ರಸ್ತೆ ದಾಟಲು ಶಾಂತವಾಗಿ ಕಾಯುವ ಜಿಂಕೆ ಇದು ನಮಗೂ ಪಾಠ.

ಟ್ರಾಫಿಕ್ ರೂಲ್ಸ್‌ ಪಾಲನೆ ಬಹಳ ಮುಖ್ಯ. ಆದರೆ, ನಮ್ಮಲ್ಲಿ ಕೆಲವರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು ಕೂಡಾ ಇದೆ. ಇದರಿಂದ ಅಪಘಾತ, ಪೊಲೀಸರಿಂದ ದಂಡದ ಶಿಕ್ಷೆ ಸೇರಿದಂತೆ ನಾನಾ ಕಷ್ಟಗಳೂ ಎದುರಾಗುವುದು ಕೂಡಾ ಹೊಸದೇನೂ ಅಲ್ಲ. ಆದರೆ, ಇಲ್ಲೊಂದು ಕಡೆ ಜಿಂಕೆ ಸಂಚಾರ ನಿಯಮವನ್ನು ಪಾಲಿಸಿದೆ.! ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ.ಪ್ರಾಣಿಗಳ ಜೀವನಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಕುತೂಹಲಕಾರಿ ಹಾಗೂ ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ ನಮಗೆ ಕಾಣಸಿಗುತ್ತವೆ. ಸಹಜವಾಗಿಯೇ ಈ ದೃಶ್ಯಗಳು ನಮ್ಮನ್ನು ಸೆಳೆಯುತ್ತವೆ. ಇದು ಕೂಡಾ ಅದೇ ಸಾಲಿಗೆ ಸೇರುವ ದೃಶ್ಯ. ಇಲ್ಲೊಂದು ಜಿಂಕೆ ವಾಹನ ಸಂಚಾರ ನಿಲ್ಲುವ ತನಕ ಶಾಂತವಾಗಿ ಕಾದು ಬಳಿಕ ರಸ್ತೆ ದಾಟಿದೆ. ಅಡ್ಡಾದಿಡ್ಡಿ ಓಡಿ ತಾನೂ ಸಂಕಷ್ಟಕ್ಕೆ ಗುರಿಯಾಗದೆ, ವಾಹನ ಸವಾರರನ್ನೂ ಸಂಕಟಕ್ಕೆ ದೂಡದೆ ಈ ಜಿಂಕೆ ತೋರಿದ ಶಾಂತತೆ ಎಲ್ಲರಿಗೂ ಇಷ್ಟವಾಗಿದೆ.ರೆಡ್ಡಿಟ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ರಸ್ತೆ ಬದಿಯಲ್ಲಿ ಜಿಂಕೆಯೊಂದು ನಿಂತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ವಾಹನಗಳೂ ವೇಗವಾಗಿ ಸಾಗುತ್ತಿರುವುದು ಕಾಣುತ್ತದೆ. ಆದರೆ, ರಸ್ತೆ ದಾಟಲು ಸಿದ್ಧವಾಗಿದ್ದ ಈ ಜಿಂಕೆ ಅವಸರ ಮಾಡುವುದಿಲ್ಲ. ಬದಲಾಗಿ, ಶಾಂತವಾಗಿಯೇ ರಸ್ತೆ ಪಕ್ಕದಲ್ಲಿ ನಿಂತು ವಾಹನಗಳು ನಿಲ್ಲುವ ತನಕ ಕಾದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಮ್ ಚರಣ್ ಅಭಿಮಾನಿಗಳಿಗೆ ಸಿಹಿ ಸುದ್ದಿ:

Fri Feb 24 , 2023
ಟಾಲಿವುಡ್‌ ನಟ ರಾಮ್ ಚರಣ್ ಲುಗು ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. 2009ರಲ್ಲಿ ತೆರೆ ಕಂಡ ರಾಮ್‌ಚರಣ್‌ ಅವರ ಮಗಧೀರ ಸಿನಿಮಾ  ಮಾರ್ಚ್ 27ರಂದು ಅವರ ಜನುಮದಿನದ ಅಂಗವಾಗಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಇದನ್ನು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.ಗುರುವಾರ, ಫೆಬ್ರವರಿ 23ರಂದು, ಗೀತಾ ಆರ್ಟ್ಸ್ ರಾಮ್ ಚರಣ್ ಅವರ 2009ರ ಮಗಧೀರ ಹಿಟ್ ಸಿನಿಮಾವನ್ನು ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಚಿತ್ರಮಂದಿರಗಳಲ್ಲಿ […]

Advertisement

Wordpress Social Share Plugin powered by Ultimatelysocial