಜೇನುನೊಣಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. 38 ಜಾತಿಯ ಗೆಡ್ಡೆ, ಗೆಣಸುಗಳನ್ನು ಗುರುತಿಸುವುದನ್ನು ಅವರು ಅರಿತಿದ್ದರು.ಬುಡಕಟ್ಟು ಸಂಸ್ಕೃತಿ ಉಳಿಸುವಲ್ಲಿಯೂ ಮಹತ್ವದ ಪಾತ್ರಪರಿಸರ ಸಂರಕ್ಷಣೆಯ ಜೊತೆಗೆ ಕಲೆ, ಸಂಸ್ಕೃತಿಗೂ ಮಹಾದೇವ ವೇಳಿಪ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ಹಲವು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬುಡಕಟ್ಟು ಕುಣಬಿ ಸಂಸ್ಕೃತಿಯ ಬಗ್ಗೆ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಅವರ ಮುಂಜಾವು ಪ್ರಾರಂಭವಾಗುವುದೇ ಬುಡಕಟ್ಟು ಸಂಸ್ಕೃತಿಯ ಹಾಡುಗಳನ್ನು ಹಾಡುತ್ತ.2021ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಮಹಾದೇವ ವೇಳಿಪ ಅವರು ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಪರಿಸರ ಕಾಳಜಿ ಅಪಾರ ಜ್ಞಾನವನ್ನ ಪರಿಗಣಿಸಿ 2021ರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ರಾಜ್ಯ ಸರ್ಕಾರ ಗೌರವಿಸಿತ್ತು. ಈ ಪುರಸ್ಕಾರಕ್ಕೆ ಜೊಯಿಡಾ ತಾಲ್ಲೂಕಿನಿಂದ ಪಾತ್ರರಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಗೂ ಅವರು ಪಾತ್ರರಾಗಿದ್ದರು.ಇದೀಗ ಹಿರಿಯ ಚೇತನ ನಮ್ಮಿಂದ ದೈಹಿಕವಾಗಿ ಅಗಲಿದ್ದರೂ, ಅವರ ಕಾರ್ಯಗಳಿಂದ ಸದಾ ನೆನಪಿನಲ್ಲೇ ಇರುತ್ತಾರೆ. ಮಹಾದೇವ ವೇಳಿಪ ಅವರ ನಿಧನಕ್ಕೆ ರಾಜ್ಯದ ಗಣ್ಯರು, ಪರಿಸರ ಪ್ರಿಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಸುದೀಪ್ ಹೃದಯ ವೈಶಾಲ್ಯಕ್ಕೆ ಈಗಾಗಲೇ ಹಲವು ಸಾಕ್ಷಿಗಳಿವೆ.

Thu Feb 10 , 2022
ನಟ ಸುದೀಪ್ ಹೃದಯ ವೈಶಾಲ್ಯಕ್ಕೆ ಈಗಾಗಲೇ ಹಲವು ಸಾಕ್ಷಿಗಳಿವೆ. ಹಲವಾರು ಮಂದಿಗೆ ಸುದೀಪ್ ಸ್ವತಃ ತಾವೇ ಹಾಗೂ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ.ಅಪಘಾತವೊಂದಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿದ್ದ ಬಾಲಕಿಗೆ ವಿಡಿಯೋ ಕರೆ ಮಾಡಿ ಸುದೀಪ್ ಮಾತನಾಡಿದ್ದರು.ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದರು. ಆದರೆ ಆ ಬಾಲಕಿ ನಿಧನರಾಗಿದ್ದಾರೆ.ಚೆನ್ನಾಗಿ ಆಟವಾಡಿಕೊಂಡು ಇದ್ದ ಪ್ರತಿಭಾವಂತ ಬಾಲಕಿ ಮೇಲೆ ಮರದ ಕೊಂಬೆ ಬಿದ್ದು ಬಾಲಕಿ ಕಳೆದ ಎರಡು ವರ್ಷದಿಂದಲೂ […]

Advertisement

Wordpress Social Share Plugin powered by Ultimatelysocial