ದೀಪ್ತಿ ನಾವಲ್ ಚಿತ್ರರಂಗದಲ್ಲಿ ಕೆಲವೊಂದು ಕಲಾವಿದೆ.

ಚಿತ್ರರಂಗದಲ್ಲಿ ಕೆಲವೊಂದು ಕಲಾವಿದರು, ಅಭಿನಯಿಸುತ್ತಾರೆ ಎಂದೇ ಅನಿಸದಿರುವ ಹಾಗೆ ಸಹಜವಾದ ನಮ್ಮ ಅಕ್ಕಪಕ್ಕದ ಮನೆಯಲ್ಲಿರುವಂತಹ ಸಹಜ ಸರಳ ವ್ಯಕ್ತಿಗಳೇನೋ ಅನಿಸಿಬಿಡುತ್ತಾರೆ. ಅಂಥ ಆಪ್ತ ಭಾವ ಮೂಡಿಸಿದವರಲ್ಲಿ ಕಲಾವಿದೆ ದೀಪ್ತಿ ನಾವಲ್ ಒಬ್ಬರು. ಈಕೆ ನನ್ನ ಮೆಚ್ಚಿನ ನಟಿಯರಲ್ಲಿ ಒಬ್ಬರು.ದೀಪ್ತಿ ನಾವಲ್ 1952ರ ಫೆಬ್ರವರಿ 3ರಂದು ಅಮೃತಸರದಲ್ಲಿ ಜನಿಸಿದರು. ಅವರ ತಂದೆಯವರಿಗೆ ನ್ಯೂಯಾರ್ಕಿನ ಸಿಟಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಹುದ್ದೆ ದೊರೆತ ಕಾರಣ ಅಲ್ಲಿಗೆ ತೆರಳಿದರು. ದೀಪ್ತಿ ಹಂಟರ್ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ ಗಳಿಸಿದರು.ದೀಪ್ತಿ ನಾವಲ್ 1978ರಲ್ಲಿ ಶ್ಯಾಮ್ ಬೆನಗಲ್ ಅವರ ‘ಜುನೂನ್’ ಚಿತ್ರದಲ್ಲಿ ಅಭಿನಯಿಸಿದರು. ಎರಡು ವರ್ಷಗಳ ನಂತರ ‘ಏಕ್ ಬಾರ್ ಫಿರ್’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್ ಅವರಂತೆಯೇ ಕಲಾತ್ಮಕ ಚಿತ್ರಗಳ ಪಾತ್ರಧಾರಿಯಾಗಿ 1984ರ ‘ಕಮಲ’ 1985ರ ‘ಅನ್ಕಹಿ’ ಅಂತಹ ಚಿತ್ರಗಳಲ್ಲಿ ಅಭಿನಯಿಸಿದರು. 1981ರಲ್ಲಿ ಬಂದ ‘ಚಶ್ಮೆ ಬದ್ದೂರ್’ ಇಂದ ಮೊದಲುಗೊಂಡಂತೆ, ಸಾತ್ ಸಾತ್, ಕಿಸಿ ಸೇ ನ ಕೆಹನಾ, ಕಥಾ, ರಂಗ್ ಬಿರಂಗಿ, ಫಾಸ್ಲೆ ಮಂತಾದ ಅನೇಕ ಚಿತ್ರಗಳಲ್ಲಿ ಫರೂಕ್ ಶೇಕ್ ಮತ್ತು ದೀಪ್ತಿ ನಾವಲ್ ಜೋಡಿ ಅಪಾರ ಜನಪ್ರಿಯತೆ ಗಳಿಸಿತ್ತು. ಮುಂದೆ ಮೂರು ದಶಕಗಳ ನಂತರ ಈ ಜೋಡಿ 2011ರಲ್ಲಿ ‘ಟೆಲ್ ಮಿ ಓ ಖುದಾ’, 2013ರ ‘ಲಿಸನ್ ಅಮಯಾ’ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು.ದೀಪ್ತಿ ಅವರು ಕೆಲವೊಂದು ಸಮಯ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆದಾಗ ಕಲೆಯ ಇತರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. 2000ದ ವರ್ಷದ ಸುಮಾರಿಗೆ ಬಾವಂದರ್, ಫಿರಾಕ್ ಚಿತ್ರಗಳಲ್ಲಿ ಅಭಿನಯಿಸಿದ ದೀಪ್ತಿ, ‘ಲೀಲಾ’, ‘ಮೆಮೊರಿಸ್ ಇನ್ ಮಾರ್ಚ್’, ‘ಲಿಸನ್ ಅಮಯಾ’, ‘ಮಿರ್ಚ್ ಮಸಾಲ’ ಮುಂತಾದ ಚಿತ್ರಗಳ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ.

Sat Feb 4 , 2023
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಟಿಪ್ಪು ಜಯಂತಿ ಮಾಡಿದ್ದ ಎಐಎಮ್‌ಐಎಮ್ ಪಕ್ಷದ ಮುಖಂಡನ ತಲೆದಂಡ ಎಐಎಮ್‌ಐಎಮ್ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿದ್ದ ವಿಜಯ ಗುಂಟ್ರಾಳ ಉಚ್ಛಾಟಣೆ ಅಸಾದುದ್ದೀನ್ ಓವೈಸಿ ನಿರ್ದೇಶನದಂತೆ ವಿಜಯ ಗುಂಟ್ರಾಳ ಉಚ್ಚಾಟನೆ ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ ರಾಜ್ಯ ಕಾರ್ಯದರ್ಶಿ ಲತೀಫ್‌ಖಾನ್ ಪಠಾಣ್ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯ ಗುಂಟ್ರಾಳ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial